ಸಿಂದಗಿ; ಯೋಗ ಪಟು ನಿರಂಜನ ಗುರುಗಳು ೨೧ ದಿನಗಳ ಕಾಲ ನಡೆಸುವ ಯೋಗವನ್ನು ನಿತ್ಯ ಪಾಲಿಸುತ್ತ ಯಾವಾಗಲೂ ಲವಲವಿಕೆಯಿಂದ ಇರಬೇಕು ಎಂದರೆ ಯೋಗೋತ್ಸವ ಸಮಿತಿ ೨೧ ದಿನಗಳ ಕಾಲ ಹಮ್ಮಿಕೊಂಡ ಯೋಗವನ್ನು ನಿತ್ಯ ಚಾಚು ತಪ್ಪದೇ ಆಲಿಸಿದ್ದಾದರೆ ಆರೋಗ್ಯದಲ್ಲಿ ಸುದಾರಣೆಗೆ ನೀವೇ ಸಾಕ್ಷಿಯಾಗುತ್ತೀರಿ ಎಂದು ಸಾರಂಗಮಠದ ಡಾ. ಪ್ರಭೂ ಸಾರಂಗದೇವ ಶಿವಾಚಾರ್ಯರು ಅಭಿಮತ ವ್ಯಕ್ತ ಪಡಿಸಿದರು.
ಪಟ್ಟಣದ ಎಚ್.ಜಿ.ಹೈಸ್ಕೂಲ ಮೈದಾನದಲ್ಲಿ ಯೋಗೋತ್ಸವ ಸಮಿತಿ ೨೧ ದಿನಗಳ ಕಾಲ ಹಮ್ಮಿಕೊಂಡ ಯೋಗ ಶಿಬಿರಕ್ಕೆ ಚಾಲನೆ ನೀಡಿ, ಶಾಸಕರು ಯಾವಾಗಲೂ ಧರ್ಮ ಕಾರ್ಯಗಳು ಮಾಡುತ್ತ ಬಂದಿದ್ದು ತಾಲೂಕಿನ ಜನತೆಗೆ ಆರೋಗ್ಯದ ದೃಷ್ಠಿಯಿಂದ ಶಾಸಕ ಅಶೋಕ ಮನಗೂಳಿಯವರು ಯಾವಾಗಲೂ ಲವಲವಿಕೆಯಿಂದ ಇರುವ ಹಾಗೆ ೨೧ ದಿನಗಳ ವರೆಗೆ ಯೋಗ ಶಿಬಿರವನ್ನು ಅಯೋಜಿಸಿದ್ದಾರೆ ಈ ಶಿಬಿರವನ್ನು ಪಡೆದು ಮುಂದೆ ಬಿಟ್ಟಿದ್ದಾದರೆ ಕೈಕಾಲುಗಳು ಮಣಿಯುವುದಿಲ್ಲ. ಮತ್ತೆ ಮುಂದುವರೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಮಾನಸಿಕವಾಗಿ ಆರೋಗ್ಯದಿಂದ ಇರಬೇಕು ಎನ್ನುವ ಸಿಂದಗಿ ಕ್ಷೇತ್ರದ ಜನರಿಗೆ ಉತ್ತಮವಾದ ಆರೋಗ್ಯ ಹಿತ ದೃಷ್ಠಿಯಿಂದ ಹಿಮಾಲಯದಲ್ಲಿ ಸುಮಾರು ೬ ವರ್ಷಗಳ ಕಾಲ ಯೋಗಭ್ಯಾಸ ಮಾಡಿದ ಶ್ರೀ ನಿರಂಜನ ಶ್ರೀಗಳಿಂದ ಹಮ್ಮಿಕೊಳ್ಳಲಾಗಿದ್ದು ಪ್ರತಿ ದಿನ ಬೆಳಗ್ಗೆ ೫.೩೦ ಗಂಟೆಯಿಂದ ೬.೩೦ ಗಂಟೆಯ ವರೆಗೆ ಯೋಗ ಶಿಬಿರ ಮತ್ತು ಪ್ರತಿ ದಿನ ಸಂಜೆ ೭.೦೦ ಗಂಟೆಯಿಂದ ೮.೦೦ ಯ ವರೆಗೆ ಆಧ್ಯಾತ್ಮಿಕ ಪ್ರವಚನ, ಭಜನೆ ನಡೆಯುವದು. ಎಲ್ಲ ಜನತೆಯ ಅಭಿಪ್ರಾಯ ಪಡೆದು ಈ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದ್ದು ಅದಕ್ಕೆ ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರಾಂಪೂರ ಆರೂಢ ಮಠದ ಶ್ರೀ ನಿತ್ಯಾಂದ ಮಹಾರಾಜರು, ಯೋಗೋತ್ಸವ ಸಮಿತಿಯ ಅಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ವೇದಿಕೆ ಮೇಲಿದ್ದರು.
ಪ್ರೋ. ಸಿದ್ದಲಿಂಗ ಕಿಣಗಿ ನಿರೂಪಿಸಿದರು. ದೈಹಿಕ ನಿರ್ದೇಶಕ ರವಿ ಗೋಲಾ ವಂದಿಸಿದರು.