ಸಿಂದಗಿ– ತಾಲೂಕಿನ ರಾಂಪೂರ ಗ್ರಾಮದ ಪ್ರೌಢ ಶಾಲೆಯ ದೈಹಿಕ ಶಿಕ್ಷಕಿ ಶೋಭಾ ಬಿರಾದಾರ ಅವರಿಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಇತ್ತೀಚೆಗೆ ನಡೆದ ಘಟಿಕೋತ್ಸವ ಸಂಧರ್ಭದಲ್ಲಿ ಡಾಕ್ಟರೆಟ್ ಪದವಿ ನೀಡಿ ಗೌರವಿಸಿದೆ.
ಇವರು ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ ಎಫೆಕ್ಟ್ ಆಫ್ ಯೋಗಾ ಟ್ರೇನಿಂಗ್ ಆನ್ ಅಕಾಡಮಿಕ್ ಫರಫಾರ್ಮನ್ಸ್ ಆಂಡ್ಯ್ ಸೋಸಿಯೋಲಾಜಿಕಲ್ ಟ್ರೀಟ್‍ಆಫ್ ಸೆಕೆಂಡರಿ ಸ್ಕೂಲ್ ಚಿಲ್ಡ್ರನ್ ಎಂಬ ವಿಷಯದ ಕುರಿತಾಗಿ ಪ್ರಭಂದ ಮಂಡಿಸಿದ್ದರು. ಇವರಿಗೆ ಡಾ.ರಾಜಕುಮಾರ ಮಾಲಿಪಾಟೀಲ ಅವರು ಮಾರ್ಗದರ್ಶನ ನೀಡಿದ್ದರು.
ಶೋಭಾ ಬಿರಾದಾರ ಅವರಿಗೆ ಶಾಲಾ ಶಿಕ್ಷಕರ ಬಳಗ ಅಭಿನಂದನೆ ಸಲ್ಲಿಸಿದೆ.