ಬೆಳಗಾವಿ ಜಿಲ್ಲಾ ಕಸಾಪದಿಂದ ಡಾ.ಚನ್ನಬಸವ ಪಟ್ಟದ ದೇವರ ಜಯಂತಿ

Must Read

ಬೆಳಗಾವಿ – ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಬಾಲ್ಕಿ ಪೂಜ್ಯ ಡಾ.ಚನ್ನಬಸವ ಪಟ್ಟದೇವರ 132 ನೇ ಜಯಂತಿಯನ್ನು ನೆಹರು ನಗರದ ಕನ್ನಡ ಭವನದಲ್ಲಿ ಆಚರಿಸಲಾಯಿತು. ಉಪನ್ಯಾಸ ನೀಡಿದ ಶ್ರೀಮತಿ ಸುನಂದಾ ಎಮ್ಮಿ ಅವರು ಮಾತನಾಡುತ್ತ ಡಾ. ಚನ್ನಬಸವ ಪಟ್ಟದೇವರು 20ನೇ ಶತಮಾನದ ಮಹಾನ್ ಶರಣರು.

ಆಗಿನ ನಿಜಾಮನ ಆಡಳಿತದಲ್ಲಿ ಕನ್ನಡ ಕಲಿಯುವದು ಅಪರಾಧ ಎಂದು ಆದೇಶಿಸಿದ್ದರು. ಇಂತಹ ಸಂದರ್ಭದಲ್ಲಿ ಬಸವಾದಿ ಶರಣರ ವಚನಗಳ ಅಧ್ಯಯನಕ್ಕೆ ಕನ್ನಡ ಅವಶ್ಯವಾಗಿ ಬೇಕು ಎಂದು ತಿಳಿದು ಹೊರಗೆ ಉರ್ದು ಶಾಲೆಯ ಬೋರ್ಡ್ ಹಾಕಿ ಮಠದೊಳಗೆ ಕನ್ನಡವನ್ನು ಕಲಿಸುತ್ತಿದ್ದರು.

ಅನಾಥ ಮಕ್ಕಳಿಗೆ ಭಿಕ್ಷೆ ಎತ್ತಿ ಪ್ರಸಾದ ಹಾಗೂ ಕನ್ನಡದಲ್ಲಿ ಜ್ಞಾನ ದಾಸೋಹ ನೀಡಿದ ಮಹಾನ್ ಶರಣರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಜಿಲ್ಲಾ ಕಸಾಪ ಅಧ್ಯಕ್ಷ ಮೋಹನಗೌಡ ಪಾಟೀಲ ಅವರು ಮಾತನಾಡುತ್ತ ಡಾ. ಚನ್ನಬಸವ ಪಟ್ಟದೇವರು ಯುಗ ಪುರುಷ ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಅಧ್ಯಕ್ಷತೆ ವಹಿಸಿ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪೂಜ್ಯರ ಸೇವೆಯನ್ನು ಕಲ್ಯಾಣ ಕರ್ನಾಟಕದ ಹಿರಿಯರಿಂದ ಕೇಳಿ ತಿಳಿದುಕೊಂಡ ಸಾಕಷ್ಟು ವಿಷಯಗಳನ್ನು ವಿವರಿಸಿದರು. ವೀರಭದ್ರಅಂಗಡಿ ಸ್ವಾಗತಿಸಿದರು. ಎಂ. ವೈ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು.

ಆರ್ ಎಸ್ ಚಾಪಗಾವಿ ವಂದಿಸಿದರು. ಸಾಹಿತಿಗಳಾದ ಭಾರತಿ ಮಠದ ‘ಎಸ್.ಎಸ್.ಪಾಟೀಲ, ಮಹಾದೇವಿ ಪಾಟೀಲ, ವಾಸಂತಿ ಮೇಳೇದ ‘ಅಕ್ಕಮಹಾದೇವಿ ತೆಗ್ಗಿ, ಸಿ.ಎಂ ಬೂದಿಹಾಳ, ಪ್ರತಿಭಾ ಕಳ್ಳಿಮಠ, ಶೈಲಜಾ ಬಿಂಗೆ ‘ಜಯಶೀಲಾ ಬ್ಯಾಕೋಡ್ ‘ ಆನಂದ ಬೆಳಗಾವಿ ಮುಂತಾದವರು ಉಪಸ್ಥಿತರಿದ್ದರು.

Latest News

ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ ಕಾರ್ಯಕ್ರಮ

ಬೆಳಗಾವಿ - ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ ಬೆಳಗಾವಿಯಲ್ಲಿ ದಿನಾಂಕ.09.11.2025ರಂದು ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ,...

More Articles Like This

error: Content is protected !!
Join WhatsApp Group