spot_img
spot_img

ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಜಿಲ್ಲಾ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯ ನೇಮಕ

Must Read

spot_img
- Advertisement -

ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಗದಗ ಜಿಲ್ಲಾ ಅಧ್ಯಕ್ಷರಾಗಿ ಮಂಜುನಾಥ್ ಹಳ್ಳೂರುಮಠ ಸಾ ಬೆಳದಡಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಡಾ. ದೇವು ಹಡಪದ ಸಾ ಮುಂಡರಗಿ ಇವರನ್ನು ನೇಮಕ ಮಾಡಲಾಗಿದ್ದು, ದಿನಾಂಕ ೨೪ ಸೆಪ್ಟೆಂಬರ್ ೨೦೨೨ ರಂದು ಶನಿವಾರ ಸಂಜೆ, ಮುಂಡರಗಿಯ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನಮಠದಲ್ಲಿ ಹಮ್ಮಿಕೊಂಡಿದ್ದ, ಡಾ. ಪಂಡಿತ ಪುಟ್ಟರಾಜ ಗುರುವರ್ಯರ ೧೨ನೆಯ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಲೆಗೆ ಕಣ್ಣಿತ್ತ ಪೂಜ್ಯರು ಜಿಲ್ಲಾಮಟ್ಟದ ಕವಿಗೋಷ್ಠಿ ಸಮಾರಂಭದ ದಿವ್ಯಸಾನ್ನಿಧ್ಯವನ್ನು ವಹಿಸಿಕೊಂಡಿದ್ದ ನಾಡೋಜ ಡಾ. ಅನ್ನದಾನ ಮಹಾ ಸ್ವಾಮಿಗಳವರು ಜಿಲ್ಲಾ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯವರಿಗೆ ನೇಮಕಾತಿ ಪ್ರಮಾಣ ಪತ್ರವನ್ನು ನೀಡಿ ಸತ್ಕರಿಸಿ ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯ ಎಲ್ಲಾ ತಾಲೂಕ ಘಟಕಗಳಿಗೆ ಆಯ್ಕೆಯಾದ ಸಂಚಾಲಕರುಗಳಾದ ಶರಣು ಚೆಲುವಾದಿ ರೋಣ, ರಾಘವೇಂದ್ರ ಗೆಜ್ಜಿ ನರಗುಂದ, ಗುಡ್ಡಪ್ಪ ಹಡಪದ ಲಕ್ಷ್ಮೇಶ್ವರ, ಶಿವಾನಂದ ಭಜಂತ್ರಿ ಗದಗ’ ರತ್ನಾ ಬದಿ ಶಿರಹಟ್ಟಿ ಮತ್ತು ಪ್ರಕಾಶ್ ಪಾಲಿಮರ್ ಗಜೇಂದ್ರಗಡ, ಇವರುಗಳಿಗೂ ಕೂಡ ಪ್ರಮಾಣ ಪತ್ರ ನೀಡಿ ಸತ್ಕರಿಸಿ, ಪೂರ್ಣ ಪ್ರಮಾಣದ ತಾಲೂಕ ಘಟಕಗಳ ರಚನೆಗೆ ಅಧಿಕಾರ ನೀಡಲಾಯಿತು.

- Advertisement -

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಡಾ. ನಿಂಗು ಸೋಲಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಗಚ್ಚಣ್ಣವರ, ಕಾರ್ಯದರ್ಶಿ ಎ. ಕೆ. ಮುಲ್ಲಾ ಅವರು ಉಪಸ್ಥಿತರಿದ್ದರು ಎಂದು ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಚನ್ನವೀರ ಸ್ವಾಮಿಗಳು ಹಿರೇಮಠ ಕಡಣಿ ಇವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group