spot_img
spot_img

ಸಮಷ್ಟಿ ಬದುಕಿನ ಬಹುಮುಖ ವ್ಯಕ್ತಿತ್ವದ ಡಾ.ಯರಗಂಬಳಿಮಠ

Must Read

ಧಾರವಾಡದ ಡೈಟ್ ನಲ್ಲಿ ಮೇ 31 ಸಾಯಂಕಾಲ ಸಡಗರದ ವಾತಾವರಣ. ಅಲ್ಲಿ ಸಂಜೆ ವೇಳೆಗೆ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಬಳಗ ಬಂದು ಸೇರತೊಡಗಿದ್ದರು. ಅಧಿಕಾರಿ ವರ್ಗವೂ ಕೂಡ ತಮ್ಮ ತಮ್ಮ ಆ ದಿನದ ಕಾರ್ಯ ಪೂರೈಸಿ ಮನೆಗೆ ತೆರಳುವ ಮುಂಚೆ ಹಿರಿಯ ಬರಹಗಾರ ಜೀವನ ಶಿಕ್ಷಣ ಪತ್ರಿಕಾ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠರ ನಿವೃತ್ತಿ ದಿನಕ್ಕೆ ಅವರಿಗೆ ಶುಭ ಕೋರಲು ಎಲ್ಲೆಡೆಯಿಂದಲೂ ಆಗಮಿಸುತ್ತಿರುವ ಶಿಕ್ಷಕ ಸಮೂಹವನ್ನು ಗುರುಮೂರ್ತಿ ಯರಗಂಬಳಿಮಠರು ದೂರದಿಂದಲೇ ಸ್ವಾಗತಿಸುತ್ತಿರುವ ದೃಶ್ಯ ಸರ್ವೇ ಸಾಮಾನ್ಯ ವಾಗಿತ್ತು. ಮಧ್ಯಾಹ್ನ ಭೋಜನ ಕೂಟವೂ ಕೂಡ ಇಲ್ಲಿ ಏರ್ಪಾಟು ಮಾಡಲಾಗಿತ್ತು.

ಸರಕಾರಿ ಸೇವೆಯ ನಿವೃತ್ತಿಯ ಸಂದರ್ಭದಲ್ಲಿ ಸಹೋದ್ಯೋಗಿಗಳು ಹಾಗೂ ಸ್ನೇಹಿತರಿಂದ ಬೀಳ್ಕೊಡುಗೆ ಜರುಗುವ ಈ ಸಂಜೆ ಹಬ್ಬದ ವಾತಾವರಣ ಸೃಷ್ಟಿ ಸಿತ್ತು.

ದೂರದ ಊರುಗಳಿಂದ ಬಂದ ಸ್ನೇಹ ಬಳಗ ಕಾರ್ಯ ಕ್ರಮ ಆರಂಭವಾದರೆ ಬೇಗ ಮುಗಿಯಲಿಕ್ಕಿಲ್ಲ ತಮಗೆ ಮರಳಿ ಹೋಗಲು ತಡವಾಗಬಹುದೇನೋ ಎಂಬ ಆತಂಕದಿಂದ ಡಾ. ಗುರುಮೂರ್ತಿ ಯರಗಂಬಳಿಮಠರನ್ನು ಆತ್ಮೀಯವಾಗಿ ಮಾತನಾಡಿಸುತ್ತ ನಿವೃತ್ತಿ ದಿನಗಳು ಸುಖ ಸಂತೋಷ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿ ತಮ್ಮ ಗೌರವ ಸನ್ಮಾನ ಆರಂಭಿಸಿಯೇ ಬಿಟ್ಟರು. ಸವದತ್ತಿ ತಾಲೂಕು ಮುನವಳ್ಳಿ ಯಿಂದ ಆಗಮಿಸಿದ್ದ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಮೊದಲು ಹಿರಿಯ ಸ್ನೇಹಿತರಿಗೆ ಗೌರವ ಸನ್ಮಾನ ಮಾಡಿ ಶುಭ ಕೋರಿ ತೆರಳಿದರು. ಅಷ್ಟರಲ್ಲಿ ಇನ್ನೂ ಹಲವರು ತಮ್ಮ ಗೌರವ ಸನ್ಮಾನ ಮಾಡಬೇಕೆಂದು ಮುಂದೆ ಬಂದಾಗ ವೇದಿಕೆಯತ್ತ ಎಲ್ಲರನ್ನೂ ಆಯೋಜಕರು ಬರಲು ತಿಳಿಸಿದಾಗ ಕಾರ್ಯ ಕ್ರಮ ಪ್ರಾರಂಭಗೊಂಡಿತು.

ವೈಶಿಷ್ಟ್ಯಪೂರ್ಣ ಆರಂಭ:

ಆರಂಭದಲ್ಲಿ ಬಾಲ ಪ್ರತಿಭೆ: ಹುಬ್ಬಳ್ಳಿಯ ೨ನೇ ತರಗತಿ ವಿದ್ಯಾರ್ಥಿನಿ, ಬಾಲ ಪ್ರತಿಭೆ, ಮಹನ್ಯಾ ಗುರು ಪಾಟೀಲ ಸ ಕನ್ನಡ ನಾಡಿನ ಘನತೆ ಕುರಿತು ಹಾಡು ಪ್ರಸ್ತುತಪಡಿಸಿ ಗಮನಸೆಳೆದಳು. ಈ ವಿದ್ಯಾರ್ಥಿನಿಯ ಕುರಿತು ಎರಡು ಮಾತು ಹೇಳಲೇಬೇಕು. ಇವಳು ಈ ತನಕ ೭೪೧ ಕಾರ್ಯಕ್ರಮಗಳನ್ನು ನೀಡಿದ್ದು, ಖಾಸಗಿ ಟಿವ್ಹಿ ಚಾನೆಲ್‌ನ ‘ಕನ್ನಡದ ಕೋಗಿಲೆ’ ಕಾರ್ಯಕ್ರಮದಲ್ಲಿ ತನ್ನ ಹಾಡುಗಾರಿಕೆ ಪ್ರಸ್ತುತಪಡಿಸಿದ್ದಾಳೆ.

ಸನ್ಮಾನ ಮತ್ತು ಬೀಳ್ಕೊಡುಗೆ ಕ್ಷಣಗಳು:

ನಂತರ ವೇದಿಕೆಯಲ್ಲಿ ಸನ್ಮಾನ ಗಳ ಸುರಿಮಳೆ ಹಾಗೂ ಬೀಳ್ಕೊಡುಗೆ ಕುರಿತು ಕಾರ್ಯ ಕ್ರಮ ಜರುಗತೊಡಗಿತು ಈ ಸಂದರ್ಭದಲ್ಲಿ ಡಾ. ಗುರುಮೂರ್ತಿ ಯರಗಂಬಳಿಮಠ ಹಾಗೂ ಅವರ ಪತ್ನಿ ಶೋಭಾ ಯರಗಂಬಳಿಮಠ ಅವರನ್ನು ಡಯಟ್, ಶಿಕ್ಷಣ ಇಲಾಖೆಯ, ವಿವಿಧ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಶಿಕ್ಷಣ ಇಲಾಖೆಯ ನಿರ್ದೇಶಕಿ ಮಮತಾ ನಾಯಕ, ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ, ಉಪನಿರ್ದೇಶಕ ಸಂಜೀವ ಬಿಂಗೇರಿ ಅವರು ಡಾ. ಗುರುಮೂರ್ತಿ ಅವರನ್ನು ಗೌರವಿಸಿದರು.

ಹೃದಯಸ್ಪರ್ಶಿ ಹಾರೈಕೆ ಗಳು:

‘ಶಿಕ್ಷಕ, ಲೇಖಕ, ಪತ್ರಿಕಾ ಸಂಪಾದಕ, ವಾಗ್ಮಿ ಮತ್ತು ಉತ್ತಮ ಸಂಘಟಿಕರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ಜನಪರ ಪಾರದರ್ಶಕ ಸೇವೆ ಒದಗಿಸಿರುವ ಡಾ.ಗುರುಮೂರ್ತಿ ಯರಗಂಬಳಿಮಠ ಅವರಲ್ಲಿ ಸಮಷ್ಟಿ ಬದುಕಿನ ಬಹುಮುಖ ವ್ಯಕ್ತಿತ್ವವಿದೆ’ ಎಂದು ಬೆಂಗಳೂರಿನ ಹಿರಿಯ ಶ್ರೇಣಿಯ ನಿವೃತ್ತ ಕೆ.ಎ.ಎಸ್. ಅಧಿಕಾರಿ ಮಹೇಶ ಆರ್. ಹಿರೇಮಠ ಹೇಳಿದರು.

ಅವರು ಕನ್ನಡ ಪತ್ರಿಕೋದ್ಯಮದ ಪಾರಂಪರಿಕ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಅವರ ಸರಕಾರಿ ಸೇವೆಯ ನಿವೃತ್ತಿ ಸಂದರ್ಭದಲ್ಲಿ ಮಂಗಳವಾರ ಡಯಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಡಾ. ಗುರುಮೂರ್ತಿ ಓರ್ವ ನಿಗರ್ವಿ, ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದಾರೆ. ಅವರ ತಂದೆ-ತಾಯಿ ಬಾಲ್ಯದಲ್ಲಿ ನೀಡಿದ ಮೌಲಿಕ ಸಂಸ್ಕಾರದಿಂದಾಗಿ ೪೧ ವರ್ಷಗಳ ಸರಕಾರಿ ಸೇವೆ ಇಂದು ಯಶಸಸ್ಸಿನ ಘಟ್ಟ ತಲುಪಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ತರಗತಿ ಬೋಧನೆಗೆ ಪೂರಕವಾದ ಉತ್ಕೃಷ್ಟ ಶಿಕ್ಷಣ ಸಾಹಿತ್ಯವನ್ನು ಕಳೆದ ೧೪ ವರ್ಷಗಳಲ್ಲಿ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಮೂಲಕ ಬೆಳಗಾವಿ ವಿಭಾಗದ ಸುಮಾರು ೫೦ ಸಾವಿರ ಶಿಕ್ಷಕ-ಶಿಕ್ಷಕಿಯರಿಗೆ ತಲುಪಿಸುವಲ್ಲಿ ಡಾ.ಯರಗಂಬಳಿಮಠ ನಿರಂತರ ಶ್ರಮಿಸಿದ್ದಾರೆ. ನಿವೃತ್ತಿಯ ನಂತರ ಅವರ ಬರವಣಿಗೆ ಮುಂದುವರೆಯಲಿ ಹಾಗೂ ಹಿರಿಯ ಸಾಹಿತಿಗಳ ಪರಂಪರೆ ಉಳಿದುಕೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.

ತಂದೆಯ ಕುರಿತು ಅಭಿಮಾನದ ಮಾತುಗಳು ಮೂಡಿ ಬಂದದ್ದು ಅವರ ಮಗಳಿಂದ. “ಶಿಸ್ತು ಬದ್ಧ ಬದುಕು ಕನ್ನಡದ ಕಟ್ಟಾಳು, ಕನ್ನಡ ಭಾಷೆಯ ಕುರಿತ ಬದುಕಿನ ಪ್ರೀತಿ ಕಲಿಸಿದ, ಕನ್ನಡದ ಅಭಿಮಾನಿ, ಛಲ ಸಾಹಸ, ಶಕ್ತಿ ನನ್ನ ಅಪ್ಪ, ನನ್ನ ಬದುಕಿಗೆ, ಜೀವನಕ್ಕೆ ಅವರೇ ಆದರ್ಶ ಪ್ರೀತಿ ಕರುಣೆ ಮಮತೆಯನ್ನು ತುಂಬಿಕೊಂಡವರು, ಬಹುಮುಖ ಪ್ರತಿಭೆ ಸತತ ಪ್ರಯತ್ನಶೀಲ ನನ್ನ ಅಪ್ಪ” ಅಂತ ಮಗಳು ವಿನುತಾ ಹಿಡಕಿಮಠ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಡಯಟ್ ಪ್ರಾಚಾರ್ಯರಾದ ಎನ್ ಕೆ ಸಾಹುಕಾರ್ ಮಾತನಾಡಿ “ಗುರುಮೂರ್ತಿ ಯರಗಂಬಳಿಮಠ, ಒಬ್ಬ ಉತ್ತಮ ವಾಗ್ಮಿ, ಇವರು ಕೇವಲ ಶಿಕ್ಷಕರು ಮಾತ್ರ ಆಗಿರದೇ ಉತ್ತಮ ಸಾಹಿತಿ, ಇವರು ಸಂಘ ಜೀವಿ, ಶಿಕ್ಷಕರು ಆದವರು ಎಲ್ಲರೂ ಸಾಹಿತಿಗಳು ಆಗುವುದಿಲ್ಲ, ಇದು ಅವರ ಹುಟ್ಟಿನಿಂದ ಬಂದ ಬಳುವಳಿಯಾಗಿದೆ” ಎಂದರು.

ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯಾದ್ಯಕ್ಷರಾದ ಗುರು ತಿಗಡಿ ಮಾತನಾಡಿ, “ಗುರುಮೂರ್ತಿ ಒಬ್ಬ ಶ್ರೇಷ್ಠ ಚಿಂತಕ, ಶಿಕ್ಷಕರ ಸಂಘಟನೆಯ ಮೂಲಕ ಶಿಕ್ಷಕರ ಪರವಾಗಿ ಸಾಕಷ್ಟು ಹೋರಾಟವನ್ನು ಅವರು ಮಾಡಿದ್ದಾರೆ, ಅನ್ಯಾಯದ ವಿರುದ್ಧ ಇವರು ದ್ವನಿಯಾಗಿ ಕಾರ್ಯ ಮಾಡಿದ್ದಾರೆ, ಬಹುತೇಕ ಶಿಕ್ಷಕರ ಸಂಘಟನೆಗಳಿಗೆ, ಶಿಕ್ಷಕರ ಪರವಾಗಿ ಯಾವ ತರಹ ಹೋರಾಟ ಮಾಡಬೇಕು” ಎಂದು ಉತ್ತಮ ಸಲಹೆಯನ್ನು ಇವರು ನೀಡಿದ್ದಾರೆ,ಎಂದು ಗುರುಮೂರ್ತಿ ಯವರ ಕುರಿತು ಅಭಿಮಾನದ ಮಾತುಗಳನ್ನು ಹೇಳಿದರು

ಉಪಸ್ಥಿತಿ:

ಜಿಲ್ಲೆಯ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕಿ ಎನ್.ಕೆ. ಸಾವುಕಾರ ಅಧ್ಯಕ್ಷತೆವಹಿಸಿದ್ದರು. ಡಯಟ್ ಹಿರಿಯ ಉಪನ್ಯಾಸಕರುಗಳಾದ ಜಯಶ್ರೀ ಕಾರೇಕರ, ಅರ್ಜುನ ಕಂಬೋಗಿ, ಪಾರ್ವತಿ ವಸ್ತ್ರದ, ಎಸ್.ಬಿ. ಮಲ್ಲಾಡದ, ಡಾ.ಶೋಭಾ ನಾಯ್ಕರ, ಉಪನ್ಯಾಸಕಿ ವಿಜಯಲಕ್ಷ್ಮಿ ಹಂಚಿನಾಳ, ಅಧೀಕ್ಷಕ ಸುನೀಲ ಕುಲಕರ್ಣಿ, ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ, ವಿನುತಾ ಹಿಡಕಿಮಠ, ರಕ್ಷಿತ ಬಳಗಾನೂರಮಠ, ಪತ್ರಕರ್ತ ಮಹಾಬಳೇಶ್ವರ ಬೀಳಗಿ, ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗುರು ತಿಗಡಿ.

ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಎಸ್.ಎಂ.ಹುಡೇದಮನಿ, ವಿದ್ಯಾ ನಾಡಿಗೇರ, ಎ.ಎ. ಖಾಜಿ, ಗಿರೀಶ ಮಠಪತಿ, ಉಮಾದೇವಿ ಬಸಾಪೂರ, ಗಿರೀಶ ಪದಕಿ, ರೂಪಾ ಪುರಮಕರ, ಉಮೇಶ ಬಮ್ಮಕ್ಕನವರ, ಶ್ರೀಶೈಲ ಕರಿಕಟ್ಟಿ, ಜೆ.ಜಿ. ಸೈಯ್ಯದ್. ಮಕ್ಕಳ ಸಾಹಿತಿ ಶಂಕರ ಹಲಗತ್ತಿ. ಲೂಸಿ ಸಾಲ್ಡಾನಾ ಸಂಸ್ಥೆಯ ಗೌರವಾದ್ಯಕ್ಷರಾದ ಭೀಮಪ್ಪ ಕಾಸಾಯಿ, ಎಲ್ ಐ ಲಕ್ಕಮ್ಮನವರ ಅಕ್ಬರಲಿ ಸೋಲಾಪುರ, ಚಂದ್ರಶೇಖರ ತಿಗಡಿ ಎಸ್ ಎಸ್ ಧನಿಗೊಂಡ ರುದ್ರೇಶ ಕುರ್ಲಿ ಹೊಸಟ್ಟಿ ಗ್ರಾಮದ ಶಿಕ್ಷಣ ಪ್ರೇಮಿ ಎಂ ಕೆ ಕದಮ್ಮನವರ ಚಂದ್ರಶೇಖರ ತಿಗಡಿ ಸೇರಿದಂತೆ ಅನೇಕರು ಇದ್ದರು.

ಉಪನ್ಯಾಸಕಿ ಡಾ, ರೇಣುಕಾ ಅಮಲಝರಿ ಅತಿಥಿ ಗಣ್ಯರನ್ನು ಸ್ವಾಗತಿಸಿ, “ಗುರುಮೂರ್ತಿ ನಮ್ಮ ಡಯಟ್ ಗೆ ದೊಡ್ಡ ಆಧಾರ ಸ್ಥಂಭ, ಯಾವುದೇ ಕಾರ್ಯಕ್ರಮ ಇರಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದರಲ್ಲಿ ಅವರು ಎತ್ತಿದ ಕೈ, ಜೀವನ ಶಿಕ್ಷಣ ಮಾಸಪತ್ರಿಕೆಗೆ ಜೀವಕಳೆ ತಂದವರು, ಶಿಸ್ತು ಬದ್ಧವಾದ ಸೇವೆ ಅವರದು, ಇವರು ಒಬ್ಬ ಕನ್ನಡದ ಕಟ್ಟಾಳು, ಕನ್ನಡ ಭಾಷೆಯ ಕುರಿತು ತುಂಬಾ ಅಭಿಮಾನ ಉಳ್ಳವರು ಎಂದು ಅಮಲಝರಿ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಗುರುಮೂರ್ತಿ ಅವರ ಕುರಿತು ಮಾತನಾಡುವ ಜೊತೆಗೆ ಸ್ವಾಗತಿಸಿದರು.

ಜೀವನ ಶಿಕ್ಷಣ ಸಹ ಸಂಪಾದಕ ರಾಜೂ ಭೂಶೆಟ್ಟಿ ನಿರೂಪಿಸಿದರು. ಪ್ರಶಿಕ್ಷಕ ಐ. ಜಿ. ವೆಂಕಟಾಪುರ ವಂದಿಸಿದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!