- Advertisement -
ಬೆಳಗಾವಿಃ ರಾಮತೀರ್ಥ ನಗರದ ರತ್ನಶ್ರೀ ಪುತಳೇಕರ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.
ರತ್ನಶ್ರೀಯವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ ‘ಅಭಿಧಾನ ವಸ್ತುಕೋಶ ಹಾಗೂ ಅಮರಕೋಶದ ತೌಲನಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಅವರಿಗೆ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಮಾರ್ಗದರ್ಶಕರಾಗಿದ್ದರು.