- Advertisement -
ಸಿಂದಗಿ: ಕೇಂದ್ರ ಸರಕಾರದ ಯೋಜನೆಯಾದ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿ ಸಮುದಾಯ ಕಾಮಗಾರಿಗಳು ಬರುತ್ತವೆ ಹಾಗೂ ಒಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಟ 100 ದಿನ ಉದ್ಯೋಗ ಪಡೆಯಿರಿ ಮತ್ತು ನಿಮ್ಮ ಊರಲ್ಲೆ ನಿರಂತರ 100 ದಿನ ಕೆಲಸ ಬೇಸಿಗೆಯಲ್ಲಿ ಪಡೆಯಬಹುದು ಎಂದು ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ ಹೇಳಿದರು.
ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋರಗಿಯಲ್ಲಿ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೋರಗಿ ಗ್ರಾಮದಲ್ಲಿ ಕೃಷಿ ಹೊಂಡ ತೋಡಲು ಪ್ರಾರಂಭ ಮಾಡುವುದರ ಮೂಲಕ ಸುಮಾರು 23 ಕೂಲಿ ಕಾರ್ಮಿಕರು ಕೆಲಸ ಆರಂಭಿಸಿದರು.
- Advertisement -
ಐ.ಇ.ಸಿ ಸಂಯೋಜಕ ಭೀಮರಾಯ ಚೌಧರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಸಹಾಯಕರು ಶಂಕರ ಪೂಜಾರಿ, ಬಿ.ಎಫ್.ಟಿ. ಎಮ್ ಎಮ್.ಚೌಧರಿ ಹಾಗೂ ಕಾಯಕ ಬಂದು ಶಾಂಭವಿ ಇದ್ದರು.