ನಾಡೋಜ ಡಾ. ಮಹೇಶ ಜೋಶಿ ಈ ನಾಡು ಕಂಡಂತಹ ಅಪರೂಪದ ಪ್ರತಿಭೆ ಪ್ರತಿಭೆಯನ್ನೆ ಒರೆಗೆ ಹಚ್ಚಿ ಗೆದ್ದಂತ ಫಕೀರ!

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಕನ್ನಡ ನಾಡು, ನುಡಿ ಅಭಿವೃದ್ಧಿಗೆ ಉತ್ತಮ ಕಾರ್ಯಗಳಿಗೆ ಮುಂದಾಗಿ, ಅನೇಕ ಕಡೆ ಕನ್ನಡ ಭಾಷೆ ಕ್ಷೀಣಿಸುತ್ತಿದ್ದು , ಇಂತಹ ಸ್ಥಳಗಳಲ್ಲಿ ಕನ್ನಡ ಕಲಿಸುವ ಕೆಲಸವಾಗಬೇಕು, ಕವಿಗಳ, ಸಾಹಿತಿಗಳ ಪುಸ್ತಕ, ಕವನಗಳನ್ನು ಯುವ ಪೀಳಿಗೆಗೆ ತಿಳಿಸಬೇಕು, ಪರಿಷತ್ ಗೆ ಹೊಸದೊಂದು ಮುನ್ನುಡಿಯನ್ನು ಬರೆಯಬೇಕೆಂದು ಹಂಬಲಿಸಿ ಸಾರಥಿಯಾದ ನಾಡೋಜ ಡಾ. ಮಹೇಶ ಜೋಶಿಯವರ ಸಾಧನೆಯ ಸಫಲತೆ ಅವರನ್ನು ಕೈ ಬಿಡಲಿಲ್ಲ. ಅದು ಅವರ ಪ್ರಾಮಾಣಿಕ ದುಡಿಮೆಯ ಫಲ.

ಹೌದು ನಾಡೋಜ ಡಾ. ಮಹೇಶ ಜೋಶಿಯವರು ಈ ನಾಡು ಕಂಡಂತಹ ಅಪರೂಪದ ಪ್ರತಿಭೆ. ಪ್ರತಿಭೆಯನ್ನೆ ಓರೆಗೆ ಹಚ್ಚಿ ಗೆದ್ದಂತ ಫಕೀರ.

ಕನ್ನಡ ಏಕೀಕರಣ ಬಳಿಕ ಅಧಿಕಾರ ವಿಕೇಂದ್ರೀಕರಣಗೊಂಡು ಕನ್ನಡ ಸಾಹಿತ್ಯ ಪರಿಷತ್ ವಿಸ್ತಾರವಾಗಿ ಬೆಳೆಯುತ್ತಿದ್ದು, ಶಾಲಾ ಕಾಲೇಜಿನ ಮೂಲಕ ಕನ್ನಡಾಸಕ್ತರನ್ನು ಸೆಳೆದು, ಯುವ ಸದಸ್ಯರನ್ನು ಸೇರಿಸುವ ಅಗತ್ಯತೆ ತುಂಬಾ ಇದೆ. ಇದಕ್ಕಾಗಿ ಶೋತೃಗಳ ಬಗ್ಗೆ ಗಮನ ಹರಿಸುವ ಬದಲಾಗಿ ವಿವಿಧ ಕ್ಷೇತ್ರಗಳ ಪಂಡಿತರನ್ನು ಕರೆಸಿ ಕೃತಿ ಚರ್ಚೆ ನಡೆಸಬೇಕು. ಮಾತ್ರವಲ್ಲದೆ ಜನಸಾಮಾನ್ಯರನ್ನು ಕೂಡಾ ಸೇರಿಸಿಕೊಂಡು ಪರಸ್ಪರ ಸಂವಾದ, ಉಪನ್ಯಾಸ, ಕಾವ್ಯವಾಚನ, ವಿದ್ಯಾರ್ಥಿಗಳಿಗೆ ಕಥೆ, ಕವನ ಸ್ಪರ್ಧೆ ಮತ್ತಿತರ ವೈವಿಧ್ಯಮಯ ಕಾರ್ಯಕ್ರಮ ಗಳಿಗೆ ಶೋತೃಗಳು ತಾವಾಗಿಯೇ ಪಾಲ್ಗೊಳ್ಳುವಂತಹ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎನ್ನುವ ಜೋಶಿವರು ಆ ನಿಟ್ಟಿನಲ್ಲಿ ಸೇವೆಗೈಯಲು ಹವನಿಸುತಿದ್ದಾರೆ. ಕಸಾಪ ಮತದಾರ ಅವರನ್ನು ಕೈ ಬಿಡಲಿಲ್ಲ.

ಅವರಲ್ಲೊಬ್ಬ ಅಪರೂಪದ ಸಮಾಜಸೇವಕನಿದ್ದಾನೆ. ಮಿಡಿಯುವ ಹೃದಯವಂತಿಕೆ ಇದೆ. ಅಪರೂಪರಲ್ಲಿ ಅಪರೂಪದ ವ್ಯಕ್ತಿತ್ವ ಮಹೇಶ ಜೋಶಿಯವರದು.

ಜೋಶಿಯವರು ಭಾರತೀಯ ಪ್ರಸಾರ ಸೇವೆ ಹೆಚ್ಚುವರಿ ಮಹಾ ನಿರ್ದೇಶಕರಾಗಿ, ದಕ್ಷಿಣ ವಲಯ ದೂರದರ್ಶನದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಬಿ.ಎ, ಕಾನೂನು ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮ ಡಿಪ್ಲೊಮಾ, ಮಾಧ್ಯಮ ಮತ್ತು ಮಾನವ ಹಕ್ಕುಗಳ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದವರು, ಇವರ ಸೇವೆಗೆ ಗುಲ್ಬರ್ಗ ವಿಶ್ವವಿದ್ಯಾ ನಿಲಯದಿಂದ ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಗಾಗಿ ಗೌರವ ಡಾಕ್ಟರೇಟ್ ನೀಡಲಾಗಿದೆ.

ಕನ್ನಡ ನಾಡು ನುಡಿ ಕ್ಷೇತ್ರಕ್ಕೆ ನೀಡಿರುವ ಮಹತ್ವದ ಕೊಡುಗೆಯನ್ನು ಗುರುತಿಸಿ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ನಾಡೋಜ ಗೌರವ ಪದವಿ ಪ್ರದಾನ ಮಾಡಿದೆ. ಮಾಧ್ಯಮ ಕ್ಷೇತ್ರದಲ್ಲಿ ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯ ಗೌರವಾನ್ವಿತ ವಿಶಿಷ್ಟ ಪ್ರಾಧ್ಯಾಪಕ ಎಂದು ನೇಮಿಸಿತು.

ಭಾರತೀಯ ಪ್ರಸಾರ ಸೇವೆಯ ಹಿರಿಯ ಅಧಿಕಾರಿಯಾಗಿದ್ದು, ಮಾಧ್ಯಮದಲ್ಲಿ 30 ವರ್ಷಗಳ ಅಪಾರ ಅನುಭವ. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳ ಆಪ್ತ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, ವಿಧಾನಮಂಡಲ ಮತ್ತು ಮಾಧ್ಯಮಗಳ ನಡುವೆ ಹಿತಕರವಾದ ಮತ್ತು ಅರ್ಥಪೂರ್ಣವಾದ ಸಂಬಂಧ ಮಾರ್ಗದರ್ಶಿಯ ರಚನೆಯಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ. ಕೇಂದ್ರ ಜವಳಿ ಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, ಮಾಧ್ಯಮದೊಂದಿಗೆ ಉತ್ತಮ ಸಂಬಂಧ ಹೊಂದಲು ಮತ್ತು ಕಾಪಾಡಲು ಕೆಲಸ ಮಾಡಿದ್ದಕ್ಕೆ ಜವಳಿ ಖಾತೆ ಸಚಿವರಿಂದ ಪ್ರಶಂಸನಾಪತ್ರ ಪಡೆದಿದ್ದಾರೆ.

ಮಾನ್ಯ ರಾಷ್ಟ್ರಪತಿಗಳು ಭಾಗವಹಿಸಿದ್ದ ಕರ್ನಾಟಕ ವಿಧಾನಮಂಡಲ ಆಯೋಜಿಸಿದ್ದ ಸುವರ್ಣ ಕರ್ನಾಟಕ ಕಾರ್ಯಕ್ರಮದ ನೇರ ಪ್ರಸಾರ ಮಾಡಿ ಮಾನ್ಯ ಸಭಾಪತಿಗಳ ಹಾಗೂ ಸಭಾಧ್ಯಕ್ಷರ ಪ್ರಶಂಸಾಪತ್ರ ಪಡೆದಿದ್ದಾರೆ. ಹೊಸ ಹಾಗೂ ಉತ್ತಮವಾದಂತಹ ಹಲೋ ಸಿಎಂ, ಹಲೋ ಡೆಪ್ಯುಟಿ ಸಿಎಂ, ಹಲೋ ಮಿನಿಸ್ಟರ್ ಹಾಗೂ ಲೋಕಾಯುಕ್ತ ಮುಂತಾದ ಕಾರ್ಯಕ್ರಮಗಳನ್ನು ಪ್ರಾರಂಭಮಾಡಿ ಜನ ಮತ್ತು ಸರ್ಕಾರದ ಮಧ್ಯ ಕೊಂಡಿಯಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ. ಕಾನೂನು ವಾರ್ತೆ ಮಾನವ ಹಕ್ಕುಗಳ ವಾರ್ತೆ ಹಾಗೂ ದೃಷ್ಟಿ ವಿಕಲಚೇತನರಿಂದ ವಾರ್ತೆಗಳನ್ನು ಆರಂಭಿಸಿದ ಕೀರ್ತಿ, ಹುತಾತ್ಮರಿಗಾಗಿ ಸ್ಮರಣಾಂಜಲಿ ಅಂತಹ ಭಾವಪೂರ್ಣ ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತಿ ಅವರದು.

ದೂರದರ್ಶನ ಚಂದನದ ಜನಪ್ರಿಯ ಕಾರ್ಯಕ್ರಮ ಮಧುರ ಮಧುರವೀ ಮಂಜುಳಗಾನ ಪರಿಚಯಿಸಿ, ಮರೆಯಲ್ಲಿದ್ದ ನೂರಾರು ಕಲಾವಿದರಿಗೆ ಅವಕಾಶ ಕಲ್ಪಿಸಿದ ಖ್ಯಾತಿ ಇವರದು. ಹಲವು ವಿಭಿನ್ನ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಮದರ್ ತೆರೇಸಾ ಪ್ರಶಸ್ತಿ, ಅಪ್ಪ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಸೇವೆಗೆ ಮತ್ತೊಂದು ಗರಿ ಎಂಬಂತೆ ಸಿವಿಲ್ ಡಿಫೆನ್ಸ್ ನಲ್ಲಿ ಸಲ್ಲಿಸಿದ ಸೇವೆಗಾಗಿ ದೂರದರ್ಶನದ ಹೆಚ್ಚುವರಿ ಮಹಾ ನಿರ್ದೇಶಕರಾದ ಇವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ಬಂದಿತು. ಸಿವಿಲ್ ಡಿಫೇನ್ಸನಲ್ಲಿ ಸಲ್ಲಿಸಿದ ಸೇವೆಗಾಗಿ ಹೋಂಗಾರ್ಡ್ ಮತ್ತು ಡಿಫೇನ್ಸ ಮೆಡಲ್ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿಗಳಿಂದ ಪದಕವನ್ನು ಪಡೆದಿದ್ದಾರೆ. ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫರ ಗುರುಗಳಾದ ಕಳಸದ ಗುರು ಗೋವಿಂದಭಟ್ಟರ ವಂಶಜರಾದ ಅವರು ನಾಡಿನೆಲ್ಲೆಡೆಗೂ ಅವರ ಕಂಪನ್ನು ಪಸರಿಸುತ್ತ ಸಾಗಿರುವ ಜೋಶಿಯವರು ಕಸಾಪಕ್ಕೆ ಸಾರಥಿಯಾಗಿರುವುದು ಅಭಿನಂದನೀಯ.

ಕ ಸಾ ಪ ಸ್ಥಾಪನೆ:

ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೮ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು. ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ.

ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ. ರಾಜ್ಯಾದ್ಯಂತ ಅಷ್ಟೇಕೆ ಹೊರನಾಡಿನಲ್ಲೂ ತನ್ನ ಕಂಪನ್ನು ಪಸರಿಸುತ್ತಿದೆ. ನಾಡೋಜ ಡಾ. ಮಹೇಶ ಜೋಶಿಯವರು ಈ ನಾಡು ಕಂಡಂತಹ ಅಪರೂಪದ ಪ್ರತಿಭೆ. ಪ್ರತಿಭೆಯನ್ನೆ ಓರೆಗೆ ಹಚ್ಚಿ ಗೆದ್ದಂತ ಫಕೀರ.


ಮಹಾದೇವ ಬಿರಾದಾರ
ಅಥಣಿ
(9880635268)

- Advertisement -

1 COMMENT

  1. ಶುಭಾಶಯಗಳು ಸರ್ 🌹.

    ಕಸಾಪ ಚುನಾವಣೆಯಲ್ಲಿ ತಮ್ಮ ಅದ್ವಿತೀಯ ವಿಜಯ ನಿಜಕ್ಕೂ ನಿಮ್ಮ ಪ್ರತಿಭೆಗೆ ಸಂದ ಗೌರವ. ತುಂಬಾ ಹೆಮ್ಮೆಯೆನಿಸುತ್ತದೆ.
    ಕಸಾಪಕ್ಕೂ ಉತ್ತಮ ರೀತಿಯಲ್ಲಿ ಬದಲಾವಣೆ ತರುವಿರೆಂಬ ಆಶಾಭಾವನೆ ಎಲ್ಲ ಕನ್ನಡ ಮನಸ್ಸುಗಳಲ್ಲಿ ನೆಲೆನಿಂತಿದೆ. ನಿಮ್ಮ ಗೆಲುವನ್ನು ಕನ್ನಡ ನಾಡು ಸಂಭ್ರಮಿಸಿದೆ.

    ನಿಮಗೆ ಶುಭವಾಗಲಿ.

LEAVE A REPLY

Please enter your comment!
Please enter your name here

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!