spot_img
spot_img

ಗುರ್ಲಾಪೂರದಲ್ಲಿ ಡೊಣ್ಣೆ ಹುಳಬಾಧೆ ತಡೆಗಟ್ಟು ವಿಚಾರ ಸಂಕಿರಣ

Must Read

ಗುರ್ಲಾಪೂರ – ಗ್ರಾಮದ ಶ್ರೀ ಮಾರುತಿದೇವರ ಆವರಣದಲ್ಲಿ ಸೋಮವಾರ ದಿ 11 ರಂದು ಮಧ್ಯಾಹ್ನ 3-00 ಘಂಟೆಗೆ ಗ್ರಾಮದ ರೈತರಿಗೆ ಮೂಡಲಗಿ ತಾಲೂಕಿನ ಕೃಷಿ ಇಲಾಖೆಯ ಸಹಯೋಗದಲ್ಲಿ ಡೊಣ್ಣೆ ಹುಳದ ಬಾಧೆ ತಡೆಗಟ್ಟುವ ವಿಚಾರ ಸಂಕಿರಣ ನಡೆಸಲಾಯಿತು.

ಧನಂಜಯ ಚೌಗಲಾ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ತುಕಾನಟ್ಟಿ. ಇವರು ರೈತರಿಗೆ ಡೊಣ್ಣೆ ಹುಳದ ಬಾಧೆ ಈ ವರ್ಷ ಹೆಚ್ಚಾಗಲು ಕಾರಣವೆನೆಂದರೆ ಜೂನ್ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಭೂಮಿಯಲ್ಲಿ ಬಿಸಿಲಿನ ತಾಪ ಹೆಚ್ಚಾದ ಕಾರಣ ಡೊಣ್ಣೆಹುಳದ ಬಾಧೆ ಹೆಚ್ಚಾಗಿದೆ ಇದು ಹಚ್ಚ ಕಬ್ಬು ಮತ್ತು ಅರಿಷಣ ಬೆಳೆಗೆ ಹೆಚ್ಚು ಬಾಧೆಯಾಗಿದೆ ಎಂದರು.

ಮೂಡಲಗಿ ತಾಲುಕಿನ ಕೃಷಿ ಅಧಿಕಾರಿಗಳಾದ ಎಮ್ಎಮ್ ನದಾಫರವರು ನಮ್ಮ ಕೃಷಿ ಇಲಾಖೆಯಲ್ಲಿ ಈ ರೋಗ ತಡೆಗಟ್ಟಲು ಮೂಟಾಜೀನ ಎಂಬ ಕೀಟನಾಷಕ ಸಿಗುತ್ತದೆ ಅದನ್ನು ತಂದು ಸಿಂಪಡಿಸಬೇಕು. ಗ್ರಾಮದಲ್ಲಿ ಇರುವ ಗೊಬ್ಬರ ಮಾರಾಟಗಾರರಲ್ಲಿ ಇರುವ ಕಿಟನಾಶಕ ಪಡೆದು ಬೆಳೆಗಳನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿ, ಮೂಟಾಜೀನ ಕೀಟನಾಶಕ ಬಳಸುವ ವಿಧಾನದ ಬಗ್ಗೆ ಪೂರ್ಣ ಮಾಹಿತಿ ನೀಡಿದರು.

ಯುವ ರೈತರಾದ ಶ್ರೀಶೈಲ ಕೌಜಲಗಿ ಮಾತನಾಡಿ, ನಮ್ಮ ತಾಲೂಕಿನ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳು ರೈತರಿಗೆ ಸಿಗುವಂತೆ ಮಾಡಿರಿ ಅದು ಅಲ್ಲದೆ ಗ್ರಾಮ ಸೇವಕರು ಮೊದಲು ಅಲ್ಪ ಸ್ವಲ್ಪ ಮಾಹಿತಿ ನೀಡುತಿದ್ದರು ಈಗ ಅವರು ಇಲ್ಲದೆ ಇರುವುದರಿಂದ ಕೃಷಿ ಬಗ್ಗೆ ನಮ್ಮ ಭಾಗದ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಆದ್ದರಿಂದ ನಿಮ್ಮ ಇಲಾಖೆ ಸಿಬ್ಬಂದಿಯವರಾದರೂ ವಾರದಲ್ಲಿ ಒಂದು ದಿನ ಬಂದು ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಡುವಂತೆ ಮಾಡಬೇಕು ಎಂದು ರೈತರ ಪರವಾಗಿ ಕೇಳಿದರು.

ಆರಂಭದಲ್ಲಿ ಯುವ ದುರೀಣರಾದ ಅಶೋಕ ಗಾಣಿಗೇರ ಸ್ವಾಗತಿಸಿಕೊಂಡು ಗ್ರಾಮದ ರೈತರಿಗೆ ಆಗುವ ತೊಂದರೆಗಳ ಕುರಿತು.ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಿ.ಸಿ ಮುಗಳಖೋಡ, ಟಿ ಡಿ ಗಾಣಿಗೇರ, ಕೆ ಆರ್ ದೇವರಮನಿ, ಸಂಜು ಶೇಡಬಾಳ, ಪ್ರಕಾಶ ಮುಗಳಖೋಡ,ಶಶಿ ಮುಗಳಖೋಡ,ಶಿವಬಸು ಮರಾಠೆ ಹಾಗೂ ಕೃಷಿ ಸಿಬ್ಬಂದಿಯವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!