ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಿಕ್ಕೋಡಿ ವಿಭಾಗ, ಹಾಗೂ ಗ್ರಾಮೋದಯ ಸಂಸ್ಥೆ ಬೈಲಹೊಂಗಲ, ರೂರಲ್ ಡೆವಲಪ್ಮೆಂಟ್ ಸೊಸೈಟಿ (RDS) ಸಂಸ್ಥೆ ಮುರಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ದಿನಾಂಕ 5 ರಂದು ಮನೆ ಮನೆಗೆ ಗಂಗೆ ನೀರಿನ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು.
ಚಿಕ್ಕೋಡಿ ವಿಭಾಗದ ಹುಕ್ಕೇರಿ ತಾಲ್ಲೂಕಿನ ಹೊಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುನ್ನೂರ ಗ್ರಾಮದಲ್ಲಿ , ಜಲ ಜೀವನ ಮಿಷನ್ ಯೋಜನೆಯಡಿ ಸದರಿ ಗ್ರಾಮದ ಎಲ್ಲಾ ಮನೆಗಳಿಗೂ ಶೇ.100 ರಷ್ಟು ಕಾರ್ಯಾತ್ಮಕ ನಳ ಸಂಪರ್ಕ ಕೊಡುವ ಮೂಲಕ ಗ್ರಾಮಕ್ಕೆ ಕುಡಿಯುವ ಶುದ್ಧವಾದ ನೀರನ್ನು ಒದಗಿಸಿರುವ ಪ್ರಯುಕ್ತ ಗ್ರಾಮವನ್ನು (ಹರ್ ಘರ್ ಜಲೋತ್ಸವ) ಮನೆ ಮನೆಗೆ ಗಂಗೆ ನೀರಿನ ಹಬ್ಬ ಕಾರ್ಯಕ್ರಮ ವನ್ನು ಹುನ್ನೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಇವರು ಮನೆ ಮನೆಗೆ ಗಂಗೆ ನೀರಿನ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಸದರ ನೇತೃತ್ವದಲ್ಲಿ ಹುನ್ನೂರು ಗ್ರಾಮವನ್ನೂ ಮನೆ ಮನೆಗೆ ಗಂಗೆ ಎಂದು ಘೋಷಿಸಿ ಲೋಕಾರ್ಪಣೆ ಮಾಡಲಾಯಿತು.
ಹರ್ ಘರ್ ಜಲೋತ್ಸವದ ಉದ್ದೇಶವನ್ನು ಗ್ರಾಮಸ್ಥರು ಮನೆ ಮನೆಗೆ ಗಂಗೆ ಎಂಬ ಘೋಷಣೆಗಳೊಂದಿಗೆ ಗ್ರಾಮದ ಎಲ್ಲಾ ಮಹಿಳೆಯರು ಕುಂಭ ಮೇಳದ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದರು.
ಜಾಥಾದ ನಂತರ JJM ಯೋಜನೆಯ ಗುರಿ ಉದ್ದೇಶಗಳು, ಕಾರ್ಯಾತ್ಮಕ ಗೃಹ ನಳಸಂಪರ್ಕದ ಅಳವಡಿಕೆ, ಗ್ರಾಮ ನೀರು ನಿರ್ವಹಣೆಯಲ್ಲಿ VWSC ಸದಸ್ಯರ ಪಾತ್ರ ಮತ್ತು ಜವಾಬ್ದಾರಿ, ಸಮುದಾಯವಂತಿಕೆ ಇತರೆ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಗಮಪ್ಪ ಮಲ್ಲಾಡಿ ಮತ್ತು ಆನಂದ ಬಣಗಾರ, ಕಾರ್ಯಪಾಲಕ ಅಭಿಯಂತರರು ಚಿಕ್ಕೋಡಿ , ಉಮೇಶ್ ಸಿದ್ನಾಳ ,ಕಾರ್ಯನಿರ್ವಾಹಕ ಅಧಿಕಾರಿಗಳು, ಹುಕ್ಕೇರಿ, ಮಿಶ್ರಕೋಟಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಹುಕ್ಕೇರಿ .ಹಾಗೂ ಎಂ. ಎಸ್. ಗುಡಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹೊಸೂರ, ಮತ್ತು ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ , ದೀಪಕ್ K .ಹಾಗೂ, ISRA ತಂಡದ ನಾಯಕರಾದ, ಶಿವರಾಜ್ ಹೊಳೆಪ್ಪಗೋಳ . ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹುಕ್ಕೇರಿ, ವಿಭಾಗದ ಸಹಾಯಕ ಅಭಿಯಂತರರಾದ ಸಂತೋಷ ಪಾಟೀಲ , ಚೇತನ ಕಟಕೊಳ , ವಿಕಾಸ ಮತ್ತು ಗುತ್ತಿಗೆದಾರರು, ಹಾಗೂ ಹೊಸೂರ, ಗ್ರಾಮ ಪಂಚಾಯತಿ ಎಲ್ಲ ಸಿಬ್ಬಂದಿಗಳು ಹಾಗೂ ಹುನ್ನೂರ ಊರಿನ ಗ್ರಾಮಸ್ಥರು ಉಪಸ್ಥಿತಿ ಇದ್ದರು.