spot_img
spot_img

ಕ್ಯಾನ್ಸರ್ ಭಯ ಬೇಡ, ಅರಿವಿರಲಿ; ಆಯುಷ್ಯ ವೈದ್ಯೆ ಡಾ.ಅಶ್ವಿನಿ

Must Read

spot_img
- Advertisement -

ಸಿಂದಗಿ; ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಈ ರೋಗದ ಬಗ್ಗೆ ಭಯಪಡುವುದಕ್ಕಿಂತ ಅರಿವು ಹೊಂದುವುದು ಮುಖ್ಯ ಎಂದು ಆಯುಷ್ಯ ವೈದ್ಯೆ ಡಾ.ಅಶ್ವಿನಿ ಹೇಳಿದರು.

ಮೋರಟಗಿ ಗ್ರಾಮದ ಕಲ್ಪವೃಕ್ಷ ಪದವಿ ಮಹಾವಿದ್ಯಾಲಯದಲ್ಲಿ  ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗರ್ಭ ಕೊರಳಿನ ಕ್ಯಾನ್ಸರ್ ಕುರಿತ ಅರಿವು ಮೂಡಿಸುವ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವು ಸೆಲ್ಸ್ ಗಳು ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಬೆಳೆಯುವುದೇ ಕ್ಯಾನ್ಸರ್ ಎನ್ನಲಾಗುತ್ತದೆ. ಕ್ಯಾನ್ಸರ್ ನಲ್ಲಿ ಹಲವು ಪ್ರಕಾರಗಳಿವೆ. ಇತ್ತೀಚೆಗೆ ಕ್ಯಾನ್ಸರ್ ಹೆಚ್ಚುತ್ತಿದ್ದು, ಇದರ ಕಾರಣಗಳು ಮತ್ತು ಕ್ಯಾನ್ಸರ್ ತಡೆಯುವ ಮುಂಜಾಗ್ರತೆ ಕ್ರಮಗಳ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.

- Advertisement -

ಮಹಿಳೆಯರ ಗರ್ಭಕೋಶಕ್ಕೆ ಸಂಬAಧಿಸಿದಂತೆ ಗರ್ಭ ಕೊರಳಿನ ಕ್ಯಾನ್ಸರ್ ಕೂಡ ಹೆಚ್ಚುತ್ತಿದೆ. ಈ ಸಮಸ್ಯೆಗೆ ಮೊದಲು ಯಾವುದೇ ಚಿಕಿತ್ಸೆ ಇರಲಿಲ್ಲ. ಸದ್ಯ ಅದನ್ನು ತಡೆಗಟ್ಟಲು ವಾಕ್ಸಿನ್ ಗಳು ಲಭ್ಯವಿದ್ದು, ಈ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವುದೇ ನಮ್ಮ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಸುರಕ್ಷಿತ ಲೈಂಗಿಕತೆ, ಆರೋಗ್ಯಕರ ಆಹಾರ ಸೇವನೆ, ರಾಸಾಯನಿಕಯುಕ್ತ ಆಹಾರ ತ್ಯಜಿಸುವುದರಿಂದ ಗರ್ಭ ಕೊರಳಿನ ಕ್ಯಾನ್ಸರ್ ತಡೆಯಲು ಸಾಧ್ಯ ಎಂದರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ಕೇಳಿ ಸಂದೇಹ ಪರಿಹರಿಸಿಕೊಂಡರು.

- Advertisement -

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಶಿವಶರಣಗೌಡ ಬಿರಾದಾರ, ಆಡಳಿತ ಅಧಿಕಾರಿ ಎಸ್, ಎಚ್, ದುಳಬಾ, ಡಾ, ಸೋಮನಗೌಡ ಪಾಟೀಲ್, ಪ್ರಾಚಾರ್ಯ ಎ, ಬಿ, ಸಿಂದಗಿ, ಸಂಯೋಜಕರುಗಳಾದ ಪ್ರೊ, ಎಸ್, ಎಸ್, ನಿಗಡಿ, ಎಸ್, ಎಂ, ನಿಗಡಿ, ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಕಲ್ಪವೃಕ್ಷ ಸಂಸ್ಥೆ ಸಿಬ್ಬಂದಿಗಳು ಇದ್ದರು.

.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group