spot_img
spot_img

ಕತ್ತಲೆ ಓಡಿಸುವ ದೀಪಗಳ ಹಬ್ಬ ದೀಪಾವಳಿ

Must Read

- Advertisement -

ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಸಾಮಾಜಿಕ ಸಂದೇಶ ಸಾರುವ ವಿಶೇಷ ಅರ್ಥ ಇದೆ. ಕಾಲ ಋತುಮಾನಕ್ಕೆ ಅನುಗುಣವಾಗಿ ಸೃಷ್ಟಿಯ ಸಮನ್ವಯತೆ ಜೊತೆ ಲೋಕ ನೀತಿ ಸಾರುವ ಸಮಷ್ಟಿ ತತ್ವ ಹೊಂದಿದೆ. ಈ ದೀಪಾವಳಿ ಹಬ್ಬ ಅಶ್ವಿಜ ಮಾಸದ ತೃಯೋದಶಿಯಿಂದ  ಹಬ್ಬ ಪ್ರಾರಂಭವಾಗುತ್ತದೆ. ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ.

ಹಾಗಂತೆಯೇ ದೀಪಾವಳಿ ಭಾರತ ಮತ್ತು ಪ್ರಪಂಚದಾದ್ಯಂತ ಆಚರಿಸಲಾಗುವ ಪ್ರಪಂಚದಾದ್ಯಂತ ಜನರು ಬಹಳ ಉತ್ಸಾಹ ಮತ್ತು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಹಿಂದೂಗಳ ಹಬ್ಬವಾಗಿದ್ದರೂ ಸಹ ಸಮಾಜದ ಎಲ್ಲ ವರ್ಗದ ಜನರು ಒಂದೆಡೆ ಸೇರಿ ಪಟಾಕಿ ಸಿಡಿಸಿಸಂಭ್ರಮಿಸುತ್ತಾರೆ.

ಹಾಗೇ. ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಮರಳಿದ ದಿನ.

- Advertisement -

ಈ ಹಬ್ಬವನ್ನು ಸಿಖ್ ಧರ್ಮದಲ್ಲಿ ಅವರ ಆರನೇ ಸಿಖ್ ಗುರು ಹರಗೋಬಿಂದ್ ಜೈಲಿನಿಂದ ಬಿಡುಗಡೆ ಮಾಡಿದ ದಿನವೆಂದು ಸ್ಮರಿಸಲಾಗುತ್ತದೆ.

ಜಲಪೂರ್ಣ ತ್ರಯೋದಶಿಯಿಂದ ದೀಪಾವಳಿ ಹಬ್ಬ ಪ್ರಾರಂಭವಾಗುತ್ತದೆ.

ಕೊಡ ಅಥವ ಬಿಂದಿಗೆಯಲ್ಲಿ ನೀರು ತುಂಬಿ, ಅದಕ್ಕೆ ಅರಿಶಿನ ಕುಂಕುಮದಿಂದ ಸಿಂಗರಿಸಿ, ಗೆಜ್ಜೆ ವಸ್ತ್ರ, ಹೂಗಳಿಂದ ಪೂಜೆ ಮಾಡಿ ತುಪ್ಪದ ದೀಪ ಬೆಳಗಿ, ಅನ್ನ  ಪಾಯಸದ ನೈವೇದ್ಯ ಮಾಡಿ, ಗಂಗೆಗೇ  ಪೂಜೆ ಮಾಡಬೇಕು. ಮರುದಿನ ಅದೇ ನೀರಿನಿಂದ ಅಂದರೆ ಚತುರ್ದಶಿ ದಿನ ಎಣ್ಣೆ ಸ್ನಾನ ಮಾಡಬೇಕು. ತೃಯೋದಶಿ ಸಂಜೆ ಸೂರ್ಯಾಸ್ತದ ನಂತರ ಅಪಮೃತ್ಯು ಬಾರದಿರಲಿ ಎಂದು ದಕ್ಷಿಣ ದಿಕ್ಕಿಗೆ ದೀಪ ಹಚ್ಚಿ, ಯಮದೇವಗೆ ಅಪಮೃತ್ಯುವಿನಿಂದ ಪಾರು ಮಾಡು ಎಂದು ಪ್ರಾರ್ಥನೆ ಮಾಡಬೇಕು.

- Advertisement -

ಕಾರ್ತಿಕಸ್ಯಾಸಿತೇ ಪಕ್ಷೇ ತ್ರಯೋದಶ್ಯಾಂ ನಿಶಾಮುಖೇ ।

ಯಮದೀಪಂ ಬಹಿರ್ದದ್ಯಾದಪಮೃತ್ಯುರ್ವಿನಿಶ್ಯತಿ ।। – ಸ್ಕಂದಪುರಾಣ

ಅರ್ಥ: ಕಾರ್ತಿಕ ಮಾಸದ ಕಡು ಹದಿನೈದು ದಿನಗಳ ತ್ರಯೋದಶಿಯ ಸಂಜೆ ಯಮದೇವನಿಗೆ ಮನೆಯ ಹೊರಗೆ ದೀಪವನ್ನು ಇಡುವುದರಿಂದ ಅಕಾಲಿಕ ಮರಣವು ದೂರವಾಗುತ್ತದೆ.

ನರಕ ಚತುರ್ದಶಿ 

ಈ ದಿನದ ವಿಶೇಷ ಎಂದರೆ ಶ್ರೀ ಕೃಷ್ಣನು ನರಕಾಸುರ ಎಂಬ ರಕ್ಕಸನನ್ನು ಕೊಂದು ೧೬೦೦೦ ಸ್ತ್ರೀಯರನ್ನು ಬಿಡುಗಡೆಗೋಳಿಸಿದ ದಿನ. ಈ ದಿನ ತೈಲಾಭ್ಯಂಗ ಸ್ನಾನ ಮಾಡುವವರಿಗೆ ನರಕದ ಬಾಧೆ ತಟ್ಟವುದಿಲ್ಲ ಎಂದು ವರ ಕೇಳಿದ ಆ ಅಸುರ.. ರುಕ್ಮಿಣೀದೇವಿ ಶ್ರೀ ಕೃಷ್ಣನಿಗೆ ಆರತಿ ಎತ್ತಿ ಅರಮನೆಗೆ ಸ್ವಾಗತಿಸಿ ತೈಲಾಭ್ಯಂಗ ಮಾಡಿಸುತ್ತಾಳೆ.

ಅರುಣೋದಯದಲಿ ಎದ್ದು ನಕ್ಷತ್ರಗಳು ಕಾಣುವ ವೇಳೆಯಲ್ಲಿ ಅಂದರೆ ನಸುಕಿನ ಜಾವ 4 ಗಂಟೆಗೆ ಎದ್ದು ಪರಿಸರ ಶುದ್ದಿ ಮಾಡಿ ಬಾಗಿಲಿಗೆ ರಂಗೋಲಿ ಇಟ್ಟು,  ತುಳಸಿದೇವಿ ಮತ್ತು ದೇವರ ಕೋಣೆಯಲ್ಲಿ ದೀಪ ಬೆಳಗಿಸಿ, ಎಲ್ಲರೂ ಹೊಸ ವಸ್ತ್ರ ಧರಿಸಿ ಆರತಿ ಮಾಡಬೇಕು.. ಮನೆಯಲ್ಲಿ  ಪುರುಷರು, ಹಿರಿಯರು, ಮಕ್ಕಳು ಎಲ್ಲರಿಗೂ ಮನೆಯ  ಹೆಣ್ಣುಮಕ್ಕಳು  ಆರತಿ ಎತ್ತಿ, ಚಿನ್ನದ ಉಂಗುರವನ್ನು ಕೊಬ್ಬರಿ ಎಣ್ಣೆಯಲ್ಲಿ ಅದ್ದಿ ಎಣ್ಣೆ ಹಚ್ಚಬೇಕು, ಆಮೇಲೆ ಎಲ್ಲರೂ ಅಭ್ಯಂಗ ಸ್ನಾನ ಮಾಡಬೇಕು

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |

ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||

ಎಂದು ಹೇಳಿ ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.

ಇನ್ನು ಅಮಾವಾಸ್ಯೆ ದಿನ ಮನೆಯನ್ನು ತಳಿರು ತೋರಣ ದೀಪಗಳಿಂದ ಅಲಂಕರಿಸಿ, ಲಕ್ಷ್ಮೀ ಕಟಾಕ್ಷ ಪಡೆಯಲು ವಿಷ್ಣು ಸಹಿತ ಮಹಾಲಕ್ಷ್ಮೀದೇವಿಯ ಪೂಜೆ ಮಾಡಬೇಕು. ಇದರಿಂದ ಲಕ್ಷ್ಮಿ ಕಟಾಕ್ಷ ಸದಾ ಇರಲಿ ಎಂಬ ಆಶಯ ಪ್ರತಿಯೊಬ್ಬನಿಗೂ ಇರುತ್ತದೆ. ಇದರ ಜೊತೆ ಕುಬೇರನ ಪೂಜೆ ಮಾಡುವುದು ಲಕ್ಷ್ಮಿ ಕುಬೇರ ಮೂಲಕ ನಮ್ಮನ್ನು ಅನುಗ್ರಹಿಸುತ್ತಾಳೆ. ನೀರ್ವಿವಿಘ್ನದಿಂದ ಯಶಸ್ಸು ಗಣಪತಿ ಪೂಜೆ ಮಾಡಬೇಕು. ಅಂಗಡಿ ಮುಂಗಟ್ಟುಗಳನ್ನು ವಿವಿಧ ದೀಪಗಳಿಂದ ಅಲಂಕರಿಸಿ, ಮಹಾಲಕ್ಷ್ಮೀ ಮತ್ತು ಸರಸ್ವತಿ ದೇವಿಯರ ಪೂಜೆ ಮಾಡುತ್ತಾರೆ, ತಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿಗೋಸ್ಕರ ಪ್ರಾರ್ಥನೆ ಸಲ್ಲಿಸುತ್ತಾರೆ 

ಬಲಿಪಾಡ್ಯ

ವಿಷ್ಣು ವಾಮಾನ ಅವತಾರ ಮಾಡಿ ಪ್ರಲ್ಹಾದ ರಾಜರ ಮೊಮ್ಮಗ ಬಲಿಯ ಗರ್ವ ಮಾಡಿದ ದಿನ. ಈ ದಿನ ಬಲೀಂದ್ರ ತನ್ನ ರಾಜ್ಯವನ್ನು ನೋಡಲು ಭುವಿಗೆ ಬರುವನೆಂದು ಮನೆಯ ಮುಂದೆ ಸುಂದರ ರಂಗೋಲಿ ಇಟ್ಟು ದೀಪಗಳಿಂದ ಅಲಂಕಾರ ಮಾಡಿ  ಬಲಿಂದ್ರನಿಗೆ ಪೂಜೆ ಸಲ್ಲಿಸಿ  ಸಂತೋಷ್ ಪಡುತ್ತಾರೆ. ಅಲ್ಲದೆ ಸಗಣಿ ಅಥವಾ ಮಣ್ಣಿನಲ್ಲಿ  ಪಾಂಡವರ ಬೊಂಬೆಗಳನ್ನು ಮಾಡಿ ಉತ್ತರಣೆ ಗೆಲ್ಲಿನಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ.

ಭಾವಬಿದಿಗೆ ವಿಶೇಷ ಎಂದರೆ,  ಯಮನ ತಂಗಿ ಯಮುನೆ, ಅವನನ್ನು ಮನೆಗೆ ಆಹ್ವಾನಿಸಿ,  ಆತಿಥ್ಯ ನೀಡಿದಳಂತೆ. ಈ ದಿನ  ಅಣ್ಣ  ತಮ್ಮಂದಿರನ್ನು ಮನೆಗೆ ಕರೆದು ಭೋಜನ ಮಾಡಿಸಿ ಕೈಲಾದ ಉಡುಗೊರೆ ಕೊಟ್ಟು ಆರತಿ ಮಾಡಿ, ಅವರನ್ನು ಸಂತೋಷ್ ಪಡಿಸಬೇಕು. ಈ ಆಚರಣೆಯಿಂದ ಅಣ್ಣ ತಂಗಿಯರ ಸಂಬಂಧ ಗಟ್ಟಿಗೊಳ್ಳುತ್ತೆ, ತವರಿನ ಬಾಂಧವ್ಯ ಮೊದಲಿನ ಹಾಗೇ ಉಳಿಯುತ್ತೆ.

ಅಕ್ಕನ ತದಿಗೆ ವಿಶೇಷ ಅಂದ್ರೆ ಅಕ್ಕ ತಂಗಿಯರನ್ನು ಅಣ್ಣ ತಮ್ಮಂದಿರು ಮನೆಗೆ ಆಹ್ವಾನಿಸಿ, ಆತಿಥ್ಯ ನೀಡುತ್ತಾರೆ.  ಹೆಣ್ಣುಮಕ್ಕಳು ತಾವು ಹುಟ್ಟಿ ಬೆಳೆದ ತವರಿಗೆ ಹೋಗಲು ಬಹಳ ಕಾತುರರಾಗಿರುತ್ತಾರೆ. ತವರೂರು ಎಂದರೆ ಅವರಿಗೆ ಅದೇನೋ ಹೇಳಿಕೊಳ್ಳಲಾಗದಷ್ಟು ಸಂತೋಷ. ತವರಿಗೆ ಬಂದ ಅಕ್ಕ ತಂಗಿಯರಿಗೆ  ಅವರಿಗಿಷ್ಟವಾದ ಖಾದ್ಯ ನೀಡಿ, ಉಡುಗೊರೆ ಕೊಟ್ಟು ಅವರನ್ನು ಸಂತೋಷ ಪಡಿಸುತ್ತಾರೆ 

ಅಮ್ಮನ ಚೌತಿ ಎಂದರೆ ತಾಯಿಯ ಸ್ಮರಿಸುವ ದಿನ. ಪ್ರತಿಯೊಬ್ಬನಿಗೂ ತಾಯಿಯ ಋಣ ಇದ್ದೇ ಇರುತ್ತದೆ.ಅಮ್ಮನ ಋಣ ತೀರಿಸಲು ಆಗದು ಆದರೆ. ಅವಳಿಗೆ ಸಂತೋಷ ಪಡಿಸಿ ಉಡುಗೊರೆ ಅಮ್ಮನಿಗೆ ಆರತಿ ಮಾಡಬೇಕು.

ದೀಪಾವಳಿಯು ಅಜ್ಞಾನದ ಕತ್ತಲೆಯ ಮೇಲೆ ಆಂತರಿಕ ಶುದ್ಧಗೊಳಿಸಿ ಜ್ಞಾನದ ಬೆಳಕಿನ ವಿಜಯವನ್ನು ಆಚರಿಸುವ ಬೆಳಕಿನ ಹಬ್ಬವಾಗಿದೆ.

ಹೀಗೇ ಸತತವಾಗಿ ಒಂದು ವಾರ ಕಾಲದ ಆಚರಣೆ ಈ ದೀಪಾವಳಿ ಹಬ್ಬ. ಎಲ್ಲರೂ ಬಂಧು ಬಾಂಧವರಿಂದೊಡಗೂಡಿ ದೀಪಾವಳಿ ಹಬ್ಬ ಆಚರಿಸೋಣ, ಅರಿತು ಆಂತರಿಕ ಶುದ್ಧವಾಗೋಣ. ಸರ್ವರಿಗೂ  ದೀಪಾವಳಿ ಶುಭಾಶಯಗಳು

ಪ್ರಿಯಾ ಪ್ರಾಣೇಶ ಹರಿದಾಸ

(ಕವಿಯತ್ರಿ, ಬರಹಗಾರ್ತಿ )

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -

More Articles Like This

- Advertisement -
close
error: Content is protected !!
Join WhatsApp Group