ಸಿಂದಗಿ: ಕಳೆದ 5 ವರ್ಷದ ಅಧಿಕಾರಾವಧಿಯಲ್ಲಿ ನುಡಿದಂತೆ ನಡೆದು ಸಂಪೂರ್ಣ 5 ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದೆ ಅದರಂತೆ 2023ರ ಚುನಾವಣೆಯಲ್ಲಿ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸಿ ಪ್ರಮಾಣ ಪತ್ರ ನೀಡುತ್ತಿರುವುದು ಮುಂದೆ ಪಕ್ಷದ ಸಿದ್ದಾಂತದಂತೆ ನಡೆದುಕೊಳ್ಳುತ್ತದೆ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮನವಿ ಮಾಡಿದರು.
ನಗರದ ವಾರ್ಡ್ ನಂ.8 ರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ರವರ ಆದೇಶದ ಮೇರೆಗೆ 50 ಮನೆಗಳಿಗೆ ಭೇಟಿ ನೀಡಿ ಗ್ಯಾರಂಟಿ ಕಾರ್ಡ ವಿತರಣೆ ಮಾಡಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಇಕ್ಬಾಲಸಾಬ ಬಾಗವಾನ, ಪುರಸಭೆ ಉಪಾಧ್ಯಕ್ಷ ಹಾಸಿಮ ಆಳಂದ, ಮಂಜುನಾಥ ಬಿಜಾಪುರ, ರಾಜಶೇಖರ ಸಂಗಮ, ಶಿವು ಅರಳಗುಂಡಗಿ, ಸಿದ್ದು ಮಲ್ಲೆದ, ಚಾಂದ ದೇವಣಗಾಂವ, ಮೈಬುಬ ಮರ್ತುರ, ಜಬ್ಬಾರ ಮರ್ತುರ, ಶರಣು ಶ್ರೀಗಿರಿ, ಸತೀಶ ಕಲಾಲ, ರಜಾಕಸಾಬ ಜಮಾದಾರ, ವೈಜುನಾಥ ಅರಳಗುಂಡಗಿ, ಇರ್ಫಾನ ಬಾಗವಾನ, ಇಮಾಮ ಜಮಾದಾರ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.