ಡಾ|| ಬಿ.ಎನ್.ವಿ. ಜ್ಯೋತಿ ರತ್ನ ಪ್ರಶಸ್ತಿ ಕಾರ್ಯಕ್ರಮ ದಿನಾಂಕ 02-02-2025 ರ ಭಾನುವಾರ ಸಂಜೆ ಘಂಟೆಗೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ಸಾಧಕರಾದ ಡಾ.ಮದನ್ ಹಾಗೂ ಡಾ. ಎಲ್. ಶ್ರೀ ಧರ್ ಅವರಿಗೆ ನೀಡಲಾಯಿತು,
ಮುಖ್ಯ ಅತಿಥಿಯಾಗಿ ಖ್ಯಾತ ಕೈಗಾರಿಕೋದ್ಯಮಿ ಎಂ.ವಿ. ಸತ್ಯನಾರಾಯಣ ಮಾತನಾಡಿ ಬಿ.ಎನ್.ವಿ. ಯವರ ಸಾಧನೆ ಹಾಗೂ ಒಡನಾಟವನ್ನು ಸ್ಮರಿಸಿದರು,
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿ ಎಂ. ನರಸಿಂಹನ್* ಮಾತನಾಡಿ, 9 ವರ್ಷಗಳಿಂದ ಬಿ.ಎನ್.ವಿ. ಯವರ ಎಲ್ಲಾ ಕಾರ್ಯಕ್ರಮ, ಕೆಲಸವನ್ನು ಮುಂದುವರೆಸಿಕೂಂಡು ಬರಲಾಗುತ್ರಿದ್ದು, ಈ ಪ್ರಶಸ್ತಿ ಸಮಾರಂಭ ಇಬ್ಬರು ಡಾಕ್ಟರ್ ಸಾಧಕರಿಗೆ ನೀಡುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ದಿವಂಗತ ಹೆಚ್.ಎನ್. ಹಿರಿಯಣ್ಣಸ್ವಾಮಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು, ಕಾರ್ಯಕ್ರಮ ದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಾದ ಶ್ರೀ ಮತಿ ಸೀತಾಸುಬ್ರಮಣ್ಯ, ರಥಯಾತ್ರೆಸುರೇಶ್, ಸತ್ಯೆಂದ್ರ, ಟ್ರಸ್ಟ್ ನ ಸದಸ್ಯರು, ಡಾ. ಬಿ.ಎನ್.ವಿ. ಸುಬ್ರಹ್ಮಣ್ಯ ಅವರ ಅಭಿಮಾನಿಗಳು, ಆತ್ಮೀಯರು , ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು,