spot_img
spot_img

ಮೂಡಲಗಿ ಲಯನ್ಸ್ ಕ್ಲಬ್‍ದಿಂದ ಸರ್ಕಸ್ ಕಲಾವಿದರಿಗೆ ದೇಣಿಗೆ

Must Read

spot_img

ಮೂಡಲಗಿ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಗುರ್ಲಾಪುರ ರಸ್ತೆಯಲ್ಲಿ ಪ್ರದರ್ಶನವಾಗುತ್ತಿರುವ ಸುಪರ್ ಸ್ಟಾರ್ ಸರ್ಕಸ್ ಮಾಲೀಕರಿಗೆ ರೂ. 7,500 ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ, ಕೋವಿಡ್‍ದಿಂದಾಗಿ ಸರ್ಕಸ್ ಮತ್ತು ನಾಟಕ ಕಂಪನಿಗಳು ಸಾಕಷ್ಟು ಸಂಕಷ್ಟದಲ್ಲಿವೆ. ಕಲಾವಿದರು ತಮ್ಮ ಕಲೆಗಳನ್ನು ಉಳಿಸಿಕೊಂಡು ಹೋಗುವಲ್ಲಿ ಸಮಾಜದ ಜನರ ಸಹಕಾರ ಮತ್ತು ಪ್ರೋತ್ಸಾಹ ಅವಶ್ಯವಿದೆ ಎಂದರು.

ಮೂಡಲಗಿಯಲ್ಲಿ ಕಳೆದ ಎರಡು ತಿಂಗಳಿನಿಂದ ಸರ್ಕಸ್ ಪದರ್ಶನ ಮಾಡುತ್ತಿರುವ ಸುಪರ್ ಸ್ಟಾರ್ ಸರ್ಕಸ್‍ವು ಪ್ರೇಕ್ಷಕರ ಕೊರತೆಯಿಂದ ಕಷ್ಟದಲ್ಲಿರುವುದನ್ನು ಮನಗಂಡು ಲಯನ್ಸ್ ಕ್ಲಬ್‍ದಿಂದ ಸರ್ಕಸ್ ಕಲಾವಿದರಿಗೆ ಆರ್ಥಿಕ ಅಳಿಲು ಸೇವೆ ಸಲ್ಲಿಸಿರುತ್ತೇವೆ ಎಂದರು.

ಸರ್ಕಸ್ ಕಂಪನಿಯ ಮಾಲೀಕ ಪ್ರಕಾಶ ಮಾನೆ ಮಾತನಾಡಿ, ಕಷ್ಟದ ದಿನಗಳಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ನೀಡಿರುವ ಸಹಕಾರಕ್ಕೆ ಚಿರಋಣಿಯಾಗಿರುತ್ತೇವೆ ಎಂದರು.

ಲಯನ್ಸ್ ಕ್ಲಬ್‍ನ ವೆಂಕಟೇಶ ಸೋನವಾಲಕರ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ, ಖಜಾಂಚಿ ಸುಪ್ರೀತ ಸೋನವಾಲಕರ, ಡಾ. ಎಸ್.ಎಸ್. ಪಾಟೀಲ, ಶಿವಾನಂದ ಗಾಡವಿ, ಮಹಾಂತೇಶ ಹೊಸೂರ, ಶ್ರೀಶೈಲ್ ಲೋಕನ್ನವರ, ಶಿವಾನಂದ ಕಿತ್ತೂರ, ವಿಶಾಲ ಶೀಲವಂತ, ಮಹಾವೀರ ಸಲ್ಲಾಗೋಳ, ಕೃಷ್ಣಾ ಕೆಂಪಸತ್ತಿ ಭಾಗವಹಿಸಿದ್ದರು.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!