- Advertisement -
ಬೀದರ್ ಜಿಲ್ಲಾ ಪೋಲೀಸ್ ರ ಭರ್ಜರಿ ಕಾರ್ಯಾಚರಣೆ
ಬೀದರ – ಗಡಿ ಜಿಲ್ಲೆ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ 8 ಲಕ್ಷ 773 ರೂ. ಮೌಲ್ಯದ 1545 ಕೆ.ಜಿ ಗಾಂಜಾ ಹಾಗೂ ನಶೆಯುಕ್ತ Nitrazepam tablet 100 strip ಹಾಗೂ codeine phosphate syrup 289 ಬಾಟಲ್ ವಶಕ್ಕೆ ಪಡೆದಿದ್ದಾರೆ.
ಬೀದರ್ ನಗರದ ಗಾಂಧಿಗಂಜ್, ಔರಾದ್, ಮನ್ನಾಏಖ್ಖೆಳ್ಳಿ ಪೊಲೀಸ್ ಠಾಣೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರ ಬಂಧನ ಮಾಡಿದರು.
- Advertisement -
ಮೂರು ಪೊಲೀಸ್ ಠಾಣೆಯಲ್ಲಿ
ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿ, ಕಾರ್ಯಾಚರಣೆ ಯಲ್ಲಿ ಭಾಗಿಯಾದ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದರು.
ವರದಿ : ನಂದಕುಮಾರ ಕರಂಜೆ, ಬೀದರ