ಮೂಡಲಗಿ:-ತಾಲೂಕಿನ ಹಳ್ಳೂರು ಗ್ರಾಮದ ಯುವಕ ಯುವತಿಯರು ಭಾರತೀಯ ಶ್ರೇಷ್ಠವಾದ ಹಿಂದೂ ಧರ್ಮದ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಶ್ರೇಷ್ಠ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಉನ್ನತ ಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಧಾರ್ಮಿಕ ವಿಧಿ ವಿಧಾನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವ ಜನ್ಮ ಉದ್ದಾರ ಮಾಡಿಕೊಳ್ಳೀರೆಂದು ನಾಗರಾಳದ ಜ್ಞಾನೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ನಡೆದ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಸಾರಾಯಿ, ರೆಸ್ಟೋರೆಂಟ್ ಹಾಗೂ ಕೆಟ್ಟ ಚಟಗಳ ಸಹವಾಸ ಇದ್ದವರ ಮನೆತನ ಹಾಳಾಗುತ್ತವೆ. ಆದ್ದರಿಂದ ದೂರಾಗಿದ್ದರೆ ಒಳ್ಳೆಯದು. ಮಾನವನಾಗಿ ಹುಟ್ಟಿದ ಮೇಲೆ ಸಂಸಾರ ಮಾಡುತ್ತಾ ಪಾರಮಾರ್ಥದಲ್ಲಿದ್ದು ಮಹಾತ್ಮರ ಹೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೌಢ್ಯದ ದಾಸರಾಗಬೇಡಿರಿ ಸಿದ್ಧಾರೂಢ ಸಾಂಪ್ರದಾಯ ಇನ್ನೊಬ್ಬರಿಗೆ ವಿರೋಧವಿಲ್ಲ. ಸಿದ್ಧಾರೂಢರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜಾತಿ ಬೇಧ ಭಾವ ಮಾಡದೆ ಒಗ್ಗಟ್ಟಾಗಿ ದಾರ್ಮಿಕ ಸಾಮಾಜಿಕ ಕಾರ್ಯ ಮಾಡಿರೆಂದರು.
ಶ್ರೀಸಿದ್ಧಾರೂಢ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು.
ಈ ಸಮಯದಲ್ಲಿ ಹನಮಂತ ತೇರದಾಳ,ಕುಮಾರ ಲೋಕನ್ನವರ,ಯಮನಪ್ಪ ನಿಡೋಣಿ,ಲಕ್ಷ್ಮಣ ಕತ್ತಿ, ಬಾಬು ಸಪ್ತಸಾಗರ, ಶ್ರೀಶೈಲ ತಳವಾರ, ರಾಮಪ್ಪ ಅಟ್ಟಮಟ್ಟಿ,ಅಣ್ಣಪ್ಪ ಪಾಟೀಲ,ಪ್ರಶಾಂತ ಮಠಪತಿ,ಮುರಿಗೆಪ್ಪ ಮಾಲಗಾರ,ಬಾಳಪ್ಪ ಬಾಗೋಡಿ ಕೆಂಪಣ್ಣ ಅಂಗಡಿ,ಈರಪ್ಪ ಕಮಲದಿನ್ನಿ, ಜಗದೀಶ ಗೌರವ್ವಗೋಳ ಸೇರಿದಂತೆ ಅನೇಕರಿದ್ದರು.ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು. ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ. ಸ್ವಾಗತಿಸಿ, ನಿರೂಪಿಸಿದರು.