ಮೂಡಲಗಿ: -ತಾಲೂಕಿನ ಖಾನಟ್ಟಿ ಗ್ರಾಮದ ಡಾ.ಮಹಾದೇವ ಪೋತರಾಜ ಅವರಿಗೆ “ಜಾನಪದ ಜಂಗಮ”ಪ್ರಶಸ್ತಿ ದೊರಕಿದೆ.
ಡಾ.ಮಹಾದೇವ ಪೋತರಾಜ, ಸರಕಾರಿ ಪ್ರಥಮ ದರ್ಜೆ ಕಾಲೇಜು ರಬಕವಿ-ಬನಹಟ್ಟಿ ‘ ಮಧುರಖಂಡಿಯ ಗವಿಮಠ ರವರ ದತ್ತಿ ನಿಧಿ ಉಪನ್ಯಾಸಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟ, ರಬಕವಿ-ಬನಹಟ್ಟಿ, ಮುಧೋಳ, ಜಮಖಂಡಿ, ಬದಾಮಿ, ಬೀಳಗಿ, ಗುಳೇದಗುಡ್ಡ, ಇಲಕಲ್- ಹುನಗುಂದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಸಚಿವರಾದ ಶಂಕರಗೌಡ ಸೋಮನಾಳ ಕಾರ್ಯಕ್ರಮ ಉದ್ಘಾಟಿಸಿದರು, ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಎ.ಸಿ.ಗಂಗಾಧರ, ಶಾಂತವೀರ ಈ ಪೋಲಿಸ್ ಉಪ ವರಿಷ್ಠಾಧಿಕಾರಿಗಳು ಜಮಖಂಡಿ, ಕಾಡೇಶ ಕೋಲೂರ ಕ್ಷೇತ್ರ ಶಿಕ್ಷಣಾಧಿಕಾರಿಗಳು-ಜಮಖಂಡಿ, ಬಿ.ಪಿ. ಬಾಗೇನ್ನವರ ಅಧ್ಯಕ್ಷರು ಜಿಲ್ಲಾ ಪ್ರಾ.ಶಾ. ಶಿಕ್ಷಕರ ಸಂಘ, ಬಾಗಲಕೋಟ, ನರಸಿಂಹ ಕಲ್ಲೋಳಿ ಅಧ್ಯಕ್ಷರು ತಾಲೂಕಾ ಪ್ರೌಢ ಶಾ. ಶಿಕ್ಷಕರ ಸಂಘ, ಜಮಖಂಡಿ, ಸಿ.ಕಡಕೋಳ ಅಧ್ಯಕ್ಷರು ತಾಲೂಕಾ ಪ್ರಾ.ಶಾ.ಶಿಕ್ಷಕರ ಸಂಘ, ಜಮಖಂಡಿ, ಆದರ್ಶ ದಂಪತಿ ಪ್ರಶಸ್ತಿ ವಿಜೇತರು, ಗುರುಶ್ರೇಷ್ಠ ಹಾಗೂ ವೃತ್ತಿ ಪ್ರವೃತ್ತಿ ಪ್ರಶಸ್ತಿ ವಿಜೇತರು ಹಾಗೂ ಗವಿಮಠ ಪ್ರತಿಷ್ಠಾನದ ಡಾ.ಬಸವರಾಜ ಗವಿಮಠ, ಡಾ.ಲಿಂಗರಾಜ ಗವಿಮಠ, ಡಾ.ಮೃತ್ಯುಂಜಯ ಗವಿಮಠ, ವಿಜಯಕುಮಾರ್ ಗವಿಮಠ ಹಾಗೂ ಪರಿವಾರದವರು ಇದೆ ಕಾರ್ಯಕ್ರಮದಲ್ಲಿ ಡಾll ಮಹಾದೇವ ಪೋತರಾಜ ರವರಿಗೆ ‘ ಜಾನಪದ ಜಂಗಮ ಪ್ರಶಸ್ತಿ’ ಪ್ರದಾನ ಮಾಡಿದರು.