ಸಿಂದಗಿ : ವಿಧಾನಸಭಾ ಕ್ಷೇತ್ರದ ನೂತನ ತಾಲೂಕು ಆಲಮೇಲ ಪಟ್ಟಣದ ಡಾ. ಬಾಬಾಸಾಹೇಬ್ ಅಂಬೇಡ್ಕರರ ಮೂರ್ತಿಗೆ ೫ ಲಕ್ಷ ರೂ.ಗಳ ದೇಣಿಗೆ ನೀಡುವುದಾಗಿ ನೀಡಿದ ವಾಗ್ದಾನದಂತೆ ಅಹಿಂದ ನಾಯಕ ಮೈಬೂಬಸಾಬ ತಾಂಬೋಳಿ ಮೊದಲ ಕಂತಾಗಿ ರೂ. ೨.೫ ಲಕ್ಷ ರೂ. ಗಳನ್ನು ನೀಡಿದರು
ಅಂಬೇಡ್ಕರವರು ನಮ್ಮದೇಶದ ಹಣೆಬರಹವನ್ನೇ ಮರುಸೃಷ್ಟಿ ಮಾಡಿ ಹಿಂದುಳಿದವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಧ್ವನಿಯಾದರು ಅಂತಹ ಮಹಾಪುರುಷರ ಆದರ್ಶಗಳು ಪ್ರತಿ ಮನೆ ಮನೆಯಲ್ಲಿ ಬೆಳಗಬೇಕು ಎಂದು ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಅಂಬೇಡ್ಕರ್ ತತ್ವ ಆದರ್ಶಗಳು ನಮ್ಮನ್ನ ಪ್ರೇರೇಪಿಸಿವೆ, ಅವರು ಮಾಡಿದ ಕಾರ್ಯಗಳು, ದೇಶಕ್ಕಾಗಿ, ದ್ವನಿ ಇಲ್ಲದವರ ಪರವಾಗಿ ಮಾಡಿದ ಕೆಲಸ, ಸರ್ವರಿಗೂ ಸಮಬಾಳು ಸಮಪಾಲು ಎಂದು ಬದುಕಲು ದಾರಿ ಮಾಡಿ ಕೊಟ್ಟ ಮಹಾನಾಯಕ ಅಂಬೇಡ್ಕರ್ ಅವರ ದಾರಿಯಲ್ಲಿ ನಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ ಆರ್ ಎಂಟಮಾನ, ಮುನ್ನಾ ಬೈರಾಮಾಡಗಿ ಹಾಗೂ ಆಲಮೇಲ ಗ್ರಾಮಸ್ಥರು ಉಪಸ್ಥಿತರಿದ್ದರು