ಧಾರವಾಡದ ಕೈ ವಾ. ಜಯಪ್ರಕಾಶ್ ಚನ್ನಬಸಪ್ಪ ಕಲಕೋಟಿ, ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ, ಜಿಲ್ಲಾ ಖಜಾನೆ ಧಾರವಾಡ ಇವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಅವರ ಮಾತೋಶ್ರೀ ಲೀಲಾ ಕಲಕೋಟಿ ಮತ್ತು ಕುಟುಂಬ ವರ್ಗದವರು ಬೆಳಗಾವಿಯ ಬಸವನಕುಡಚಿಯ ದೇವರಾಜ್ ಅರಸು ಕಾಲೋನಿಯಲ್ಲಿರುವ ನಾಗನೂರು ಶ್ರೀ ಶಿವಬಸವ ಸ್ವಾಮೀಜಿ ಟ್ರಸ್ಟ್ ದ ಶ್ರೀಮತಿ ಚಿನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮದ ನಿವಾಸಿಗಳಿಗೆ ಅವಶ್ಯಕತೆ ಇರುವ ಸುಮಾರು ಹತ್ತು ಸಾವಿರ ರೂಪಾಯಿ ಮೌಲ್ಯದ ಸ್ಟೀಲ್ ಪಾತ್ರೆಗಳನ್ನು ಕೊಡುಗೆಯಾಗಿ ನೀಡಿ,ಒಂದು ದಿನದ ಊಟದ ವ್ಯವಸ್ಥೆಯನ್ನು ಮಾಡಿದ್ದರು.
ಸಮಾರಂಭದಲ್ಲಿ ವಿಶ್ರಾಂತ ಉಪ ನಿರ್ದೇಶಕರಾದ ಆರ್. ಬಿ. ಬನಶಂಕರಿ, ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೈವಾ. ಜಯಪ್ರಕಾಶ ಚನ್ನಬಸಪ್ಪ ಕಲಕೋಟಿ ಅವರ ಸರ್ಕಾರಿ ಸೇವೆ ಹಾಗೂ ಸಮಾಜ ಸೇವೆಯನ್ನು ಕೊಂಡಾಡಿದರು.
ಅವರ ಮಾತೋಶ್ರೀ ಲೀಲಾ ಕಲಕೋಟಿ ಅವರು ಕೈವಾ. ಜಯಪ್ರಕಾಶ್ ಅವರ ಮೃದು ಗುಣ, ಮಕ್ಕಳ ಬಗ್ಗೆ ಅನುಕಂಪ ಮಹಿಳೆಯರ ಬಗ್ಗೆ ಇರುವ ಗೌರವ ದಾನ, ಧರ್ಮಗಳ ಬಗ್ಗೆ ಹೇಳುತ್ತ ಭಾವುಕರಾದರು. ಲೀಲಾ ಕಲಕೋಟಿ ಅವರ ಸೋದರಿ ಸುರೇಖಾ ದೇಸಾಯಿ ಅವರು ಕೈವಾ.ಜಯಪ್ರಕಾಶ್ ಅವರ ಉದಾರ ಗುಣಗಳ ಬಗ್ಗೆ ಮತ್ತು ಅವರಲ್ಲಿರುವ ಸಹಾಯ ಸಹಕಾರ ಸೌಹಾರ್ದ ಮನೋಭಾವನೆಗಳ ಕುರಿತು ತಿಳಿಸಿದರು.
ಕ.ಸಾ.ಪ. ಜಿಲ್ಲಾ ಕಾರ್ಯದರ್ಶಿ ಎಂ.ವಾಯ್. ಮೆಣಸಿನಕಾಯಿ ಅವರು ಲೀಲಾ ಕಲಕೋಟಿ ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯ ಬಗ್ಗೆ ಕಥೆಯನ್ನು ಉದಾಹರಣೆಯಾಗಿ ಹೇಳುತ್ತ, ಇಂತಹ ಒಂದು ವೃದ್ಧಾಶ್ರಮದಲ್ಲಿ ತಮ್ಮ ಸುಪುತ್ರನ ಪ್ರಥಮ ಪುಣ್ಯಸ್ಮರಣೆ ಆಚರಿಸುವದು ತುಂಬಾ ಸ್ತುತ್ಯವಾದದ್ದು ಎಂದರು.
ಬಿ.ಎಸ್. ದೊಡಬಂಗಿ ಅವರು ಕೈವಾ ಚೆನ್ನಬಸಪ್ಪ ಕಲಕೋಟಿ ಅವರು ಅಥಣಿ ತಹಶೀಲ್ದಾರ್ ಹಾಗೂ ತಾಲೂಕಾ ದಂಡಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಅವರು ಸಾರ್ವಜನಿಕರಿಗೆ ಹಾಗೂ ಅಧೀನ ಸಿಬ್ಬಂದಿಗಳಿಗೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳಿಗೆ ನೀಡಿದ ಪ್ರಾಮಾಣಿಕ ಸೇವೆಯನ್ನು ಸ್ಮರಿಸುತ್ತಾ. ಕೈವಾ.ಜಯಪ್ರಕಾಶ ಅವರ ಪವಿತ್ರ ದಿವ್ಯಾತ್ಮಕ್ಕೆ ಶಾಂತಿಯನ್ನು ಕೋರಿದರು.
ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವೈಜಯಂತಿ ಚೌಗಲಾ ಅವರು ಲೀಲಾ ಕಲಕೋಟಿ ಅವರು ಮತ್ತು ಅವರ ಕುಟುಂಬದ ಸದಸ್ಯರು ಧಾರವಾಡದಿಂದ ಬೆಳಗಾವಿಯ ಈ ವೃದ್ಧಾಶ್ರಮಕ್ಕೆ ಬಂದು ನಿವಾಸಿಗಳನ್ನು ಭೆಟ್ಟಿ ಮಾಡಿ ಅವರಿಗೆ ಅವಶ್ಯಕವಿರುವ ಸಾಮಗ್ರಿಗಳನ್ನು ನೀಡಿ, ಅನ್ನ ದಾಸೋಹ ಮಾಡಿದ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ಎಮ್.ಎಸ್.ಚೌಗಲಾ, ಸಂಚಾಲಕರಾದ ಎಂ. ಎಂ. ಗಡಗಲಿ, ಡಾ ಶೋಭಾ ಆರ್ ಬನಶಂಕರಿ, ಶಾಯಿನ್ ಹೊಂಬಳ, ಜಾನಕಿ ಎಲ್. ಮಹಾದೇವಿ ಹರಿಜನ, ಅಲ್ಲಾಭಕ್ಷೆ ಪೀರಜಾದೆ, ಹಾಗೂ ನಿವಾಸಿಗಳೆಲ್ಲರು ಉಪಸ್ಥಿತರಿದ್ದರು. ಸುಗಂಧಾ ಅಳ್ಳಟ್ಟಿ ಅವರು ಸಭೀಕರನ್ನೆಲ್ಲ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಗೆ ಎಲ್ಲರಿಗೆ ವಂದನೆಗಳನ್ನು ಸಲ್ಲಿಸಿದರು.