spot_img
spot_img

ಶಿಕ್ಷಕ ಎಂ.ಎಸ್.ಹೊಂಗಲಗೆ ಡಾ.ಎಸ್.ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ

Must Read

spot_img
- Advertisement -

ಮುನವಳ್ಳಿ –  ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಎಂ.ಎಸ್.ಹೊಂಗಲ ಇವರಿಗೆ ಗುರುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಚೇತನ ಪೌಂಡೇಷನ್ ಕರ್ನಾಟಕ ಮತ್ತು ಸಾಧನಾ ಕೋಚಿಂಗ್ ಸೆಂಟರ್ ಬೆಂಗಳೂರು ಇವರ ಸಹಯೋಗದಲ್ಲಿ ಜರುಗಿದ ಅಖಿಲ ಭಾರತ ಶಿಕ್ಷಕರ ಸಮ್ಮೇಳನದಲ್ಲಿ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಡಾ.ಎಸ್.ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮೈಸೂರಿನ ಸಾಹಿತಿಗಳಾದ ಟಿ.ಸತೀಶ ಜವರೇಗೌಡ, ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಡಾ.ಆರ್.ನಾರಾಯಣಸ್ವಾಮಿ ಚಿಂತಾಮಣಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರೇಖಾ ಶ್ರೀನಿವಾಸನ್, ಸಾಹಿತಿಗಳಾದ ಸುರೇಶ ಕೋರಕೊಪ್ಪ, ರೂಪಾ ಹೊಸದುರ್ಗ, ಡಾ.ಶಾಂತಕುಮಾರ ಭಜಂತ್ರಿ, ಸಂಗಮೇಶ ಖನ್ನಿನಾಯ್ಕರ, ಪ್ರೇಮಾ ಭಜಂತ್ರಿ, ಎ.ಎಂ.ಸೌಭಾಗ್ಯ, ಅರಸೀಕೆರೆ ಉಮೇಶ, ಲೂಸಿ ಸಾಲ್ಢಾನಾ ಸಂಸ್ಥೆಯ ರೂವಾರಿಗಳಾದ ಎಲ್.ಐ.ಲಕ್ಕಮ್ಮನ್ನವರ, ವೈ.ಬಿ.ಕಡಕೋಳ,  ಚೇತನ ಪೌಂಡೇಷನ್ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಉಪಸ್ಥಿತರಿದ್ದರು.

- Advertisement -

ಎಂ.ಎಸ್.ಹೊಂಗಲ ಮೂಲತಃ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದವರಾಗಿದ್ದು ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಆಯ್ಕೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಎಂ.ಎಫ್.ಸಿದ್ದನಗೌಡರ ತಾಲೂಕ ಘಟಕದ ಅಧ್ಯಕ್ಷರಾದ ಕಿರಣ ಕುರಿ ಉಪಾಧ್ಯಕ್ಷರಾದ ಅನಸೂಯ ಮದನಬಾವಿ, ಎಂ.ಎಸ್.ಕೋಳಿ, ಪ್ರಧಾನ ಕಾರ್ಯದರ್ಶಿ ಈರಣ್ಣ ಕಿತ್ತೂರ, ಮಿಕಲಿ, ನರೇಂದ್ರ ಪರಸಗಡ ತಾಲೂಕ ಪ್ರಾಥಮಿಕ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಮನೋಹರ ಚೀಲದ, ಗುರುನಾಥ ಪತ್ತಾರ, ನೌಕರರ ಸಂಘದ ಅಧ್ಯಕ್ಷರಾದ ಆನಂದ ಮೂಗಬಸವ, ಉರ್ದುಶಾಲೆಯ ಎಸ್.ಡಿ.ಎಂ.ಪದಾಧಿಕಾರಿಗಳು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ, ಮುನವಳ್ಳಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಮೀರಾ ಮುರನಾಳ, ಸಿಂದೋಗಿ ಸಿ.ಆರ್.ಪಿ. ಎನ್.ಎ.ಹೊನ್ನಳ್ಳಿ, ಅರಟಗಲ್ ಸಿ.ಆರ್.ಪಿ.ಜಿ.ಎಸ್, ಚಿಪ್ಪಲಕಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಮುನವಳ್ಳಿ ಹೋಬಳಿ ಘಟಕದ ಅಧ್ಯಕ್ಷರಾದ ಮೋಹನ ಸರ್ವಿ, ವೀರಣ್ಣ ಕೊಳಕಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾದ ಸುಧೀರ್ ವಾಘೇರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಎಂ.ಎಸ್.ಹೊಂಗಲ ಗುರುಗಳನ್ನು ಅಭಿನಂದಿಸಿದ್ದಾರೆ.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group