ಶ್ರೀ ಶಿವಬೋಧರಂಗ ಪ.ಪೂ. ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಹಾಗೂ ರಸ್ತೆ ಸುರಕ್ಷತಾ ನಿಯಮ ಅರಿವು ಕಾರ್ಯಕ್ರಮ

Must Read

ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಾದಕ ವಸ್ತುಗಳ ವ್ಯಸನ ವಿರೋಧಿ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಇಂದಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯ ಕಳೆದುಕೊಳ್ಳುವುದು ಮನೆಯಲ್ಲಿ ಜಗಳ ಕಳ್ಳತನ ಸಮಾಜದಲ್ಲಿ ದುರ್ವರ್ತನೆ ಮಾಡುತ್ತಿದ್ದಾರೆ ಶಿಕ್ಷಣದ ಹಂತದಲ್ಲಿ ಈ ಹವ್ಯಾಸಗಳಲ್ಲಿ ವಿದ್ಯಾರ್ಥಿಗಳು ತೊಡಗಬಾರದೆಂದು ಮೂಡಲಗಿ ಪೊಲೀಸ್ ಠಾಣೆಯ ಪಿ.ಎಸ್.ಐ. ರಾಜು ಪೂಜೇರಿಯವರು ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಹೇಳಿದರು

ಅದರ ಜೊತೆಗೆ ರಸ್ತೆ ನಿಯಮಗಳ ಕುರಿತಾಗಿ ಹೇಳುತ್ತ, ೧೮ ವರ್ಷಕ್ಕಿಂತ ಕೆಳಗಿನ ವಿದ್ಯಾರ್ಥಿಗಳು ಪರವಾನಿಗೆ ಇಲ್ಲದೆ ವಾಹನಗಳನ್ನು ಚಲಾಯಿಸಬಾರದು ಮತ್ತು ೩ ಜನರ ಬೈಕ್ ಪ್ರಯಾಣ ಮಾಡಬಾರದು ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳ ಚಲಾವಣೆ ಮಾಡುವುದು ಅಪರಾಧ ಎಂದು ಹೇಳಿದರು

ಮದ್ಯಪಾನವನ್ನು ಸೇವಿಸಿ ವಾಹನ ಚಲಾವಣೆ ಮಾಡಬಾರದು ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು.ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಅತ್ಯಂತ ಎಚ್ಚರದಿಂದ ಬಳಸಬೇಕು ಸೈಬರ್ ಅಪರಾಧಗಳನ್ನು ತಡೆಯುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ . ಎಮ್.ಎಸ್.ಪಾಟೀಲ ವಹಿಸಿದ್ದರು. ಮತ್ತು ಉಪನ್ಯಾಸಕರಾದ ಬಿ.ಜಿ.ಗಡಾದ, ಎಸ್.ಕೆ.ಹಿರೇಮಠ, ಎಚ್.ಡಿ.ಚಂದರಗಿ, ಎಲ್.ಆರ್.ಧರ್ಮಟ್ಟಿ, ಡಾ.ಆರ್.ಪಿ.ಬಿರಾದಾರ, ಎಮ್.ಜಿ.ಹೆಬ್ಬಳ್ಳಿ, ಎಸ್.ಪಿ.ಸಣ್ಣಮೇತ್ರಿ, ಶ್ರೀಮತಿ ಎಸ್.ಕೆ.ಹಿರೇಮಠ ಹಾಗೂ ಆರ್.ಎಸ್.ಹಾದಿಮನಿ ಉಪಸ್ಥಿತರಿದ್ದರು,

ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆಯನ್ನು ಸರಸ್ವತಿ ಕೆಳಗಡೆ ಹಾಗೂ ಸಂಗಡಿಗರು ಹಾಡಿದರು. ಎಚ್.ಎಮ್.ಹತ್ತರಕಿಯವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group