ಸಿಂದಗಿ- ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಮತ್ತು ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಮತ್ತು ರಾಜ್ಯ, ರಾಷ್ಟ ಮಟ್ಟದಲ್ಲಿ ವಿವಿಧ ಕ್ರೀಡೆಗಳ ವೀಕ್ಷಕ ವಿವರಣೆಗಾರ ರವಿ ಗೋಲಾ ಅವರಿಗೆ ಆಂದ್ರಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಕುಪ್ಪಂ ದಲ್ಲಿ ಅವರು ಮಂಡಿಸಿದ ಕ್ರಿಕೆಟ್ ಕ್ರೀಡೆಗೆ ಸಂಬಂಧಿಸಿದ ‘ದಿ ಇಂಪೆಕ್ಟ್ ಆಫ್ ಸೆಲ್ಪ್ ಎಸ್ಟಿಂ ಸಬ್ಜೆಕ್ಟಿವ ವೆಲ್ ಬೀಯಿಂಗ್ ಆಂಡ್ ಸಪೋರ್ಟಿವ ಸ್ಪಕ್ಟೇಟರ್ಸ ಬಿಹೇವಿಯರ್ ಆಲ್ ದ ಪರ್ಫಾರ್ಮೇನ್ಸ್ ಆಫ್ ಕ್ರಿಕೇಟರ್ಸ’ ಈ ವಿಷಯ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿದೆ. ಅವರಿಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರೊ. ಹನುಮಂತಯ್ಯ ಪೂಜಾರಿ ಅವರು ಮಾರ್ಗದರ್ಶನ ನೀಡಿದ್ದಾರೆ.
ಅವರಿಗೆ ಸಂಸ್ಥೆಯ ಚೆರಮನ್ನರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹಾಗೂ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯ ಪ್ರೋ. ಡಿ.ಎಮ್.ಪಾಟೀಲ ಮತ್ತು ಸಿಬ್ಬಂದಿಗಳು, ಶಾಸಕ ಅಶೋಕ ಮನಗೂಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.