ಹಿರಿಯರನ್ನು ಕಡೆಗಣಿಸಬೇಡಿ, ಗೌರವಿಸಿ – ಶಿವಾನಂದ ಹಿರೇಮಠ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಸಿಂದಗಿ: ಐಷಾರಾಮಿ ಜೀವನ ಪದ್ಧತಿಯ ಹಿಂದೆ ಬಿದ್ದು ಹಿರಿಯ ನಾಗರಿಕರನ್ನು ಕಡೆಗಣಿಸಲಾಗುತ್ತಿದೆ. ಆದರೆ ಹಿರಿಯ ನಾಗರಿಕರ ಅನುಭವ, ಜೀವನ ಮೌಲ್ಯಗಳು ಸದಾಕಾಲ ಅನುಕರಣೀಯ ಎಂದು ದೇವರಹಿಪ್ಪರಗಿ ರೈತಸಂಘದ ಗೌರಾವಾಧ್ಯಕ್ಷ ಶಿವಾನಂದ ಹಿರೇಮಠ(ವರ್ಕಾನಳ್ಳಿ) ಹೇಳಿದರು.

ಸಮೀಪದ ಕೋರವಾರ ಗ್ರಾಮದಲ್ಲಿ ಕರ್ನಾಟಕ ಜನಸ್ಪಂದನ್ ಟ್ರಸ್ಟ್ ವಿಜಯಪುರ ಹಾಗೂ ಸಿಂದಗಿ ಘಟಕ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಅಧಿಕವಾಗುತ್ತಿದೆ. ಇದು ಉತ್ತಮವಾದ ಬೆಳವಣಿಗೆ ಅಲ್ಲ, ವಯಸ್ಸಾದ ಮೇಲೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಬರುವುದು ಸಹಜ ಹಾಗಂದ ಮಾತ್ರಕ್ಕೆ ಅವರನ್ನು ಕಡೆಗಣಿಸದೇ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಹಿರಿಯರನ್ನು ಗೌರವಿಸಬೇಕು ಎಂದರು.

- Advertisement -

ರೈತ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕುಳೇಕುಮಟಗಿ ಮಾತನಾಡಿ, ಸಂಘಟನೆಗಳು ಸೇವಾ ಮನೋಭಾವನೆಯಿಂದ ಸಮಾಜಕಾರ್ಯವನ್ನು ಮಾಡಬೇಕು. ಕರ್ನಾಟಕ ಜನಸ್ಪಂದನ್ ಟ್ರಸ್ಟ್ ಮೂರ್ನಾಲ್ಕು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಜನಸ್ಪಂದನ್ ಟ್ರಸ್ಟ್ ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ, ತಾಲೂಕಾಧ್ಯಕ್ಷ ನವೀನ ಶೆಳ್ಳಗಿ, ಜಿಲ್ಲಾಪ್ರಧಾನ ಸಂಚಾಲಕ ಭಾಗಣ್ಣ ತಮದೊಡ್ಡಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಮಣೂರ, ದಯಾನಂದ ಜಾಡರ್, ಸಂತೋಷ ಮನಗೂಳಿ, ಚಂದ್ರಾಮ ಕೂಚಬಾಳ, ಅಪ್ಪಣ್ಣಗೌಡ ಬಿರಾದಾರ, ಶೇಖರ ಬಿರಾದಾರ, ದಾವಲಸಾಬ ಮಂದೇವಾಲಿ, ಶ್ರೀಶೈಲ ನಾಗರಾಳ, ನಾನಾಗೌಡ ಯತ್ನಾಳ ಸೇರಿದಂತೆ ಇನ್ನಿತರರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!