ಸವದತ್ತಿ: ಸಪ್ಟಂಬರ್ 17 ರಂದು ನಡೆಯುವ ಬೃಹತ್ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಲಸಿಕೆ ಹಾಕಿಸದೇ ಉಳಿದವರನ್ನು ಕರೆತಂದು ಅವರಿಗೆ ಲಸಿಕೆ ಹಾಕಿಸುವುದರ ಮೂಲಕ ಈ ಒಂದು ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸೊಣ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಮಹೇಶ ಚಿತ್ತರಗಿ ಹೇಳಿದರು.
ಅವರು ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಸಪ್ಟಂಬರ 17 ರಂದು ನಡೆಯುವ ಬೃಹತ್ ಕೊವೀಡ್ ಲಸಿಕಾ ಆಬಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈ ಅಭಿಯಾನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಆಶಾ ಅಂಗನವಾಡಿ ಕಾರ್ಯಕರ್ತರು ಮತ್ತು ನಮ್ಮ ಆರೊಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು ಮತ್ತು ಶಿಕ್ಷಕರು ಪಂಚಾಯತ ಸಿಬ್ಬಂದಿಗಳು ಪಿಡಿಓಗಳು ಇದರಲ್ಲಿ ಕೆಲಸ ಮಾಡಲಿದ್ದಾರೆ. ಸವದತ್ತಿ ತಾಲೂಕಿನ ಜನರು ಲಸಿಕೆ ಹಾಕಿಸದೇ ಉಳಿದವರು ಲಸಿಕೆ ಹಾಕಿಸಿಕೊಂಡು ಮಹಾಮಾರಿ ಕೊರೊನಾ ರೋಗವನ್ನು ಓಡಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ತಹಶೀಲ್ದಾರ ಪ್ರಶಾಂತ ವಿ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ “ಲಸಿಕಾ ಅಭಿಯಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ತಾಲೂಕಿನಲ್ಲಿ ನಡೆಯಬೇಕು. ಗ್ರಾಮಗಳಲ್ಲಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಿ ಮನವರಿಕೆ ಮಾಡಿ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳಲು ಮನವರಿಕೆ ಮಾಡಿರಿ. ಈ ಅಭಿಯಾನದಲ್ಲಿ ನಿಯೊಜಿತಗೊಂಡ ಎಲ್ಲ ಸರಕಾರಿ ನೌಕರರು ಬಹಳಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರು ಮೊದಲನೆಯ ಹಂತದ ಲಸಿಕೆ ಅವಧಿ ಮುಗಿದಿದ್ದರೆ ಕೊಡಲೇ ಎರಡನೇಯ ಹಂತದ ಲಸಿಕೆ ಹಾಕಿಸಿಕೊಳ್ಳಬೇಕು” ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಈ ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ ಎನ್ ಮಾರೆಡ್ಡಿ ನರೆಗಾ ಯೋಜನೆಯ ಸಹಾಯಕ ನಿರ್ದೇಶಕ ಸಂಗನಗೌಡಾ ಹಂದ್ರಾಳ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಬಾಗವಹಿಸಿದ್ದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಶೋಕ ಮುರಗೊಡ ರವರು ಕೊವೀಡ್ ಲಸಿಕೆ ಹಾಕುವ ಮೊಬೈಲ ಆ್ಯಪ್ ಡಾಟಾ ಎಂಟ್ರಿ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.