ಕೋಲ್ಕತ್ತಾ – ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸತತ ಎರಡು ಗಂಟೆಗಳ ಚರ್ಚೆಯ ನಂತರ ಕೋಲ್ಕತ್ತಾದ ಆರ್ ಜಿ ಕರ್ ವೈದ್ಯ ವಿದ್ಯಾರ್ಥಿನಿಯ ಹತ್ಯಾಚಾರ ಕುರಿತಂತೆ ವೈದ್ಯರುಗಳು ಕೈಗೊಂಡಿದ್ದ ಧರಣಿಯು ಕೆಲವು ಶರತ್ತುಗಳೊಂದಿಗೆ ಅಂತ್ಯಗೊಂಡಿದೆ.
ಮುಖ್ಯಮಂತ್ರಿ ಗಳ ನಿವಾಸದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮುಷ್ಕರ ನಿರತ ವೈದ್ಯರು ಕೆಲವು ಶರತ್ತುಗಳನ್ನು ಪ್ರಸ್ತಾಪಿಸಿ ವೈದ್ಯ ವಿದ್ಯಾರ್ಥಿನಿಯ ಹತ್ಯಾಚಾರದ ವಿರುದ್ಧದ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಅದರಲ್ಲಿ ಸಭೆಯಲ್ಲಿ ನಡೆಯುವ ಪ್ರತಿಯೊಂದು ನಡೆಯನ್ನು ರಿಕಾರ್ಡ್ ಮಾಡಿ ತಮಗೂ ಒಂದು ಪ್ರತಿ ನೀಡಬೇಕು ಎಲ್ಲವೂ ಬಹಿರಂಗವಾಗಿ ನಡೆಯಬೇಕು ಎಂದು ಶರತ್ತು ವಿಧಿಸಿದ್ದರು
ಈ ಮಧ್ಯೆ ಹತ್ಯಾಚಾರಕ್ಕೆ ಒಳಗಾದ ಯುವತಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ರ್ಯಾಲಿಗಳು, ಪ್ರದರ್ಶನಗಳು ರವಿವಾರವೂ ಮುಂದುವರೆದವು. ನಿವೃತ್ತ ಸೇನಾಧಿಕಾರಿಗಳೂ ಜಾಧವಪುರದಿಂದ ಗೋಲಪಾರ್ಕ್ ವರೆಗೆ ತಮ್ಮ ಕೈಯಲ್ಲಿ ಬ್ಯಾನರ್ ಹಿಡಿದು ಮಳೆಯಲ್ಲಿಯೇ ಪ್ರದರ್ಶನ ಕೈಗೊಂಡರು.
ಆರ್ ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಹಾಗೂ ಪೊಲೀಸ್ ಇನ್ಸ್ ಪೆಕ್ಡರ್ ಅಭಿಜಿತ್ ಮಂಡಲ್ ಅವರನ್ನು ಸೆ.೧೭ ರ ವರೆಗು ವಿಚಾರಣೆಗೆ ಸಿಬಿಐ ವಶಕ್ಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಇವರಿಬ್ಬರೂ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಸಿಬಿಐ ತಿಳಿಸಿದ್ದು ಇಬ್ಬರ ವಿಚಾರಣೆ ಕೈಗೊಂಡಿದೆ.