ಇದೇ ದಿ. 29.07.2024 ರಂದು ರಾಮದುರ್ಗ ತಾಲೂಕಿನ ಶ್ರೀ ಕ್ಷೇತ್ರ ಜಾಗೃತ ವೀರಭದ್ರೇಶ್ವರ ದೇವಸ್ಥಾನ ಗೊಡಚಿ, ಇಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಸ್ಕೌಟ್ ಮಾಸ್ಟರ ಮತ್ತು ಗೈಡ್ ಕ್ಯಾಪ್ಟನ್ ಗಳ ಮೂಲ ತರಬೇತಿ ಶಿಬಿರವು ಪ್ರಾರಂಭಗೊಂಡಿತು.
ಸ್ಕೌಟ್ ಮತ್ತು ಗೈಡ್ ಧ್ವಜಾರೋಹಣದೊಂದಿಗೆ ಶಿಬಿರವನ್ನು ಪ್ರಾರಂಭಿಸಲಾಯಿತು. ನಂತರ ವೇದಿಕೆ ಕಾಯ೯ಕ್ರಮದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಸಹ ನಿದೇ೯ಶಕರು ಹಾಗೂ ಪದನಿಮಿತ್ತ ಕಾಯ೯ದಶಿ೯ಗಳು, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಳಗಾವಿ ವಿಭಾಗ ಬೆಳಗಾವಿ ಸಕ್ರೆಪ್ಪಗೌಡ. ಬಿರಾದಾರ ಆಗಮಿಸಿದ್ದರು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವು ಬೇರೆಯವರ ತಪ್ಪನ್ನು ಎತ್ತಿ ತೋರಿಸದೆ ನಮ್ಮನ್ನು ನಾವು ತಿದ್ದಿಕೊಳ್ಳಬೇಕೆಂದು ಹೇಳುತ್ತಾ ಸೇವೆಗಾಗಿ ಬಾಳಿ ಎಂದು ಹೇಳಿದರು.
ಜಿಲ್ಲಾ ಮುಖ್ಯ ಆಯುಕ್ತರು ಗಜಾನನ ಮನ್ನಿಕೇರಿ ಕಾಯ೯ಕ್ರಮದ ಕುರಿತು ಮಾತನಾಡುತ್ತಾ, ಎಲ್ಲರೂ ಒಳ್ಳೆಯ ತರಬೇತಿ ಪಡೆದುಕೊಂಡು ಶಾಲೆಯಲ್ಲಿ ಘಟಕಗಳನ್ನು ಕಡ್ಡಾಯವಾಗಿ ಪ್ರಾರಂಭಿಸುವಲ್ಲಿ ಪ್ರಯತ್ನಿಸಬೇಕೆಂದು ಹೇಳಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆರ್. ಟಿ. ಬಳಿಗಾರ ಮಾತನಾಡಿ ಜಿ. ಪಿ. ಟಿ ಶಿಕ್ಷಕರ ಮೇಲೆ ಸರಕಾರ ಉತ್ತಮ ಭರವಸೆಯನ್ನು ಇಟ್ಟಿದೆ. ಆ ಭರವಸೆಯನ್ನು ಉಳಿಸಿಕೊಳ್ಳಿ ಎಂದು ಹೇಳಿದರು.
ಕಾಯ೯ಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸವದತ್ತಿ ಹಾಗೂ ಜಿಲ್ಲಾ ಆಯುಕ್ತರು ಸ್ಕೌಟ್ ಎಂ. ಎನ್ ದಂಡಿನ, ಶಿಬಿರದ ನಾಯಕರಾದ ಎಸ್. ಎಚ್. ಶಿವಶಂಕರಪ್ಪ ಶ್ರೀಮತಿ. ಎಲ್. ಎಸ್. ಬಹಾದ್ದೂರಿ, ದೈಹಿಕ ಶಿಕ್ಷಣ ಪರೀಕ್ಷಕರಾದ ಎಲ್. ಆರ್. ಕನಕಪ್ಪನವರ, ಎನ್. ಎನ್. ಕಬ್ಬೂರ, ಎನ್. ಜಿ. ಪಾಟೀಲ, ಎನ್. ಬಿ. ಗುಡಸಿ ಉಪಸ್ಥಿತರಿದ್ದರು. ಶಿಬಿರದಲ್ಲಿ 116 ಸ್ಕೌಟ್ ಮಾಸ್ಟರ 75 ಗೈಡ್ ಕ್ಯಾಪ್ಟನ್ ಗಳು ಭಾಗವಹಿಸಿದ್ದರು.
ಜಿಲ್ಲಾ ಸಂಘಟನಾ ಶಿಕ್ಷಕರು ರಾಜಕುಮಾರ ಕುಂಬಾರ ಕಾಯ೯ಕ್ರಮ ನಿರೂಪಿಸಿದರು. ಡಿ. ಬಿ. ಅತ್ತಾರ ಸ್ವಾಗತಿಸಿದರು.ಕಾಯ೯ದಶಿ೯ ಎಂ. ಎನ್. ಗವನ್ನವರ . ವಂದಿಸಿದರು.