ಬೀದರ -ರಾಮ ಭಕ್ತಿ ಬೇರೆ ಅಲ್ಲ ರಾಷ್ಟ್ರ ಭಕ್ತಿ ಬೇರೆ ಅಲ್ಲ.ರಾಮ ಮತ್ತು ರಾಷ್ಟ್ರವನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಹಾಗೂ ಅಯೋಧ್ಯೆಯ ಶ್ರೀ ರಾಮ ಮಂದಿರದ ಉಸ್ತುವಾರಿ ಗೋಪಾಲ್ ಜಿ ಅಭಿಪ್ರಾಯ ವ್ಯಕ್ತಪಡಿಸಿದರು..
ಗಡಿ ಜಿಲ್ಲೆ ಬೀದರ ನಲ್ಲಿ ಹನುಮಾನ್ ಜಯಂತಿ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ಜಿ ಮಾತನಾಡಿದರು.
ನಮ್ಮ ಉದ್ದೇಶ ಕೇವಲ ರಾಮ ಮಂದಿರ ನಿರ್ಮಾಣ ಮಾಡುವುದಲ್ಲ ಸಂಪೂರ್ಣ ದೇಶವನ್ನು ಸಮೃದ್ಧ ರಾಮ ರಾಜ್ಯವನ್ನಾಗಿ ಮಾಡುವುದಾಗಿದೆ ಎಂದು ಹೇಳಿದರು..
ಈ ದೇಶದ ಎಲ್ಲಾ ಉದ್ಯೋಗ ಹಿಂದುಗಳಧ್ದಾಗಬೇಕು ದೇಶದ ಉದ್ಯೋಗ ವ್ಯವಹಾರ ಜಗತ್ತಿನಾದ್ಯಂತ ಪಸರಿಸಬೇಕು. ನಾವು ಪರಾಕ್ರಮ ತೋರಿಸಬೇಕು. ಸತ್ಯದ ದಾರಿಯಲ್ಲಿ ನಡೆಯುವುದು ಪರಾಕ್ರಮ, ದೇಶಕ್ಕೆ ಅವಮಾನವಾದಾಗ ಸಿಡಿಯುವುದು ಪರಾಕ್ರಮ, ಗೋಹತ್ಯೆಯನ್ನು ತಡೆಯುವುದು ನಿಜವಾದ ಪರಾಕ್ರಮ. ನಾವು ಯಾರ ಮೇಲೂ ಆಕ್ರಮಣ ಮಾಡುವುದಿಲ್ಲ ಆದರೆ ನಮ್ಮ ಮೇಲೆ ಯಾರಾದರೂ ಆಕ್ರಮಣ ಮಾಡಿದರೆ ನಾವು ಬಿಡೋದಿಲ್ಲ ಎಂದರು.
ನಮ್ಮ ರಾಮರಾಜ್ಯದಲ್ಲಿ ಬಡವ, ಶ್ರೀಮಂತ, ಜಾತಿಭೇದವಿಲ್ಲ, ಮೇಲು ಕೀಳು ಇಲ್ಲ. ಲಿಂಗ ಭೇದವಿಲ್ಲ ಇಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವುದೇ ರಾಮರಾಜ್ಯ ಎಂದು ನುಡಿದರು.
ರಜಾಕಾರರ ಹಾವಳಿಯನ್ನು ನಿಲ್ಲಿಸಿ ಈ ಭಾಗಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನೆಲ ಬೀದರದಲ್ಲಿ ಹನುಮಾನ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸ. ಹನುಮಂತನ ಆದರ್ಶ ಧೈರ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗೋಪಾಲ ಜೀ ಹೇಳಿದರು.
ವರದಿ : ನಂದಕುಮಾರ ಕರಂಜೆ, ಬೀದರ