ಗ್ರಂಥಾಲಯದಲ್ಲಿ ಡಾ.ಬಿ ಆರ್ ಅಂಬೇಡ್ಕರ್ “ಮಹಾ ಪರಿನಿರ್ವಾಣ ದಿನ” ಆಚರಣೆ
ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ 68 ನೆ ಪರಿನಿರ್ವಾಣ ದಿನ ಆಚರಣೆ ಮಾಡಲಾಯಿತು.
ತನ್ನಿಮಿತ್ತ ಉಪನಿರ್ದೇಶಕರಾದ ರಾಮಯ್ಯ ಅವರು ಜ್ಯೋತಿ ಬೆಳಗಿ ಗೌರವ ವಂದನೆ ಸಲ್ಲಿಸಿ ಮಾತನಾಡುತ್ತಾ, ಅಂಬೇಡ್ಕರ್ ಅವರ ಜೀವನ ಮತ್ತು ಅವರ ಪರಿಶ್ರಮ, ಜೀವನ ಶೈಲಿಯ ಬಗ್ಗೇ ಮತ್ತು ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು. ಮುಖ್ಯವಾಗಿ ಅವರ ಓದುವ ಹವ್ಯಾಸ ಮತ್ತು ಕಠಿಣ ಪರಿಶ್ರಮದ ಫಲವಾಗಿ ಅವರ ಸಾಧನೆಗಳಿಂದ ಇಂದಿಗೂ ಎಂದಿಗೂ ಅಜರಾಮರರಾಗಿದ್ದಾರೆ ಎಂದು ಹೇಳಿದರು.
ನಗರ/ ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲ ಸಿಬ್ಬಂದಿ, ಓದುಗರು,ವಿಧ್ಯಾರ್ಥಿಗಳು ಮಹಾತ್ಮರಿಗೆ ಜ್ಯೋತಿ ಬೆಳಗಿ ಗೌರವ ಸಲ್ಲಿಸಿದರು.ಡಿಸೆಂಬರ್ 6 ರಂದು ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ. ಭಾರತದಲ್ಲಿ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಎಂದು ಆಚರಿಸುತ್ತಾರೆ.ಈ ಆಚರಣೆ ನಿಮಿತ್ತ ಡಾ.ಅಂಬೇಡ್ಕರ್ ಅವರು ನಮ್ಮ ದೇಶಕ್ಕಾಗಿ ನೀಡಿದ ಸಾಂವಿಧಾನಿಕ ಮತ್ತು ಸಾಮಾಜಿಕ ಎರಡೂ ಅಪಾರ ಕೊಡುಗೆಗಳನ್ನು ನೆನೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಧೀಕ್ಷಕರಾದ ಎ ಎ ಕಾಂಬಳೆ, ಎಸ್ ಎಸ್ ಸೀಮಿಮಠ,ಲತಾ ಎಮ್, ಆನಂದ ಮುತಗಿ, ಪ್ರಕಾಶ ಇಚಲಕರಂಜಿ, ಸುಮಿತ್ ಕಾವಳೆ,ಅಂಬೇಕರ್,ಸುನೀಲ, ಸಂಗೀತಾ,ಪದ್ಮಪ್ರಿಯಾ, ಲಕ್ಮಿ, ವಸಂತ ಐಹೊಳೆ, ಈರಣ್ಣ,ಬಾಗೇವಾಡಿ, ವಿಜಯಲಕ್ಷ್ಮಿ, ಸರಸ್ವತಿ, ಲಕ್ಷ್ಮಿ, ಪೂರ್ಣಿಮಾ ಮತ್ತಿತರು ಮತ್ತು ನಗರ ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲಾ ಸಿಬ್ಬಂದಿ, ಓದುಗರು ವಿಧ್ಯಾರ್ಥಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಜೀವನ ಸಾಧನೆಯ ಕುರಿತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.