ರಂಗ ಕಾಯಕದಲ್ಲಿ 46 ವರ್ಷಗಳ ಅನುಭವ ಇರುವ ಬೆಂಗಳೂರಿನ ಗೆಜ್ಜೆ ಹೆಜ್ಜೆ ರಂಗತಂಡ ಮೂರು ದಿನ ಯುಗಾದಿ ನಾಟಕೋತ್ಸವ ವಾಗಿ ಅಪ್ಪ-ಮಗ ಹ್ಯಾಗ್ ಸತ್ತಾ -ನಿಂತ್ಕೋಳಿ ಅಲ್ಲಲ್ಲ ಕುಂತ್ಕೊಳಿ -ಎಂಡ್ ಇಲ್ಲದ ಬಂಡ ಅವತಾರ -ಕುಡಿತಾಯಣ ನಾಟಕಗಳೊಂದಿಗೆ ರಂಗಗೀತೆಗಳು, ರಂಗ ಉಪನ್ಯಾಸ. ಏಕಪಾತ್ರ ಅಭಿನಯವು ಕೇಶವ ಕಲ್ಪ ಲಿಂಕ್ ರೋಡ್ 2ನೇ ಕ್ರಾಸ್ ನ ಮಲ್ಲೇಶ್ವರಂ ಬಡಾವಣೆಯ ಆಪ್ತ ರಂಗಮಂದಿರದಲ್ಲಿ ನಡೆಯಿತು.
ರಂಗ ಉಪನ್ಯಾಸದಲ್ಲಿ ಪ್ರಸ್ತುತ ಕನ್ನಡ ರಂಗಭೂಮಿ ಕುರಿತು ನಾಟಕಕಾರ ಚಿತ್ರ ನಟ ಮೈಸೂರು ರಮಾನಂದ್ ಮಾತನಾಡಿದರು. ಶುದ್ಧ ಗುಣಮಟ್ಟದ -ಸದಭಿರುಚಿಯ ಹಾಸ್ಯವನ್ನು ಅಪ್ಪ-ಮಗ ಹ್ಯಾಗ್ ಸತ್ತಾ ಎಂಬ -ಹಾಸ್ಯ ನಾಟಕದ ಸಾಪಲ್ಯ ಸ್ವಪ್ರತಿಷ್ಠೆಯ ಅಪ್ಪನನ್ನು ಗೋಳುಯ್ದು ಅಪ್ಪನನ್ನೇ ಪೆದ್ದನನ್ನಾಗಿ ಮಾಡುವ ಮಗನ ಪಾತ್ರ ಉತ್ತಮವಾಗಿ ಮೂಡಿ ಬಂತು. ಗೆಳೆಯನ ಮೇಲೆ ಸೋಲನ್ನು ಒಪ್ಪಿಕೊಳ್ಳದೆ ಹವಣಿಸದೆ ಅದೇ ಅಪ್ಪ ನಂತರದ ಕುತೂಹಲದ ಘಟನೆ ಸನ್ನಿವೇಶಗಳನ್ನು ಸೂರ್ಯನಾರಾಯಣರಾವ್ ಉತ್ತಮವಾಗಿ ಅಭಿನಯಿಸಿದರು.ಮೈಸೂರು ರಮಾನಂದರವರು ಅಪ್ಪನ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದರು.
ಎರಡನೆಯ ನಾಟಕ ನಿಂತ್ಕೊಳ್ಳಿ ಅಲ್ಲಲ್ಲ ಕುಂತ್ಕೊಳ್ಳಿ ಉಂಡಾಡಿ ಗುಂಡ ಅಳಿಯ ಸೋಮಾರಿ ಆತನಿಗೆ ಬುದ್ಧಿಯನ್ನು ಕಳಿಸುವ -ವಧುವಿನ ಪಾತ್ರದಲ್ಲಿ ಗೀತಾ ಉತ್ತಮವಾಗಿ ಅಭಿನಯಿಸಿದರು. ಮಾವನಾಗಿ ರಮಾನಂದರ ಅಭಿನಯ ಮನೋಜ್ಞವಾಗಿತ್ತು. ಅಳಿಯ ಯೋಧನಾಗಿ ಹಿಂತಿರುಗಿ ಬಂದು ಆಕೆಯನ್ನೇ ಮದುವೆ ಮಾಡಿಕೊಳ್ಳುತ್ತಾನೆ. ಇಲ್ಲೂ ಹಾಸ್ಯವೇ ಪ್ರಧಾನ. ನಗಿಸುವ ಕೆಲಸ ಸುಲಭವಾದದ್ದಲ್ಲ. ದಿನನಿತ್ಯ ನಮ್ಮ ಸುತ್ತಲೂ ಸಂಭವಿಸುವ ಪ್ರಸಂಗಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹಾಸ್ಯವನ್ನು ಬೆರೆಸಿ ಹಾಸ್ಯದ ರಸದೌತಣವನ್ನು ನೀಡಿ ಈ ನಾಟಕಗಳೆರಡು ಪ್ರೇಕ್ಷಕರ ಮೆಚ್ಚುಗೆ -ಪಡೆಯುವಲ್ಲಿ ಯಶಸ್ಸು ಕಂಡಿತು. ಹಾಸ್ಯರಸ ಭೋಜನದೊಂದಿಗೆ ಅಶ್ಲೀಲದ ಸೋಂಕಿಲ್ಲದೆ ನಗಿಸುವ ಈ ಹಾಸ್ಯ ನಾಟಕಗಳು ಶಾಲಾ ಕಾಲೇಜುಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಬಹುದು
2ನೇ ದಿನ ಎಂಡ್ ಇಲ್ಲದ ಬಂಡಾವತಾರ ಈ ರಂಗಕೃತಿ ಪ್ರಸ್ತುತ ರಾಜಕೀಯ ವಿದ್ಯಾಮಾನಗಳನ್ನು ವಿಡಂಬನೆ ಮಾಡುತ್ತಾ ಪ್ರೇಕ್ಷಕರಿಗೆ ಕಚಗುಳಿ -ಇಡುತ್ತವೆ. 3ನೇ ದಿನ ವಿಶ್ವ ರಂಗಭೂಮಿ ದಿನಾಚರಣೆ ಸಂದೇಶವನ್ನು ಗಣೇಶಯ್ಯ ವಾಚನ ಮಾಡಿದರು. ನಂತರ ತಂಡದ ಟ್ರಂಪ್ ಕಾರ್ಡ್ ನಾಟಕ ಕುಡಿತಾಯಣ ಪ್ರದರ್ಶನವಾಯಿತು. ಕುಡಿತದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂದೇಶ ನೀಡುವ ನಾಟಕ ಪ್ರೇಕ್ಷಕರಿಗೆ ರಸ ದೌತನ ನೀಡಿತು. ಕೃಷಿ ಅಧಿಕಾರಿ ನಾಗರಾಜ್ -ಮಧುಸೂದನ್ -ಚಂದ್ರಶೇಖರ್ ಭೂವಿ ಹಿರಿಯ ರಂಗಕರ್ಮಿ ಶೇಖರ್ -ಸರಸ್ವತಮ್ಮ-ಗೀತಾ, ಸಂಜನಾ -ಗಾಯಕರಾಗಿ ಚಂದ್ರು ಮೈಸೂರ್ -ಗಣೇಶ ಚಿತ್ರದುರ್ಗ ಬೈಲೊಂಗಲದ ದಾನೇಶ ರಮಾನಂದ್ ರಂಗಗೀತೆಗಳನ್ನು ಹಾಡಿದರು.
ಇದೆ ಸಂದರ್ಭ ರಂಗ ಮಾಸಪತ್ರಿಕೆ -ರಂಗ ವಿನೋದ -ಲೋಕಾರ್ಪಣೆಯಾಯಿತು.