ಕರ್ನಾಟಕದ ಪ್ರಸಿದ್ಧ ರಂಗ ತಂಡಗಳಲ್ಲೊಂದಾದ ಗೆಜ್ಜೆಹೆಜ್ಜೆ ರಂಗತಂಡವು ಮೂರು ದಿನಗಳು ಯುಗಾದಿ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು.
ರಂಗ ಉಪನ್ಯಾಸ ರಂಗಗೀತೆಗಳ ಕಾರ್ಯಕ್ರಮ ಏಕ ಪಾತ್ರ ಅಭಿನಯಗಳು ಜೊತೆಗೆ ಅಪ್ಪ-ಮಗ ಹ್ಯಾಗ್ ಸತ್ತ, ನಿಂತ್ಕೊಳ್ಳಿ ಅಲ್ಲಲ್ಲ ಕುಂತ್ಕೊಳ್ಳಿ, ಎಂಡ್ ಇಲ್ಲದ ಬಂಡ ಅವತಾರ ಮತ್ತು ತಂಡದ ಜನಪ್ರಿಯ ನಾಟಕ ಕುಡಿತಾಯಣ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಗಣೇಶ ಅಯ್ಯ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶ ವಚನ ಮಾಡಿದರು ಮಾರ್ಚ್ 27 ವಿಶ್ವ ರಂಗಭೂಮಿ ದಿನಾಚರಣೆ ದೃಶ್ಯ ಶ್ರವ್ಯ ಕ್ರಿಯೆ ಎಲ್ಲವನ್ನು ಒಳಗೊಂಡ ಸಂಕೀರ್ಣ ಕಲೆಯು ನಾಟಕ ವೃತ್ತಿ ರಂಗಭೂಮಿ ಸ್ವಾತಂತ್ರ್ಯ ಚಳವಳಿ ಕಾಲದಿಂದಲೂ ಮುಂಚೂಣಿಯಲ್ಲಿದೆ. ಸ್ವಾತಂತ್ರ್ಯ ಸಂದೇಶ ಸಾರುವ ನಾಟಕಗಳು ಅಂದು ನಿರಂತರ ಪ್ರದರ್ಶನಗೊಳ್ಳುತ್ತಿತ್ತು. ನಾಟಕಗಳಿಗೆ ಲೈಸೆನ್ಸ್ ನೀಡಲು ಸತಾಯಿಸುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿದ್ದೆವು. ನಾಟಕದ ಶೀರ್ಷಿಕೆ ಬದಲಿಸಿ ಪ್ರಯೋಗಗಳಾಗುತ್ತಿದ್ದು ಉಂಟು. ಭೂಗತ ಕಲಾವಿದರನ್ನು ತಮ್ಮ ಕಲಾವಿದರೆಂದು ಹೇಳಿ ರಕ್ಷಣೆ ಸಹ ನೀಡಿದ್ದವು. ಅಂದಿನಿಂದ ಇಂದಿನವರೆಗೂ ರಂಗಭೂಮಿ ಕಲೆ ಉಳಿದಿದೆ ಆದರೆ ಇತ್ತೀಚಿನ ಕಿರುತೆರೆ ಚಲನಚಿತ್ರ ರೀಲ್ ಪ್ರಭಾವದಿಂದ ಸೊರಗುತ್ತಿದೆ. ನಾಟಕ ಸಾಹಿತ್ಯ ಇತರೆಲ್ಲ ಕಾವ್ಯಗಳಷ್ಟೇ ಪ್ರಾಚೀನವಾದದ್ದು ಎ೦ದು ನಾಟಕಕಾರ ನಟ ಮೈಸೂರು ರಮಾನಂದ್ ತಿಳಿಸಿದರು.