ಮೂಡಲಗಿ : ಉತ್ತಮ ಶಿಕ್ಷಣ, ಸ್ವಚ್ಚ ಪರಿಸರದ ಜೊತೆಗೆ ಶುದ್ದವಾದ ನೀರು ಸಹ ವಿದ್ಯಾರ್ಥಿಗಳಿಗೆ ಪೂರಕವಾದ ಶಿಕ್ಷಣ ದೂರೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಭಾವನೆಯಿಂದ ನಾವು ನೀರು ಶುದ್ಧೀಕರಣದ ಯಂತ್ರವನ್ನು ನೀಡುತ್ತಿದ್ದೇವೆ ಮಕ್ಕಳು ಶುದ್ದವಾದ ನೀರು ಕುಡಿದು ನೀರಿನಿಂದ ಬರಬಹುದಾದ ಖಾಯಿಲೆಯಿಂದ ಮುಕ್ತರಾಗಿ ಎಂದು ಗೋಕಾಕದ ಡೆಲ್ಲಿ ಪ್ಲಾಜಾ ರೆಡಿಮೇಡ್ ಶೋರೂಂ ಮಾಲೀಕ ವಿನೋದ ಅಂಕದವರ ಹೇಳಿದರು.
ಗುರುವಾರ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಗೆ ಸುಪ್ರಸಿದ್ಧ ಡೆಲ್ಲಿ ಪ್ಲಾಜಾ ರೆಡಿಮೇಡ್ ಶೋರೂಂ ವತಿಯಿಂದ ವಿದ್ಯಾರ್ಥಿಗಳಿಗೆ ಸುಮಾರು ಮೂವತ್ತು ಸಾವಿರ ಬೆಲೆಯ ವಾಟರ್ ಫಿಲ್ಟರ್ ದೇಣಿಗೆ ರೂಪದಲ್ಲಿ ಕೊಡುಗೆ ನೀಡಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ರಮೇಶ ಬೆಳಕೂಡ ಮಾತನಾಡಿ, ಮಕ್ಕಳಿಗೆ ಶುದ್ದ ನೀರು ಸಿಗಲಿ ಎಂಬ ಉದ್ದೇಶ ಹಾಗೂ ಸಂಸ್ಥೆಯ ಮೇಲಿನ ವಿಶ್ವಾಸದಿಂದ ಮೂವತ್ತು ಸಾವಿರ ಬೆಲೆಯ ವಾಟರ್ ಫಿಲ್ಟರ್ ದೇಣಿಗೆ ರೂಪದಲ್ಲಿ ಕೊಡುಗೆ ನೀಡಿದ ವಿನೋದ ಅವರ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷ ರಮೇಶ ಬೆಳಕೂಡ ಶೋರೂಂ ಮಾಲಿಕ ವಿನೋದ ಅಂಕದವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಆಡಳಿತಾಧಿಕಾರಿ ಪ್ರಕಾಶ ಗರಗಟ್ಟಿ ಸಂಸ್ಥೆಯ ಪರವಾಗಿ ಅಭಿನಂದಿಸಿದರು. ಪ್ರಾಚಾರ್ಯ ಎಸ್ ಬಿ ಮನ್ನಿಕೇರಿ ಉಪನ್ಯಾಸಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.