spot_img
spot_img

ಡಾ.ಸುರೇಶ ನೆಗಳಗುಳಿಯವರಿಗೆ ಕಲ್ಲಚ್ಚು ಪ್ರಕಾಶನ ವತಿಯಿಂದ ಗೌರವ ಸನ್ಮಾನ

Must Read

spot_img
- Advertisement -

ಮಂಗಳೂರು- ಮಂಗಳೂರಿನ ಪ್ರತಿಷ್ಠಿತ ಕಲ್ಲಚ್ಚು ಪ್ರಕಾಶನವು ತನ್ನ ಸಂಸ್ಥೆಯ ಇಪ್ಪತ್ತೈದನೇ ವರ್ಷಕ್ಕೆ ಪದಾರ್ಪಣ ಮಾಡುವ ಸವಿ‌ನೆನಪಿಗಾಗಿ ಸ್ಥಳೀಯ ಓಷನ್ ಪರ್ಲ್ ಸಭಾಂಗಣದಲ್ಲಿ ರಜತ ರಂಗು ಎನ್ನುವ ಅದ್ದೂರಿಯ ಸಮಾರಂಭವನ್ನು ಏರ್ಪಡಿಸಿತ್ತು.

ಸಾಹಿತ್ಯ,ಸಂಸ್ಕೃತಿ ಕಲೆ ಸಂಘಟನೆಗಳ ನೆಲೆಯಲ್ಲಿ ಮಹೇಶ್ ನಾಯಕ್ ರವರು ಬಹಳಷ್ಟು ಪ್ರಕಟಣೆಗಳಿಗೆ ಹೆಸರಾಗಿದ್ದು ರಜತ ರಂಗು ಎಂಬ ಬೆಳ್ಳಿ ಹಬ್ಬದ ಆಚರಣೆಯನ್ನು ಕೇಂದ್ರ ಸಾಹಿತ್ಯ ಪರಿಷತ್ತಿನ ನಿವೃತ್ತ ಉಪ‌ಕಾರ್ಯದರ್ಶಿ ಡಾ ಮಹಾಲಿಂಗೇಶ್ವರ ಎಸ್ ಪಿಯವರು ಉದ್ಘಾಟಿಸಿದರು.

ಇದೇ ವೇಳೆ ಪ್ರಕಾಶಕರ ಅನುಗೂಡೂನು ಬಾ ಎಂಬ ಕಥೆ ಕವನ ಸಹಿತವಾದ ವಿಶಿಷ್ಟ ಸಂಕಲನವನ್ನು ಸಾಹಿತಿ ಡಾ ಪ್ರಭಾಕರ ನೀರು‌ಮಾರ್ಗ ಬಿಡುಗಡೆ ಗೊಳಿಸಿದರು.ಡಾ ಪೂರ್ಣಾನಂದ ಬಳ್ಕೂರರು ಕೃತಿ ಪರಿಚಯ ಮಾಡಿದರು‌. ಉದ್ಯಮಿ ಜಯಂತ ನಾಯಕ್ ಪೃಥ್ವೀರಾಜ ನಾಯಕ್ ಡಾ ಸ್ಮಿತಾ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಕ.ಸಾ.ಪ ಕೇಂದ್ರ ಸಮಿತಿಯ‌‌ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.

- Advertisement -

ಇದೇ ವೇಳೆ ಸಾಹಿತ್ಯ ಮತ್ತಿತರ ಪೂರಕ ಸಾಧಕರನ್ಮು ಸನ್ಮಾನಿಸಲಾಯಿತು.

ಇದಲ್ಲದೆ ಕಲ್ಕಚ್ಚು ಪ್ರಕಾಶನದಿಂದ ಹೊರತರಲಾದ ಕೃತಿಕಾರರಾದ ಮಂಗಳೂರಿನ ಕಣಚೂರು ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ,ಮಂಗಳಾ ಆಸ್ಪತ್ರೆಯ ಕ್ಷಾರ ಚಿಕಿತ್ಸಾ ತಜ಼್ಞ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಸಹಿತವಾಗಿ ಹಲವರನ್ನು ರಜತ ರಂಗಿನ ತಟ್ಟೆ, ಶಾಲು,ಸಹಿತವಾಗಿ ಸನ್ಮಾನಿಸಲಾಯಿತು. ಪುತ್ತೂರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ರವರು ಮಹೇಶ ನಾಯಕರನ್ನು‌ಅಭಿಮಾನ‌ ಪೂರ್ವಕವಾಗಿ ಪೇಟ ಶಾಲು ಸಹಿತ ಸನ್ಮಾನಿಸಿದರು

ಕಲ್ಕಚ್ವು ಮಹೇಶ್ ಸ್ವಾಗತಿಸಿದ ಈ ಸಮಾರಂಭದ ನಿರ್ವಹಣೆ ಹಾಗೂ ಧನ್ಯವಾದವನ್ನು ಚು.ಸಾ.ಪ ಮಾಜಿ ಅಧ್ಯಕ್ಷ  ಸುಬ್ರಾಯ ಭಟ್ಟರು ನಿರ್ವಹಿಸಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group