spot_img
spot_img

ಬಕ್ರೀದ್ ನಿಮಿತ್ತ ಒಂಟೆ, ಗೋವುಗಳ ಹತ್ಯೆ ಮಾಡಬೇಡಿ – ಸಿಪಿಐ ಉಕ್ಕುಂದ

Must Read

ಸಿಂದಗಿ: ಬಕ್ರೀದ್ ಹಬ್ಬದ ಪ್ರಯುಕ್ತ ಒಂಟೆ ಮತ್ತು ಗೋವುಗಳ ಹತ್ಯೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರ ಧ್ವನಿವರ್ಧಕಗಳ ಪ್ರದೇಶಗಳಲ್ಲಿ ಪ್ರಚಾರ ಮಾಡಬೇಕೆಂದು ಹಾಗೂ ಮುಸ್ಲಿಂ ಸಮುದಾಯ ಮುಖಂಡರ ಸಭೆ ಮಾಡಿ ಅವರಲ್ಲಿ ಗೋಹತ್ಯೆ ಬಗ್ಗೆ ತಿಳಿಸಿಕೊಡಬೇಕು ಮತ್ತು ಕಾನೂನನ್ನು ಯಾರು ಗೌರವಿಸುತ್ತಾರೋ ಅವರನ್ನು ನಾವು ಗೌರವಿಸುತ್ತೇವೆ ಕಾರಣ ಕಾನೂನಿನ ವಿರುದ್ಧ ಹೋಗಬೇಡಿ ಎಂದು ಸಿಪಿಐ ರವಿ ಉಕ್ಕುಂದ ಹೇಳಿದರು.

ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ ಪಶುಪಾಲನಾ ಇಲಾಖೆ ಹಾಗೂ ಪೊಲೀಸ ಇಲಾಖೆ ಸಹಯೋಗದಲ್ಲಿ ಬಕ್ರೀದ ಪ್ರಯಕ್ತ ಹಮ್ಮಿಕೊಂಡ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜುಲೈ 10 ರಂದು ನಡೆಯುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಕಡ್ಡಾಯವಾಗಿ ಒಂಟೆ, ಗೋವುಗಳನ್ನು ಹತ್ಯೆ ಮಾಡಬಾರದು ಇದು ಅಪರಾಧವಾಗಿರುತ್ತದೆ ಈ ಬಗ್ಗೆ 2 ವರ್ಷಗಳಿಂದ ಸರ್ಕಾರದ ಕಾನೂನು ಜಾರಿಯಲ್ಲಿದ್ದು, ಪ್ರತಿಯೊಬ್ಬರು ಸರ್ಕಾರದ ಕಾನೂನು ಮತ್ತು ನಿಯಮಗಳನ್ನು ಪಾಲಿಸಬೇಕು ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ ಅವರು ಈ ತಾಲೂಕಿನ ನಾಲ್ಕು ಕಡೆಗಳಲ್ಲಿ ತಪಾಸಣೆ ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ ಕಾರಣ ಯಾರು ಕಾನೂನು ಉಲ್ಲಂಘನೆ ಮಾಡಬೇಡಿ ಎಂದರು.

ಪಶು ಸಂಗೋನಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಮಾರುತಿ ತಡ್ಲಗಿ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಒಂಟೆ, ಆಕಳು, ಎತ್ತು ಹತ್ಯೆ ಮಾಡುವಂತಿಲ್ಲ. ಎಮ್ಮೆಯನ್ನು ಹತ್ಯೆ ಮಾಡಬಹುದು ಆದರೆ ಅದು 13 ವರ್ಷದ ಮೆಲ್ಪಟ್ಟಿರಬೇಕು. ಹೊರರಾಜ್ಯಗಳಿಂದ ಮತ್ತು ಹೊರಜಿಲ್ಲೆಗಳಿಂದ ಕಳ್ಳಸಾಗಾಣಿಕೆ ಮಾಡುತ್ತಾರೆ. ಪ್ರಾಣಿಗಳನ್ನು ಇಂತಹ ಸಂದರ್ಭಗಳಲ್ಲಿ ಕಡ್ಡಾಯವಾಗಿ ವಾಹನಗಳ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳಬೇಕು ಕಾನೂನು ಬಾಹಿರವಾಗಿ ಯಾರಾದರೂ ಒಂಟೆ, ಗೋಹತ್ಯೆ ಮಾಡಿದ್ದು, ಕಂಡುಬಂದಲ್ಲಿ ಸಾರ್ವಜನಿಕರು ಪಶುಸಂಗೋಪನೆ ಇಲಾಖೆ, ಪೊಲೀಸ್ ದೂರವಾಣಿಗಳಿಗೆ ಮಾಹಿತಿಯನ್ನು ತಿಳಿಸಲು ಸೂಚಿಸಿದರು.

ಮುಖಂಡರಾದ ಮುಸ್ತಾಕ ಮುಲ್ಲಾ, ಮಹಿಬೂಬ ಸಿಂದಗಿಕರ, ನೂರಹ್ಮದ ಅತ್ತಾರ ಮಾತನಾಡಿ, ಹಿಂದೆ ಒಂಟೆ, ಆಕಳು ಕುರ್ಬಾನಿ ನೀಡುತ್ತಿದ್ದೆವು ಆದರೆ ಕಾನೂನು ಜಾರಿಯಾದ 2 ವರ್ಷಗಳಿಂದ ಕುರಿ ಮಾತ್ರ ಕುರ್ಬಾನಿ ಮಾಡುತ್ತಿದ್ದೇವೆ. ಇಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುತ್ತ ಬಂದಿದ್ದೇವೆ ಅಂತಹ ಯಾವುದೇ ಅಹಿತಕರ ಘಟನೆಗಳು ಸಂಭವಿಸುವದಿಲ್ಲ. ನಾವೆಲ್ಲ ಮುಸ್ಲೀಂ ಮುಖಂಡರು ಇಂದದಿನಿಂದಲೇ ಪಟ್ಟಣ ಸೇರಿದಂತೆ ಎಲ್ಲ ಗ್ರಾಮಗಳ ಮುಖಂಡರಿಗೆ ತಿಳಿಸಿ ಪ್ರಾರ್ಥನಾ ಸ್ಥಳಗಳಲ್ಲಿ ಸಂದೇಶ ಮುಟ್ಟಿಸುತ್ತೇವೆ ಎಂದರು.

ಪಿಎಸೈ ನಿಂಗಣ್ಣ ಪೂಜಾರಿ ಮಾತನಾಡಿ, ಕಾನೂನು ಉಲ್ಲಂಘನೆ ಮಾಡಿ ಒಂಟೆ, ಗೋವುಗಳನ್ನು ಹತ್ಯೆ ಮಾಡಿದರೆ 7 ವರ್ಷ ಜೈಲು ಶಿಕ್ಷೆಯಾಗುತ್ತದೆ ಅದಕ್ಕೆ ಎಲ್ಲ ಕಡೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹ್ಮದಪಟೇಲ ಬಿರಾದಾರ, ಸೈಪನ್ ನಾಟೀಕಾರ, ಬಸೀರ ಮರ್ತುರ, ರಹಿಮ್ ಹುಂಡೆಕಾರ, ಬಂದೇನವಾಜ ಕರ್ಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!