ತೆಂಗಿನ ನೀರು ಕುಡಿದಿರಿ ; ತೆಂಗಿನ ಹಾಲು ಕುಡಿದು ನೋಡಿ ಅದರ ಪ್ರಯೋಜನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಬೇಸಿಗೆಯಲ್ಲಿ ತೆಂಗಿನ ನೀರು ಅಥವಾ ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳುಂಟು ಆದರೆ ತೆಂಗಿನ ಹಾಲು ಕುಡಿದರೆ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ ? ಅದು ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಹಾಗಾದರೆ ಬನ್ನಿ ತೆಂಗಿನ ಹಾಲು ಕುಡಿದರೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ…

ತೆಂಗಿನ ಹಾಲಿನಲ್ಲಿಯ ಪೋಷಕಾಂಶಗಳು

ಎಲ್ಲ ಜನರು ತೆಂಗಿನ ನೀರನ್ನೇ ತೆಂಗಿನ ಹಾಲು ಎಂದು ಭಾವಿಸಿರುತ್ತಾರೆ ಆದರೆ ಅದು ತಪ್ಪು. ಕೊಬ್ಬರಿಯನ್ನು ಮಿಕ್ಸಿಗೆ ಹಾಕಿ ಹಿಂಡುವುದರಿಂದ ಹಾಲು ದೊರೆಯುತ್ತದೆ. ಇದರಲ್ಲಿ ವಿಟಮಿನ್ C, ಜೊತೆಗೆ ವಿಟಮಿನ್ E, ವಿಟಮಿನ್ B1, 3,5,6, ಕಬ್ಬಿಣ, ಸೆಲೆನಿಯಮ್, ಕ್ಯಾಲ್ಸಿಯಂ, ಮೆಗ್ನಿಷಿಯಂ ಹಾಗೂ ಫಾಸ್ಫರಸ್ ಇದೆ. ಇದನ್ನು ಸಿಹಿ ತಿಂಡಿಗಳಲ್ಲಿ ಬಳಸುತ್ತಾರೆ.

ತೆಂಗಿನ ಹಾಲಿನ ಪ್ರಯೋಜನಗಳು

- Advertisement -

ಎಲುಬುಗಳ ಶಕ್ತಿಗೆ – ಎಲುಬುಗಳು ಸ್ಟ್ರಾಂಗ್ ಆಗಬೇಕಾದರೆ ನೀವು ತೆಂಗಿನ ಹಾಲು ಕುಡಿಯಬೇಕು. ಇದರಲ್ಲಿ ಬಹು ಪ್ರಮಾಣದಲ್ಲಿ ಕ್ಯಾಲ್ಸಿಯಂ ಹಾಗೂ ಫಾಸ್ಫರಸ್ ಇದ್ದು ಎಲುಬುಗಳು ಗಟ್ಟಿಯಾಗಲು ಸಹಕರಿಸುತ್ತದೆ.

ಕೊಲೆಸ್ಟರಾಲ್ ನಿಯಂತ್ರಣ – ತೆಂಗಿನ ಹಾಲಿನಲ್ಲಿ ಪರಿಷ್ಕರಿಸಿದ ಕೊಬ್ಬು ಇರುವುದರಿಂದ ಶರೀರದ ಕೊಲೆಸ್ಟರಾಲ್ ಕಡಿಮೆ ಮಾಡಲು ಇದು ಸಹಕಾರಿ. ಇದರಲ್ಲಿನ ಲಾರಿಕ್ ಅಸಿಡ್ ಒಳ್ಳೆಯ ಕೊಬ್ಬು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಡಯಟ್ ನಲ್ಲಿ ತೆಂಗಿನ ಹಾಲು ಸೇರಿಸಿ ನೀವು ಕೊಲೆಸ್ಟರಾಲ್‌ ಕಡಿಮೆ ಮಾಡಿಕೊಳ್ಳಬಹುದು.

ರೋಗ ನಿರೋಧಕ ಶಕ್ತಿಗೆ – ತೆಂಗಿನ ಹಾಲಿನಲ್ಲಿ ಫಂಗಸ್ ವಿರೋಧಿ ಹಾಗೂ ವೈರಾಣು ವಿರೋಧಿ ಗುಣಗಳಿವೆ. ಇವು ಶರೀರದಲ್ಲಿನ ವೈರಸ್ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತವೆ.ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಮೆಗ್ನಿಷಿಯಂ ಹೆಚ್ಚಳ – ತೆಂಗಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನಿಷಿಯಂ ಇರುವುದರಿಂದ ಇದು ಸ್ನಾಯುಗಳಿಗೆ ಉಪಯೋಗಿ

ತೂಕ ಇಳಿಸಲು –  ತೆಂಗಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರು ಇರುವುದರಿಂದ ಸ್ವಲ್ಪ ಊಟಕ್ಕೇ ಹೊಟ್ಟೆ ತುಂಬುದರಿಂದ ತೂಕ ಇಳಿಸಲು ಸಹಕಾರಿಯಾಗಿದೆ.

ಕೂದಲಿಗೆ – ಮನೆಯಲ್ಲಿ ಮಾಡಿದ ತೆಂಗಿನ ಹಾಲನ್ನು ತಲೆಗೆ ಹಚ್ಚಿ ೫ ನಿಮಿಷ ಮಸಾಜ್ ಮಾಡಿ ೧೫-೨೦ ನಿಮಿಷ ಬಿಡಬೇಕು. ಇದರಿಂದ ಕೂದಲು ಗಟ್ಟಿಯಾಗಿ, ಬೆಳವಣಿಗೆ ಹೊಂದುತ್ತದೆ. ಅಲ್ಲದೆ ಇನ್ನಿತರ ಕೂದಲ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.

ಮೊಣಕಾಲು ನೋವಿಗೆ –  ತೆಂಗಿನ ಹಾಲಿನಲ್ಲಿ ಸೆಲೆನಿಯಮ್ ಎಂಬ ಪದಾರ್ಥವಿದ್ದು ಇದರ ಸೇವನೆಯಿಂದ ಸಂದು ನೋವುಗಳಿಗೆ ಪರಿಹಾರ ಒದಗಿಸುತ್ತದೆ. ಪುರುಷರ ಪ್ರೊಸ್ಟೇಟ್ ಸಮಸ್ಯೆಯನ್ನೂ ಇದು ಕಡಿಮೆ ಮಾಡುತ್ತದೆ.

ಇಷ್ಟೆಲ್ಲ ಪ್ರಯೋಜನಗಳನ್ನು ಹೊಂದಿರುವ ತೆಂಗಿನ ಹಾಲನ್ನು ಮನೆಯಲ್ಲಿಯೇ ತಯಾರಿಸಿ ಪ್ರತಿದಿನ ಸೇವಿಸಬಹುದು.

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!