spot_img
spot_img

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

Must Read

spot_img
- Advertisement -

ಹೊಸದೆಹಲಿ – ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ

೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦ ರ ವರೆಗೆ ಭಾರತೀಯ ರಿಸರ್ವ ಬ್ಯಾಂಕ್ ಗವರ್ನರ್ ಆಗಿದ್ದರು. ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. ೧೯೯೧ ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದರು.

೨೦೨೪ ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದ ಮನಮೋಹನ ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು

- Advertisement -

೧೯೩೨ ರಲ್ಲಿ ಪಂಜಾಬನಲ್ಲಿ ಜನಿಸಿದ ಅವರು ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಒಂದು ಸಂದರ್ಭದಲ್ಲಿ ದೇಶದ ಚಿನ್ನವನ್ನು ಅಡವಿಟ್ಟು ಆರ್ಥಿಕ ಚೇತರಿಕೆ ತಂದುಕೊಟ್ಟವರೆಂದು ಹೆಸರು ಗಳಿಸಿದ್ದರು ಮನಮೋಹನ ಸಿಂಗ್

ಮುಕ್ತ ವ್ಯಾಪಾರ, ಖಾಸಗೀಕರಣ ಜಾಗತೀಕರಣದಂಥ ತತ್ವಗಳಿಂದ ದೇಶವನ್ನು ಮುನ್ನಡೆಸಿ ಆರ್ಥಿಕ ಚೇತರಿಕೆಗೆ ಕಾರಣರಾಗಿದ್ದರು.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

- Advertisement -

ಗೋಕಾಕ – ಮಾಜಿ ಪ್ರಧಾನಿ, ಭಾರತರತ್ನ ಡಾ. ಮನ ಮೋಹನ್ ಸಿಂಗ್ ಅವರ ನಿಧನಕ್ಕೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶೋಕ ವ್ಯಕ್ತಪಡಿಸಿದ್ದಾರೆ.

ಇವರ ನಿಧನದಿಂದ ಭಾರತ ಹಿರಿಯ ಮುತ್ಸದ್ದಿಯನ್ನು ಕಳೆದುಕೊಂಡಿದೆ. ಮೃದು ಸ್ವಭಾವದ ಅರ್ಥಿಕ ತಜ್ಞರಾಗಿದ್ದ ಸಿಂಗ್ ಅವರ ನಿಧನದಿಂದ ನಮ್ಮ ದೇಶಕ್ಕೆ ಅಪಾರ ಹಾನಿಯಾಗಿದೆ. ಸುಮಾರು ೧೦ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು. ನಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನಕ್ಕೆ ಅವರು ಭಾಜನರಾಗಿದ್ದರು ಎಂದು ಡಾ. ಸಿಂಗ್ ಅವರ ಕೊಡುಗೆಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಮರಿಸಿಕೊಂಡು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

- Advertisement -
- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group