spot_img
spot_img

ಹೊಸ ಯರಗುದ್ರಿ, ವೆಂಕಟಾಪೂರದಲ್ಲಿ ರಸ್ತೆಗಳ ಸುಧಾರಣೆಗೆ ಚಾಲನೆ

Must Read

ಮೂಡಲಗಿ: ತಾಲೂಕಿನ ಯಾದವಾಡ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಹೊಸ ಯರಗುದ್ರಿ ಮತ್ತು ವೆಂಕಟಾಪೂರ ಗ್ರಾಮದಲ್ಲಿ ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆದೇಶದ ಮೇರೆಗೆ ಯಾದವಾಡ ಜಿಲ್ಲಾ ಪಂಚಾಯತ ಸದಸ್ಯ  ಗೋವಿಂದ ಕೊಪ್ಪದ ಅವರ ಅನುದಾನದಲ್ಲಿ ರಸ್ತೆಗಳ ಸುಧಾರಣೆಗೆ ಭೂಮಿ ಪೂಜೆ ನೆರವೇರಿಸಿದರು.

ಹೊಸಯರಗುದ್ರಿ ಗ್ರಾಮದಲ್ಲಿ ವೆಂಕಟಾಪೂರ ಒಳಗಿನ ರಸ್ತೆ 5 ಲಕ್ಷ ರೂ, ನಾಯಕ ತೋಟದ ರಸ್ತೆ 5 ಲಕ್ಷ ರೂ, ಪಾಟೀಲ ತೋಟದ ರಸ್ತೆ 5 ಲಕ್ಷ ರೂ, ಕುಲಗೋಡ ಒಳಗಿನ ರಸ್ತೆ 5 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಪೂಜಾ ಸಮಾರಂಭದಲ್ಲಿ ತಿಮ್ಮಾಪೂರ ಸಿದ್ಧಾರೂಢ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ,  ಅವರಾದಿ ಗ್ರಾ.ಪಂ ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಕ,  ಗಿರೀಶ್ ನಾಡಗೌಡ, ರಾಜು ಲಕ್ಕಾರ, ಪಿಕೆಪಿಎಸ್ ಅಧ್ಯಕ್ಷ ಶಿವನಗೌಡ ಪಾಟೀಲ, ಮುತ್ತಪ್ಪ ಕುರಿ, ಭೀಮಪ್ಪ  ಮಬನೂರ,  ಮುತ್ತಪ ಪೂಜೇರಿ ವಿಠ್ಠಲ ಮೂಲಿಮನಿ, ರಮೇಶ್ ಬಳ್ಳೂರ, ಸತ್ಯಪ್ಪ ಹೂಗಾರ, ಹಣಮಂತ ಮೂಲಿಮನಿ ಮುದುಕಪ್ಪ ಮಜ್ಜಗಿ ಲಕ್ಷ್ಮಣ ಮೂಲಿಮನಿ, ಬೀರಪ್ಪ ಹೊಸಟ್ಟಿ ಮತ್ತಿತರರು ಇದ್ದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!