ಸಿಂದಗಿ: ಪಟ್ಟಣದ ಸಂಗಮ ಆರ್ಕೇಡ ಹತ್ತಿರ ಚೌಡಯ್ಯ ವೃತ್ತದಿಂದ ಸೋಮೇಶ್ವರ ಚೌಕವರೆಗಿನ ರೂ 30 ಲಕ್ಷ ವೆಚ್ಚದ ನಗರೋತ್ಥಾನ ಹಂತ 4ರ ಪ್ಯಾಕೇಜ್ 1 ಮತ್ತು 2ರ ರಸ್ತೆಯ ಡಾಂಬರಿಕರಣ ಕಾಮಗಾರಿಗೆ ಶಾಸಕ ರಮೇಶ ಭೂಸನೂರ ಹಾಗೂ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಪೂಜೆ ನೆರವೇರಿಸಿದರು.
ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, 1997ರಿಂದ ಇಲ್ಲಿಯವರೆಗೆ ರಸ್ತೆಯ ಕಾಮಗಾರಿಯಾಗಿಲ್ಲ ನಗರೋತ್ಥಾನ ಯೋಜನೆಯಡಿ ರೂ 30 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದ್ದು ಈ ಕಾಮಗಾರಿಯ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಅಲ್ಲದೆ ಸಾರ್ವಜನಿಕರು ಕೂಡಾ ಅವರಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಶಾಸಕ ರಮೇಶ ಭೂಸನೂರ ಮಾತನಾಡಿ, ಪಟ್ಟಣದಲ್ಲಿ ಒಟ್ಟು ರು 40 ಕೋಟಿಗಳಲ್ಲಿ ಪಟ್ಟಣದ ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಅಲ್ಲದೆ ಪಟ್ಟಣದ ಪ್ರತಿ ಮನೆಗೂ ನಲ್ಲಿ ಎಂಬ ಕಾರ್ಯಕ್ಕಾಗಿ ರೂ 76 ಕೋಟಿಗಳ ಅನುಮೋದನೆ ಮಾಡಲಾಗಿದೆ ಚುನಾವಣೆಯಲ್ಲಿ ಕೊಟ್ಟ ವಚನದಂತೆ ಕಾರ್ಯ ಪ್ರವೃತ್ತರಾಗಿ ಚಿರತೆಯ ವೇಗದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಜಣ್ಣಿ ನಾರಾಯಣಕರ, ಬಸವರಾಜ ಯರನಾಳ, ಮಲ್ಲು ಪೂಜಾರಿ, ರಜಾಕ ಮುಜಾವರ, ಆಶ್ರಯ ಕಮಿಟಿ ಸದಸ್ಯ ಕಾಜು ಬಂಕಲಗಿ, ರಾಕೇಶ ಕಂಟಿಗೊಂಡ, ಸೇರಿದಂತೆ ಪ್ರಶಾಂತ ನಂದಿಕೋಲ, ಸೈಪನ್ ನಾಟೀಕಾರ, ರವಿ ನಾಯ್ಕೋಡಿ, ಫೈಜಾನ ಮಾಗಾಂವಕರ, ಬಸು ಸಜ್ಜನ್, ಶರಣಪ್ಪ ಸುಲ್ಪಿ, ಪುರಸಭೆ ಜೆಇ ಎ.ಜೆ.ನಾಟೀಕಾರ, ಶಿವು ಬಡಿಗೆರ ಸೇರಿದಂತೆ ಹಲವರು ಇದ್ದರು.