spot_img
spot_img

ಡಾ. ಅಂಬೇಡ್ಕರ್ ಮಾರ್ಗದಲ್ಲಿ ನಾವೆಲ್ಲ ನಡೆಯೋಣ – ಅಶೋಕ ಮನಗೂಳಿ

Must Read

- Advertisement -

ಸಿಂದಗಿ: ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆದು ಸೂರ್ಯ ಚಂದ್ರರಿರುವವರೆಗೂ ತಮ್ಮ ಹೆಸರು ಅಜರಾಮರವಾಗಿ ಉಳಿಸುವ ನಿಟ್ಟಿನಲ್ಲಿ ಸಂವಿಧಾನ ರಚಿಸಿ ಬಡವರು, ಹಿಂದುಳಿದ ವರ್ಗಗಳ  ಕೈ ಬಲಪಡಿಸಿದ್ದಾರೆ. ಡಾ.ಬಾಬಾಸಾಹೇಬರ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ತಾಲೂಕಿನ ಮೋರಟಗಿ ಸಮೀಪದ ಬಗಲೂರ ಗ್ರಾಮದಲ್ಲಿ ಸಾಯಂಕಾಲ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ ಅವರ 132 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಜಾತಿಯತೆಯನ್ನು ನಿರ್ಮೂಲನೆ ಮಾಡಿ ಅಸ್ಪೃಶ್ಯತೆಯನ್ನು ತೊಲಗಿಸಿದ ಕೀರ್ತಿ ಡಾ.ಬಿ. ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು. 

ಸಿಂದಗಿ ಸಿಪಿಐ ಡಿ. ಹುಲಗೆಪ್ಪಾ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಬಾಬಾಸಾಹೇಬ್ ಅಂಬೇಡ್ಕರ್ ಎಂದು ಕರೆಯಲಾಗುತ್ತಿತ್ತು ಮತ್ತು ಅವರು ಭಾರತೀಯ ಸಂವಿಧಾನದ ವಾಸ್ತುಶಿಲ್ಪಿಗಳಲ್ಲಿ ಒಬ್ಬರು ಎಂದು ಎಲ್ಲರಿಗೂ ತಿಳಿದಿದೆ. ಅವರು ಅತ್ಯಂತ ಪ್ರಸಿದ್ಧ ರಾಜಕೀಯ ನಾಯಕ, ಪ್ರಖ್ಯಾತ ನ್ಯಾಯಶಾಸ್ತ್ರಜ್ಞ, ಬೌದ್ಧ ಕಾರ್ಯಕರ್ತ, ತತ್ವಜ್ಞಾನಿ, ಮಾನವಶಾಸ್ತ್ರಜ್ಞ, ಇತಿಹಾಸಕಾರ, ವಾಗ್ಮಿ, ಬರಹಗಾರ, ಅರ್ಥಶಾಸ್ತ್ರಜ್ಞ, ವಿದ್ವಾಂಸ ಮತ್ತು ಸಂಪಾದಕರಾಗಿದ್ದರು ಎಂದು ತಿಳಿಸಿದರು.

- Advertisement -

ಈ ವೇಳೆ ಜಿಲ್ಲಾ ಡಿ.ಎಸ್.ಎಸ್, ಸಂಚಾಲಕ ವಾಯ್.ಸಿ.ಮಯೂರ್ ಮಾತನಾಡಿ, ಇಂದು ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ. ಪ್ರತಿ ವರ್ಷ ಏಪ್ರಿಲ್ 14 ರಂದು ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದರು.

ಬಗಲೂರಿನ ವೇದಮೂರ್ತಿ ಶ್ರೀ ಗುರಲಿಂಗಯ್ಯ ಸ್ವಾಮಿಗಳು  ದಿವ್ಯ ಸಾನ್ನಿಧ್ಯ ವಹಿಸಿದ್ದರು. ದಾವಲಮಲಿಕ್ ಮುತ್ಯಾ ಬಗಲೂರ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ವಿಠೋಬ ಮಾಗಣಗೇರಿ,  ಶ್ರೀನಿವಾಸ್ ಓಲೇಕಾರ್, ಪರಶುರಾಮ ಕಾಂಬ್ಳೆ, ಶರಣು ಚಲವಾದಿ, ದ.ಸಂ.ಸ. ಸಂಚಾಲಕರು ಸಿಂದಗಿ, ಮಾಜಿ ಜಿ.ಪಂ ಸದಸ್ಯ ಎನ್.ಆರ್ ತಿವಾರಿ, ಎಂ.ಕೆ ಕಣ್ಣಿ, ದ.ಸಂ.ಸ. ಸಂಚಾಲಕರು ಧರ್ಮರಾಜ ಯಾಂಟಮಾನ ಸೇರಿದಂತೆ ಅನೇಕರು ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group