ಮಕ್ಕಳಿಗೆ ಸಂಸ್ಕಾರಕ್ಕಾಗಿ ಕೆಲವು ಹಿರಿಯರ ಸಂಪ್ರದಾಯಗಳು:
- ಓದುತ್ತಿರುವ ಪುಸ್ತಕವನ್ನು ಯಾರಾದರೂ ಕರೆದಾಗ ಹಾಗೆಯೇ ಬಿಟ್ಟು ಹೋಗಬೇಡಿ.ಪುಸ್ತಕಗಳನ್ನು ಮಡಚಿಟ್ಟು ಸರಿಯಾದ ಜಾಗದಲ್ಲಿ ಇರಿಸಿ ಹೋಗಿ. ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರು.
- ಸಂಧ್ಯಾಕಾಲಗಳಲ್ಲಿ ಯಾರೊಂದಿಗೂ ವೈಮನಸ್ಸು; ಕೆಟ್ಟ ವಿಚಾರ; ಮಾತುಕತೆ ಬೇಡ. ವಾತಾವರಣದಲ್ಲಿ ವಾಸ್ತು ಅಂದರೆ ಅಸ್ತು ದೇವತೆಗಳು ಹಾಗೆಯೇ ಆಗಲಿ ಎಂದು ಅನುಗ್ರಹಿಸುತ್ತವೆ.
- ಸಾಧ್ಯವಾದಷ್ಟು ದೇವರ ಮನೆಯಲ್ಲಿ ಶುಚಿತ್ವವಿರಲಿ ಅಗತ್ಯಕ್ಕಿಂತ ಇತರೇ ಯಾವುದೇ ವಸ್ತುಗಳನ್ನು ಇಡಬೇಡಿ.
- ದೇವರ ಉತ್ಸವ ಮತ್ತು ಆರತಿಗಳು ಇದ್ದಲ್ಲಿ ಎದ್ದು ನಿಂತು ಗೌರವವನ್ನು ತೋರಿಸಿ. ಧಾರ್ಮಿಕ ಆಚರಣೆಗಳಲ್ಲಿ ಭಾವನೆಗೆ ಅತ್ಯಂತ ದೊಡ್ಡ ಮಹತ್ವ.
- ಯಾವುದೇ ಜಾತಿ ಪಂಗಡದವರಾಗಿದ್ದರೂ ಎಲ್ಲಾ ಧರ್ಮಗಳ ದೈವಿಕ ವಿಚಾರವನ್ನು ಗೌರವಿಸಿ.
- ಕಿರಿಯರು ಅಥವಾ ಮಕ್ಕಳು ಕೇಳುವ ಯಾವುದೇ ದೈವಿಕ ವಿಚಾರಗಳಿಗೆ ಹಾರಿಕೆಯ ಉತ್ತರ ನೀಡಬೇಡಿ. ಸಂಸ್ಕಾರಗಳನ್ನು ನಮ್ಮಿಂದ ನೋಡಿ ತಿಳಿದು ಕಲಿಯುತ್ತವೆ ಮಕ್ಕಳು.
- ಸುಮ್ಮಸುಮ್ಮನೆ ಯಾವುದೇ ಗಿಡ-ಮರ ಕ್ರಿಮಿ-ಕೀಟ ಪಶುಪಕ್ಷಿಗಳಿಗೆ ಹಿಂಸಿಸಬೇಡಿ. ಮನುಷ್ಯನಿಗಿಂತ ಮೊದಲೇ ಅವುಗಳು ಭೂಮಿಯಲ್ಲಿ ಇವೆ.
- ದೀಪ ಹಾರಿ ಹೋಗಿದೆ ಅಕ್ಕಿ ಖಾಲಿಯಾಗಿದೆ ಈ ರೀತಿ ಮಾತುಗಳನ್ನು ಮನೆಯಲ್ಲಿ ಹೇಳಬಾರದು. ದೀಪ ಸಣ್ಣದಾಗಿದೆ. ಅಕ್ಕಿ ತರಬೇಕು ಈ ರೀತಿ ಮಾತುಗಳನ್ನು ಮಕ್ಕಳಲ್ಲಿ ಹೇಳುವಂತೆ ತಿಳಿಸಿ.
- ರಾತ್ರಿ ಊಟವಾದ ಮೇಲೆ ಊಟದ ಪಾತ್ರೆಗಳನ್ನು ಎಲ್ಲಾ ಖಾಲಿಮಾಡಿ ಸಾರಿಸಿ ಇಡುವುದು ಶುಭವಲ್ಲ. ಕೊನೆಯಪಕ್ಷ ಬೆಲ್ಲ-ಅವಲಕ್ಕಿ ಯನ್ನಾದರೂ ಪಾತ್ರೆಯಲ್ಲಿ ಇರಿಸಿ.
- ದೇವರ ಬಗೆಗೆ ವಿಶೇಷ ಭಯ-ಭೀತಿಯನ್ನು ಮಕ್ಕಳಲ್ಲಿ ಉಂಟು ಮಾಡಬೇಡಿ. ದೇವರಷ್ಟು ಹತ್ತಿರದವರು ನಮಗೆ ಯಾರು ಇಲ್ಲ.
- ಪ್ರತಿ ತಿಂಗಳಲ್ಲಿ ಬರುವ ಹಬ್ಬ ಹರಿದಿನಗಳ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸೆ ಮಕ್ಕಳಲ್ಲಿ ಬೆಳೆಸಿ.
- ಸಾಧ್ಯವಾದಷ್ಟು ಮುಂಜಾನೆ ಅಥವಾ ಊಟಕ್ಕೆ ಮೊದಲು ಕಾಗೆಗಳಿಗೆ-ಪಕ್ಷಿಗಳಿಗೆ ಆಹಾರ ನೀಡುವ ಕ್ರಮ ಬೆಳೆಸಿಕೊಳ್ಳಿ.
- ಮನೆಯಲ್ಲಿ ಕುಡಿಯುವ ನೀರನ್ನು ಪ್ರತಿನಿತ್ಯ ಬದಲಾವಣೆ ಮಾಡಿ (ಸ್ಟೀಲ್ ಪಾತ್ರೆಯಲ್ಲಿ ಇದ್ದರೆ). ಇಲ್ಲವಾದಲ್ಲಿ ಮಣ್ಣಿನ -ತಾಮ್ರದ ಪಾತ್ರೆಯಲ್ಲಿ ಇರಿಸಿ.
- ಬೆಳಿಗ್ಗೆ ಸ್ನಾನವಾದ ಮೇಲೆ ಮಕ್ಕಳಿಗೆ ದೇವರಕೋಣೆಯಲ್ಲಿ ನಿಂತು ಪ್ರಾರ್ಥನೆ ಮಾಡುವುದನ್ನು ಹೇಳಿಕೊಡಿ. ಮಕ್ಕಳ ಪ್ರಾರ್ಥನೆಗಳು ಬಹುಬೇಗ ಫಲ ಕೊಡುತ್ತವೆ.
- ಪೂಜೆ ಪುರಸ್ಕಾರ ಗಳಲ್ಲಿ ಮನೆಯ ಹಿರಿಯರನ್ನು ಮುಂದೆ ನಿಲ್ಲಿಸಿ ಪ್ರಾರ್ಥನೆ ಮಾಡಿಸಿ. ಹಿರಿಯರಿಂದ ಪ್ರಸಾದ ಸ್ವೀಕರಿಸಿ. ಇದು ನಮ್ಮ ಸನಾತನ ಧರ್ಮ.
- ಕುಟುಂಬದ ಶುಭಕಾರ್ಯಗಳಲ್ಲಿ ಸಾಧ್ಯವಾದಷ್ಟು ಭಾಗವಹಿಸಲು ಪ್ರಯತ್ನ ಮಾಡಿ.( ಭಿನ್ನಾಭಿಪ್ರಾಯಗಳು ಯಾವಾಗಲೂ ಇರಬಹುದು)
- ಮಕ್ಕಳಿಗೆ ಕುಟುಂಬದ ಸರ್ವ ಸದಸ್ಯರ ಪರಿಚಯ ಮಾಡಿಕೊಡಿ. ಕುಟುಂಬದ ವಂಶವೃಕ್ಷದ ದಾಖಲೆ ಮಾಡಿ ಇಡಿ.
- ದೇವರಿಗೆ ಪ್ರಾರ್ಥನೆಗೆ ಮತ್ತು ಬೇರೆಯವರಿಗೆ ದಾನಕ್ಕೆ ತೆಂಗಿನಕಾಯಿ ಕೊಡುವಾಗ ಅದರ ಜುಟ್ಟಿನ ಭಾಗ ನಿಮ್ಮ ದಿಕ್ಕಿನಲ್ಲಿ ಇರಲಿ. ಇದೇ ರೀತಿ ಬಾಳೆಹಣ್ಣು ಮತ್ತು ವೀಳ್ಯದಲೆಯ ತುದಿಭಾಗವೂ ಕೂಡ.
- ತೆಂಗಿನಕಾಯಿ ಒಡೆದ ಭಾಗದಲ್ಲಿ ಕಣ್ಣುಗಳಿರುವ ಭಾಗವನ್ನು ಬೇರೆಯವರಿಗೆ ಕೊಡಬೇಕು. (ಬ್ರಾಹ್ಮಣರಿಗೆ ಕೊಡುವಾಗ)
- ಪೂರ್ಣ ಕತ್ತಲೆ ಇರುವ ಕೋಣೆಯಲ್ಲಿ ಮಲಗಬಾರದು. ಸಣ್ಣ ಬೆಳಕಾದರೂ ಉರಿಯುತ್ತಿರಬೇಕು.
- ತಟ್ಟೆಯಲ್ಲಿ ಮೊದಲು ಅನ್ನವನ್ನು ಹಾಕಬಾರದು ಯಾವುದಾದರೂ ಪಲ್ಯ ;ಉಪ್ಪು ಇತರೆ ಖಾದ್ಯವನ್ನಾದರೂ ಬಳಸಿಕೊಂಡು ನಂತರ ಅನ್ನವನ್ನು ಹಾಕಿಕೊಳ್ಳಬೇಕು.
- ದೇವರ ಕೋಣೆಯ ಎದುರು ಕಾಲು ಬಿಡಿಸಿ ಮಲಗುವುದು ಅಥವಾ ಕಾಲು ಬಿಡಿಸಿ ಕುಳಿತುಕೊಳ್ಳುವುದು ಅಥವಾ ದೇವರಿಗೆ ನೇರವಾಗಿ ಬೆನ್ನುಹಾಕಿ ಕುಳಿತುಕೊಳ್ಳುವುದು ಮಾಡಬೇಡಿ.
- ಮುತ್ತೈದೆಯರಿಗೆ ಶುಕ್ರವಾರ, ಮಂಗಳವಾರ, ಅತ್ತೆ ಮಾವಂದಿರ ಶ್ರಾದ್ಧದಂದು, ಉತ್ಸವದಂದು, ಅಭ್ಯಂಜನ ದಂದು, (ನದೀ ಸ್ನಾನ, ಸಮುದ್ರಸ್ನಾನ) ಮಾತ್ರ ತಲೆ ಸ್ನಾನ ಮಾಡಬೇಕು. ಉಳಿದ ದಿನಗಳಲ್ಲಿ ಕಂಠಪರ್ಯಂತ ಸ್ನಾನ ಮಾತ್ರ.
- ಊಟ ಮಾಡಲು ಕುಳಿತುಕೊಂಡ ಮೇಲೆ ಊಟದ ಮಧ್ಯದಲ್ಲಿ ಎದ್ದು ಹೋಗಬೇಡಿ. ಊಟವು ಒಂದು ಯಜ್ಞಕ್ಕೆ ಸಮಾನ.
- ಮನೆಯಿಂದ ಹೊರಗೆ ಹೊರಟಾಗ ಮನೆಯವರಿಗೆ ಹೋಗಿ ಬರುತ್ತೇನೆ ಎಂದು ಹೇಳಿ, .ಹೋಗುತ್ತೇನೆ ಎಂದು ಹೇಳಬೇಡಿ. ಮುಂದುವರೆಯುವುದು ಇದೇ ರೀತಿ ನಿಮ್ಮಲ್ಲಿರುವ ಮತ್ತು ಹಿರಿಯರಿಂದ ಬಂದಿರುವ ಒಳ್ಳೆಯ ಸಂಪ್ರದಾಯಗಳನ್ನು ನಮಗೆ ತಿಳಿಸಿ. ಕಲಿಯೋಣ ಮತ್ತು ಕಲಿಸೋಣ.ಹಾಗೆಯೇ ಪ್ರಯತ್ನ ಮುಂದು ವರೆಸೇೂಣ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387