spot_img
spot_img

ವಿಶೇಷಚೇತನರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲು ಸಾಹಿತಿ ಡಾ.ಭೇರ್ಯ ರಾಮಕುಮಾರ್ ಆಗ್ರಹ

Must Read

- Advertisement -

ವಿಶೇಷ ಚೇತನರು ರಾಷ್ಟ್ರದ ಜನಸಂಖ್ಯೆಯ ಆರನೇ ಒಂದು ಭಾಗದಷ್ಟಿದ್ದು , ಗ್ರಾಮಪಂಚಾಯ್ತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ವಿಕಲಚೇತನರಿಗೆ ಶೇಕಡಾ ಮೂರರಷ್ಟು ಸ್ಥಾನವನ್ನು ಮೀಸಲಿಡಬೇಕೆಂದು ಹಿರಿಯ ಸಾಹಿತಿ ,ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದರು.

ಕೆ.ಆರ್.ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ಅಂಗವಿಕಲರು ತಮ್ಮ ಅಭ್ಯುದಯಕ್ಕಾಗಿ ರಾಜಕೀಯ ಮೀಸಲಾತಿ ಕೇಳಬೇಕೆಂದು ಕಿವಿಮಾತು ನುಡಿದರು. ರಾಜ್ಯದ ವಿವಿಧ ಇಲಾಖೆಗಳು ಜಾರಿಗೆ ತರುವ ಅಭಿವೃದ್ಧಿ ಯೋಜನೆಗಳಲ್ಲಿ ಗ್ರಾಮೀಣ ಅಂಗವಿಕಲರಿಗೆ ಶೇಕಡಾ ಐದರಷ್ಟು ಮೀಸಲು ನೀಡಬೇಕು. ಅಂಗವಿಕಲರನ್ನು ಕೆಲಸಗಳಿಗಾಗಿ ಸತಾಯಿಸುವ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ತಾಲ್ಲೂಕಿಗೊಂದು ಅಂಗವಿಕಲರ ಉದ್ಯೋಗ ವಿನಿಮಯ ಕೇಂದ್ರ ಆರಂಭಿಸಬೇಕು. ಆಯಾ ಗ್ರಾಮದ ವ್ಯಾಪ್ತಿಯ ಅಂಗವಿಕಲರ ಶಿಕ್ಷಣ,ಆರೋಗ್ಯ, ಅವರ ನಿವಾಸದ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ದಿ.. ಇವುಗಳನ್ನು ಗ್ರಾಮಪಂಚಾಯ್ತಿ ಗಳಿಗೆ ಕಡ್ಡಾಯವಾಗಿ ವಹಿಸಬೇಕು. ಜಿಲ್ಲಾ ಹಾಗೂ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ಸಾಧಕ ಅಂಗವಿಕಲರನ್ನೂ ಗುರ್ತಿಸಬೇಕು ಎಂದು ಸರ್ಕಾರವನ್ನು ಆಗ್ರಹಪಡಿಸಿದರು.

- Advertisement -

ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೆಚ್.ಕೆ. ಸತೀಶ್ ಅವರು ಮಾತನಾಡಿ ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಅಂಗವಿಲರಿಗೆ ಆಶ್ರಯ ಮನೆ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಯಾವುದಾದರೂ ಅಂಗವಿಲರು ತೊಂದರೆಯಿದ್ದಲ್ಲಿ ತಮ್ಮನ್ನು ಭೇಟಿ ಮಾಡಿ ಸೌಲಭ್ಯಗಳನ್ನು ಪಡೆಬಹುದು ಎಂದು ನುಡಿದರು.

ವಿಶೇಷ ಚೇತನರಾದ ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಗಿರೀಶ್ ಹಾಗೂ ಶೀಗವಾಳು ಗ್ರಾಮ ಪಂಚಾಯ್ತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜಿ.ಬಿ.ಯೋಗಾನಂದ ವಿಶೇಷ ಚೇತನರಾದ ತಾವು ಬದುಕಿನಲ್ಲಿ ಸಾಧಕರಾಗಿ , ತಮ್ಮ ಬಾಳು ಕಟ್ಟಿಕೊಂಡ ಸಮಗ್ರ ವಿವರಗಳನ್ನು ಸಭೆಯಲ್ಲಿ ವಿವರಿಸಿದರು.

ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಮತಿ ಕೆ.ಆರ್.ಪೂರ್ಣಿಮಾ ಸಭೆಯಲ್ಲಿ ಮಾತನಾಡಿ ತಮ್ಮ ಇಲಾಖೆಯ ವತಿಯಿಂದ ವಿಶೇಷ ಚೇತನರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ವಿವರಿಸಿದರು. ಶಿಕ್ಷಣಾಧಿಕಾರಿಗಳಾದ ರುದ್ರಪ್ಪ ಅವರು ಮಾತನಾಡಿ ಮಾತನಾಡಿ ವಿಶೇಷ ಚೇತನ ಬಾಲಕ-ಬಾಲಕಿಯರನ್ನು ಅಪಹರಿಸಿ ಅವರಿಂದ ಬಿಕ್ಷೆ ಬೇಡಿಸಿ ಹಣ ಮಾಡುವ ಕ್ರಿಮಿನಲ್ ಗುಂಪುಗಳು ದೊಡ್ಡದೊಡ್ಡ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.ಇಂತಹ ಕೃತ್ಯಗಳ ಬಗ್ಗೆ ಸ್ವಯಂಸೇವಾ ಸಂಸ್ಥೆಗಳು ಗಮನಹರಿಸಬೇಕು ಎಂದು ನುಡಿದರು.

- Advertisement -

ವಿಶೇಷಚೇತನರ ತಾಲ್ಲೂಕು ಸಂಯೋಜಕ ಕೆ.ಎಲ್.ಹೇಮಂತಕುಮಾರ್ ಸಭೆಯಲ್ಲಿ ಮಾತನಾಡಿ, ತಾಲ್ಲೂಕಿನ ಎಲ್ಲಾ ವಿಶೇಷ ಚೇತನರೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯು .ಡಿ.ಐ.ಡಿ. ಕಾರ್ಡ್ ಗಳನ್ನು ಕಡ್ಡಾಯವಾಗಿ ಪಡೆಯಬೇಕು.ಆ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಕರೆ ನೀಡಿದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಉಪಶಮನ ಆರೈಕೆ ಕೇಂದ್ರ ದ ವೈದ್ಯಾಧಿಕಾರಿಗಳಾದ ಡಾ.ವಿದ್ಯಾ.ಎನ್. ಮಾತನಾಡಿ ವಿಶೇಷ ಚೇತನರಿಗೆ ತಮ್ಮ ಸಂಸ್ಥೆಯ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿದರು.

ವಿಶೇಷ ಚೇತನರಾದ ಲಿಂಗರಾಜು ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಆರೋಗ್ಯ ಕಾರ್ಯಕರ್ತರಾದ ರವಿ ಸ್ವಾಗತಿಸಿದರು.ಮೇಲ್ವಿಚಾರಕರಾದ ಬೋರಯ್ಯ ಕಾರ್ಯಕ್ರಮ ನಿರ್ವಹಿದರು. ಕಾರ್ಯಕ್ರಮ ವ್ಯವಸ್ಥಾಪಕರಾದ ಎಂ.ಪಿ.ರಮೇಶ್ ಪ್ರಸ್ತಾವಿಕ ನುಡಿಗಳನ್ನಾಡಿದರು.ಆರೋಗ್ಯ ಕಾರ್ಯಕರ್ತರಾದ ನಟರಾಜು ವಂದಿಸಿದರು.

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group