ಸಿಎಂ ವಿಚಾರ ಮತ್ತೆ ಮತ್ತೆ ಕೇಳಬೇಡಿ – ಸಂತೋಷ ಲಾಡ್

Must Read

ಬೀದರ – ಹೈಕಮಾಂಡ್ ಹೇಳಿದ್ದೇ ಅಂತಿಮ ಅಂತ ಪ್ರತಿಸಲ ಹೇಳಿದಾಗಲೂ ಮತ್ತೆ ಮತ್ತೆ ಮುಖ್ಯಮಂತ್ರಿ ವಿಷಯ ಕೇಳುವುದು ಸರಿಯಲ್ಲ ಎಂದು ಸಚಿವ ಸಂತೋಷ ಲಾಡ್ ಮಾಧ್ಯಮದವರ ಮೇಲೆ ಗರಂ ಆದರು.

ಬೀದರನಲ್ಲಿ ಮಾತನಾಡಿದ ಅವರು, ಸಿ ಎಂ ವಿಷಯ ಕುರಿತಂತೆ ಸಿದ್ರಾಮಯ್ಯ ಹಾಗೂ ಡಿಕೆಶಿಯವರು ಹೈಕಮಾಂಡ್ ಹೇಳಿದಂತೆ ಕೇಳವುದಾಗಿ ಹೇಳುತ್ತಲೇ ಇದ್ದಾಗಲೂ ನೀವು ಅದೇ ವಿಷಯ ಕೇಳಬೇಡಿ ಎಂದರು
ರಾಜ್ಯದಲ್ಲಿ ರಾಷ್ಟಪತಿ ಆಡಳಿತ ಬಗ್ಗೆ ಜಗದೀಶ ಶೆಟ್ಟರ ಹೇಳಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿಗರಿಗೆ ಅಧಿಕಾರಕ್ಕೆ ಬರುವ ಅವಸರವಿದೆ. ಕೇಂದ್ರದಲ್ಲಿ ಲೂಟಿ ಮಾಡುತ್ತಿದ್ದಾರೆ ಈಗ ರಾಜ್ಯದಲ್ಲಿಯೂ ಬೇಗನೇ ಅಧಿಕಾರಕ್ಕೆ ಬಂದು ಲೂಟಿ ಮಾಡುವ ಉದ್ದೇಶವಿದೆ ಅವರಿಗೆ ಎಂದರು.
ಐಎಂಎಫ್ ಭಾರತಕ್ಕೆ ಸಿ ಗ್ರೇಡ್ ಕೊಟ್ಟಿದೆ ಆದರೂ ಬಿಜೆಪಿಗರು ತುಟಿ ಬಿಚ್ಚುತ್ತಿಲ್ಲ. ಡಾಲರ್ ಇಷ್ಟರಲ್ಲಿಯೇ ನೂರು ರೂ. ಆದರೂ ಅಚ್ಚರಿಯಿಲ್ಲ ಎಂದರು

ಹಾಸ್ಯ ನಟ ಉಮೇಶ ಅವರು ನಿಧನಕ್ಕೆ ಸಂತಾಪ ಸೂಚಿಸಿದ ಲಾಡ್, ಉಮೇಶ ಒಬ್ಬ ಶ್ರೇಷ್ಠ ಹಾಸ್ಯ ನಟರಾಗಿದ್ದರು ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದರು.

ವರದಿ : ನಂದಕುಮಾರ ಕರಂಜೆ, ಬೀದರ

LEAVE A REPLY

Please enter your comment!
Please enter your name here

Latest News

ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ

ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿ ಗುರು ದತ್ತ ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ ವಿ ಶಾಂತಾರಾಮ...

More Articles Like This

error: Content is protected !!
Join WhatsApp Group