spot_img
spot_img

ಆಮೆಗತಿಯಲ್ಲಿ ಚರಂಡಿ ಕಾಮಗಾರಿ; ಸಾರ್ವಜನಿಕರ ಪರದಾಟ

Must Read

spot_img
- Advertisement -

ಸಿಂದಗಿ: ಪಟ್ಟಣದ ಜೇವರ್ಗಿ ಮುಖ್ಯರಸ್ತೆ(ಮೋರಟಗಿ ನಾಕಾ) ದಿಂದ ಗೋಲಗೇರಿ ರಸ್ತೆಯಲ್ಲಿರುವ ಕನಕದಾಸ ಸರ್ಕಲ್ ವೃತ್ತದವರೆಗೆ ಬಾರಖೇಡ-ಬೀಳಗಿ ರಾಷ್ಟ್ರೀಯ ಹೆದ್ದಾರಿ 124 ರ ಕಿ.ಮೀ 157.44 ರಿಂದ 158.14ರ ವರೆಗೆ ರೂ. 525 ಲಕ್ಷ ವೆಚ್ಚದ ರಸ್ತೆ ಅಗಲಿಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯು 25 ಜನವರಿ 2020ಕ್ಕೆ ಭೂಮಿ ಪೂಜೆಯಾಗಿ ಸುಮಾರು ಒಂದೂವರೆ ವರ್ಷ ಕಳೆದಿದ್ದರೂ ಆಮೆ ವೇಗದಿಂದಾಗಿ ಇನ್ನೂ ಮುಗಿದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ದಿವಂಗತ ಎಂ.ಸಿ ಮನಗೂಳಿ ಶಾಸಕರಾಗಿದ್ದ ಸಂದರ್ಭದಲ್ಲಿ ಕುರಬರ, ನಂದಿಕೋಲ, ಮಲ್ಲೇದ, ತಳವಾರ ಓಣಿ ಹಾಗೂ ಹಳೆ ಬಜಾರ ಜನರಿಗೆ ಮತ್ತು ಬೇರೆಡೆಯಿಂದ ಬರುವ ವಾಹನಗಳಿಗೆ ತೊಂದರೆಯುಂಟಾಗದಂತೆ ಜೇವರ್ಗಿ ಕೂಡು ರಸ್ತೆಯನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ನಿಧನರಾಗಿ ಒಂದು ವರ್ಷ ಕಳೆದಾಗಿದೆ ಅಲ್ಲದೆ ಉಪ ಚುನಾವಣೆ ಮುಗಿದು 6 ತಿಂಗಳು ಗತಿಸಿವೆ. ಕೇವಲ 6 ತಿಂಗಳ ಕಾಲಾವಧಿಯ ಗಡುವು ಟೆಂಡರನಲ್ಲಿ ವಾಗ್ದಾನವಿದ್ದಾಗ್ಯೂ ಅಂದಾಜು ಅರ್ಧ ಕಿಲೋ ಮೀಟರ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಮುಗಿಸುವಲ್ಲಿ ವಿಳಂಬವಾಗುತ್ತಿರುವುದಲ್ಲದೆ ಕಳಪೆಯಾಗಿ ನಿರ್ಮಾಣವಾಗುತ್ತಿದ್ದರು ಕೂಡಾ ಉಪ ಚುನಾವಣೆಯಲ್ಲಿ ಗೆದ್ದ ರಮೇಶ ಭೂಸನೂರ ಅವರು ಇಲ್ಲಿನ ಕಾಮಗಾರಿಗಳತ್ತ ಗಮನ ಹರಿಸುತ್ತಿಲ್ಲವೆಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿರುವುದು ಕೇಳಿ ಬರುತ್ತಿರುವುದು ಸಹಜವೇ ಸರಿ.

- Advertisement -

ಆಕ್ರೋಶ:

ಕಳೆದ 2 ವರ್ಷಗಳಿಂದ ಕರೋನಾ ಭೀತಿಯಿಂದ ನೊಂದ ಜನತೆಯ ಹೊಲ ಗದ್ದೆಗಳಲ್ಲಿ ಅಲ್ಪಸ್ವಲ್ಪ ಬೆಳೆಗಳು ಕೈಗೆಟುಕಿವೆ ಈ ಬಾರಿ ಮಳೆಗಾಲ ಶುರುವಾಗುವುದರೊಳಗೆ ಕಾಮಗಾರಿ ಮುಗಿದರೆ ಜನರಿಗೆ ಅನುಕೂಲವಾಗಬಹುದು. ಇಲ್ಲದೆ ಹೋದರೆ ಜನರನ್ನು ಇನ್ನಷ್ಟು ಕೂಪಕ್ಕೆ ತಳ್ಳಿದಂತಾಗುತ್ತದೆ. ಇನ್ನು ಚರಂಡಿ ಕೆಲಸ ಸಹ ಅರ್ಧಂಬರ್ಧ ಮಾಡಲಾಗಿದೆ. ಜೊತೆಗೆ ಕೆಲವು ಕಡೆ ಅತಿ ಎತ್ತರ, ಮತ್ತೆ ಕೆಲವು ಕಡೆ ಕಡಿಮೆ ಎತ್ತರದ ಚರಂಡಿ ಮಾಡಲಾಗಿದೆ. ಹೀಗೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಬಿದ್ದ ಕಾಂಕ್ರೆಟ್ ಸರಿಯಾಗಿ ಸ್ವಚ್ಛಗೊಳಿಸದ ಪರಿಣಾಮ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ. ಅಗತ್ಯಕ್ಕಿಂತ ಎತ್ತರವಾಗಿ ಚರಂಡಿ ನಿರ್ಮಿಸಿ ಅದನ್ನು ಪೂರ್ಣಗೊಳಿಸದೆ ಕಳೆದ ಒಂದೂವರೆ ವರ್ಷಗಳಿಂದ ನಿವಾಸಿಗಳಿಗೆ ತೊಂದರೆ ಕೊಡಲಾಗುತ್ತಿದೆ. ಅಲ್ಲದೆ ಯುಜಿಡಿ ಕಾಮಗಾರಿಯನ್ನು ಕಳಪೆ ಮಟ್ಟದಾಗಿ ನಿರ್ಮಿಸಲಾಗುತ್ತಿದ್ದರೂ ಸಹ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ – ಶರಣಪ್ಪ ಪೂಜಾರಿ

ಈ ಬಗ್ಗೆ ಮಾಜಿ ಪುರಸಭಾ ಸದಸ್ಯ ಶರಣಪ್ಪ ಪೂಜಾರಿಯವರು ಮಾತನಾಡಿ, ಕಳೆದ 2020 ರಲ್ಲಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ದಿ.ಎಂ.ಸಿ.ಮನಗೂಳಿಯವರು ಈ ಭಾಗದ ಜನರ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಮಾರು ರೂ 5 ಕೋಟಿಗೂ ಅಧಿಕ ಹಣದಲ್ಲಿ ಈ ಕಾಮಗಾರಿಗೆ ಚಾಲನೆ ನೀಡಿ ಒಂದೂವರೆ ವರ್ಷ ಗತಿಸಿದರು ಕೂಡಾ ಇನ್ನೂ ಕಾಮಗಾರಿ ಮುಗಿಸುತ್ತಿಲ್ಲ. ಇದರಿಂದ ಇಲ್ಲಿ ನಿವಾಸಿಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ ಇವರಿಗೆ ಹೇಳೋರು ಕೇಳೋರು ಇಲ್ಲದಂತಾಗಿದೆ. ತೀವ್ರಗತಿಯಲ್ಲಿ ಕಾಮಗಾರಿ ಮುಗಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುವಲ್ಲಿ ಸ್ಥಳೀಯ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದರು

ಸದರಿ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಹೆಚ್ಚಾಗಿದೆಯೇ ಹೊರತು ಅನುಕೂಲವೇನೂ ಆಗಿಲ್ಲ. ಇದೊಂದು ದುಃಸ್ವಪ್ನವಾಗಿ ಜನರನ್ನು ಕಾಡುತ್ತಿದೆ. ಇನ್ನಾದರೂ ಪುರಸಭೆಯವರು ಕಾಮಗಾರಿಯನ್ನು ಬೇಗ ಮುಗಿಸಿ ಸಾರ್ಜನಿಕರ ತೊಂದರೆಗಳಿಗೆ ಮುಕ್ತಿ ಹಾಡುವರೇ….ಕಾದು ನೋಡಬೇಕು

- Advertisement -

ಬಾರಖೇಡ-ಬೀಳಗಿ ರಾಷ್ಟ್ರೀಯ ಹೆದ್ದಾರಿ 124ರ ಕಿ.ಮೀ 157.44 ರಿಂದ 158.14ರ ವರೆಗೆ ರೂ. 525 ಲಕ್ಷ ವೆಚ್ಚದಲ್ಲಿ ಮೋರಟಗಿ ನಾಕಾದಿಂದ ಕನಕದಾಸ ಸರ್ಕಲ್ ವೃತ್ತದವರೆಗೆ ರಸ್ತೆ ಅಗಲಿಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯು 25 ಜನವರಿ 2020ಕ್ಕೆ ಭೂಮಿ ಪೂಜೆಯಾಗಿದ್ದು ನಿಜ ಆದರೆ ಅಲ್ಲಿನ ಕೆಲ ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾಗಿದೆ. ಗುತ್ತಿಗೆದಾರರು ಮತ್ತೆ 6 ತಿಂಗಳ ಕಾಲಾವಕಾಶ ಪಡೆದುಕೊಂಡು ಕಾಮಗಾರಿ ಪ್ರಾರಂಭಿಸಿದ್ದಾರೆ ಕೆಲವು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ

ಎ.ಎಚ್.ತುಂಬಗಿ
ಪಿಡಬ್ಲ್ಯುಡಿ ಎಇ ಸಿಂದಗಿ


ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group