- Advertisement -
ಮೈಸೂರು ದಸರಾ ಮಹೋತ್ಸವ ಸಾಂಸ್ಕೃತಿಕ ಉಪ ಸಮಿತಿ ಪ್ರಾಯೋಜಕತ್ವದಲ್ಲಿ ಹಾಸನದ ಶ್ರೀ ಶಂಭುಲಿಂಗೇಶ್ವರ ಕಲಾವೃಂದ ಮಹಿಳಾ ತಂಡವು ಎಸ್. ಎಸ್. ಪುಟ್ಟೇಗೌಡ, ಶಂಭುನಾಥಪುರ, ಅರಕಲಗೂಡು ವಿರಚಿತ ಮಹಾತ್ಮ ಕನಕದಾಸ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಶ್ರೀಮತಿ ರಾಣಿ ಚರಾಶ್ರೀ ನಿದೇ೯ಶನದಲ್ಲಿ ಮೈಸೂರು ಪುರಭವನ ರಂಗ ವೇದಿಕೆಯಲ್ಲಿ ದಿನಾಂಕ 11-10-2024ರ ಶುಕ್ರವಾರ ಸಂಜೆ 6 ರಿಂದ 9 ಗಂಟೆಯವರೆಗೆ ಆಭಿನಯಿಸಲಾಗುವುದು. ನಾಟಕದ ಸಂಗೀತ ವಿದ್ವಾನ್ ಕಿರಗಸೂರು ರಾಜಪ್ಪ, ನಿರೂಪಣೆ ಗೊರೂರು ಆನಂತರಾಜು ಆವರದು.
ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಮಹಿಳಾ ಕಲಾತಂಡವನ್ನು ಪ್ರೋತ್ಸಾಹಿಸಲು ನಾಟಕದ ನಿದೇ೯ಶಕರು ಕೋರಿದ್ದಾರೆ.