ವಚನ ಪಿತಾಮಹ ಡಾ ಫ ಗು ಹಳಕಟ್ಟಿಯವರು ಮಗ ಮತ್ತು ಮಡದಿ ಹಳಕಟ್ಟಿಯವರ ಕಣ್ಣು ಮುಂದೆಯೇ ಲಿಂಗೈಕ್ಯರಾದರು. ಸಾವು ನೋವು ಡಾ ಫ ಗು ಹಳಕಟ್ಟಿ ಅವರಿಗೆ ಸಹಜವಾಗಿದ್ದವು.
ಸಾಯುವ ನಾಲ್ಕು ದಿನ ಮುನ್ನ ಅವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಬಬಲೇಶ್ವರ ಶಾಂತವೀರ ಸ್ವಾಮಿಗಳು ಹಾಸಿಗೆಯ ಮೇಲೆ ಮಲಗಿದ್ದ ಡಾ ಫ ಗು ಹಳಕಟ್ಟಿ ಅವರನ್ನು ನಿಮಗೆ ಮತ್ತೇನಾದರೂ ಬೇಕಾ .? ಎಂದು ಪ್ರಶ್ನಿಸಿದರಂತೆ. ಶಾಂತವೀರ ಸ್ವಾಮಿಗಳು ಕೇಳಿದ್ದು ತಿನ್ನಲು ಏನಾದರೂ ತರಬೇಕಾ ಅಥವಾ ಔಷಧಿ
ಮಾತ್ರೆಗಳೇನಾದರೂ ಬೇಕಾ ಎಂಬರ್ಥದಲ್ಲಿದ್ದರೆ, ಡಾ ಫ ಗು ಹಳಕಟ್ಟಿ ಅವರು ಬಯಲೊಳಗೆ ಬಯಲಾಗುವ ಶರೀರವು ಏನು ತಿಂದು ಏನಾಗುವುದು ಎಂದು ಯೋಚಿಸಿ. ಅತ್ಯಂತ ಸಂಕೋಚದಿಂದ ಮುಜುಗರ ಮನದಿಂದ ಬಬಲೇಶ್ವರ ಸ್ವಾಮಿಗಳನ್ನು ಉದ್ಧೇಶಿಸಿ ತಮ್ಮ ತಲೆದಿಂಬಿನ ಕೆಳಗಡೆಯಿಂದ ಕೆಲ ಕಾಗದಗಳನ್ನು ತೆಗೆದು ” ಸ್ವಾಮಿಗಳೇ ಇನ್ನು ಹತ್ತು ವಚನ ಅಚ್ಚುಹಾಕಿಸಬೇಕಿದೆ ತಾವು ದಯವಿಟ್ಟು ಆ ವಚನಗಳನ್ನು ಅಚ್ಚು ಹಾಕಿ ಪ್ರಿಂಟ್ ಮಾಡಿಸಿದರೆ ಮಹದುಪಕಾರವಾಗುತ್ತದೆ ಎಂದು ವಿನಂತಿಸಿಕೊಂಡರಂತೆ !
ಇದರಿಂದ ಸಾಯುವ ಕೆಲವೆ ದಿನಗಳ ಮುನ್ನ ಡಾ ಫ ಗು ಹಳಕಟ್ಟಿ ಅವರು ಎಷ್ಟೊಂದು ವಚನಗಳ ಸಂಪಾದನೆ ತಾಡೋಲೆಗಳ ಅಧ್ಯಯನದಲ್ಲಿ ಮುಳುಗಿದ್ದರು ಎಂದು ತಿಳಿದು ಬರುತ್ತದೆ. ಅವರ ಆತ್ಮಕ್ಕೊಂದು ಸಲಾಮು .
ಒಮ್ಮೆ ಕೂಗಿದರೆ ಏಳು ಸಲ ಪ್ರತಿಧ್ವನಿಸುವ ಗೋಲ ಗುಂಬಜ ಆದರೆ ಡಾ ಫ ಗು ಹಳಕಟ್ಟಿ ಅವರ ಸಾಧನೆ ಸೂರ್ಯ ಚಂದ್ರವಿರುವವರೆಗೆ ಸ್ಮರಣೀಯವಾಗಿರುತ್ತದೆ.
ಅವರು ಲಿಂಗೈಕ್ಯರಾದಾಗ ಕೇವಲ ನೂರಾರು ಜನ ಮಾತ್ರ ಮಣ್ಣಿಗೆ ಬಂದಿದ್ದರಂತೆ. 1903 ರಲ್ಲಿ ಎಲ್ ಎಲ್ ಬಿ ಪದವಿ ಪಡೆದ ಮಹಾ ಕ್ರಿಯಾಶೀಲ ಕನ್ನಡ ನೆಲಕ್ಕೆ ವಚನಗಳ ಪರಿಚಯಿಸಿ ವಚನಗಳ ಪಿತಾಮಹವೆಂದೆನಿಸಿಕೊಂಡರು.
————————————
ಸಂಗ್ರಹದಿಂದ – ಡಾ .ಶಶಿಕಾಂತ.ಪಟ್ಟಣ ರಾಮದುರ್ಗ
.