ಋಷಿಮುನಿಗಳಿಂದಾಗಿ ಇಂದಿಗೂ ಸನಾತನ ಸಂಸ್ಕೃತಿ ಉಳಿದುಕೊಂಡಿದೆ – ಮುಕ್ತಾನಂದ ಶ್ರೀಗಳು

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಮುನವಳ್ಳಿ – ನಾವಿಂದು ಅನುಸರಿಸುತ್ತಿರುವ ಬಹುತೇಕ ಶಾಸ್ತ್ರ ಸಂಪ್ರದಾಯಗಳು,ಪಠಿಸುತ್ತಿರುವ ಶ್ಲೋಕಗಳು,ಮಂತ್ರಗಳು,ಪೌರಾಣಿಕ ಗ್ರಂಥಗಳು,ನಮ್ಮ ಧಾರ್ಮಿಕ ಚೌಕಟ್ಟುಗಳು ಇವುಗಳ ಪ್ರವರ್ತಕರು ನಮ್ಮ ಋಷಿ ಮುನಿಗಳು.ಹಿಂದಿನ ಕಾಲದಲ್ಲಿ ಇವರೇ ನಮ್ಮ ಗುರುಗಳು ಆಗಿದ್ದ ಕಾರಣ ಇಂದಿಗೂ ನಮ್ಮ ಸನಾತನ ಸಂಸ್ಕೃತಿ ಉಳಿದುಕೊಂಡು ಬಂದಿದೆ.

ಈಗ ನಾವು ಅವುಗಳನ್ನು ಸರಿಯಾಗಿ ಅಧ್ಯಯನ ಮಾಡುವುದಲ್ಲದೇ ನಮ್ಮ ಮುಂದಿನ ಪೀಳಿಗೆಗೂ ಅದನ್ನು ವರ್ಗಾಯಿಸುವ ಮೂಲಕ ನಮ್ಮ ಋಷಿ ಋಣವನ್ನು ತೀರಿಸುವುದು ಮಹತ್ವದ್ದಾಗಿದೆ.ಭಾರತೀಯ ಋಷಿಮುನಿಗಳ ಕೊಡುಗೆ ಜಗತ್ತಿನಲ್ಲಿ ಶ್ರೇಷ್ಠವಾದುದು ಎಂದು ಶ್ರೋಬ್ರನಿ ಸದ್ಗುರು ಮುಕ್ತಾನಂದ ಸ್ವಾಮೀಜಿ ಹೇಳಿದರು.

ಅವರು ಸಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಗೂಗಲ್ ಮೀಟ್ ಸತ್ಸಂಗದಲ್ಲಿ ರವಿವಾರ ಪಂಚ ಋಣಗಳ ಮಹತ್ವವನ್ನು ತಿಳಿಸುತ್ತ ಆಯುರ್ವೇದದ ಮಹತ್ವವನ್ನು ತಿಳಿಸಿದರು.

- Advertisement -

ಚರಕಸಂಹಿತೆ, ಪುರುಷ ಸೂಕ್ತ ಇತ್ಯಾದಿಗಳನ್ನು ಉದಾಹರಿಸುವ ಜೊತೆಗೆ ವಿಮಾನವನ್ನು ಕಂಡು ಹಿಡಿದ ದೃಷ್ಟಾಂತವನ್ನು ತಿಳಿಸುತ್ತ ಬೇವು, ಕರಿಬೇವು, ಜೇನುತುಪ್ಪ ಅರಿಶಿನ ಪುಡಿ ಇವುಗಳ ಮಹತ್ವವನ್ನು ಹೇಳುತ್ತ ಆಯುರ್ವೇದದ ಮೂಲಕ ಏಡ್ಸ ರೋಗವನ್ನು ಗುಣಪಡಿಸಿಕೊಳ್ಳುವ ಬಗೆಯನ್ನು ತಿಳಿಸಿದರು.

5 ಬೇವಿನ ಎಲೆ.ಅರ್ಧ ಚಮಚ ಅರಿಶಿನ ಪುಡಿ. ಒಂದು ಚಮಚ ಜೇನು ತುಪ್ಪ ಇವುಗಳ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಮಲಗುವ ಮುಂಚೆ ಪ್ರತಿ ರಾತ್ರಿ ಆರು ತಿಂಗಳ ಕಾಲ ಸೇವಿಸುವ ಮೂಲಕ ಏಡ್ಸನಂತಹ ಮಾರಕ ಕಾಯಿಲೆಯಿಂದ ಗುಣಮುಖರಾಗಬಹುದು ಎಂದು ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪೂಜ್ಯರು ತಿಳಿಸಿದರು.

ಈ ಗೂಗಲ್ ಮೀಟ್ ನಲ್ಲಿ ಮುನವಳ್ಳಿ ಸಿಂದೋಗಿ ಬೈಲಹೊಂಗಲ. ಧಾರವಾಡ, ಹುಬ್ಬಳ್ಳಿ, ದೇವರ ಹುಬ್ಬಳ್ಳಿ. ಬನಹಟ್ಟಿ, ಬಾಗಲಕೋಟೆ, ಬೆಂಗಳೂರು ಸೇರಿದಂತೆ ನಾಡಿನ ವಿವಿಧೆಡೆಯ ಸತ್ಸಂಗಿಗಳಾದ ಯಶವಂತ ಗೌಡರ,ಶ್ರೀಕಾಂತ ಮಿರಜಕರ,ಬಸವರಾಜ ಹಲಗತ್ತಿ, ಚನಬಸು ನಲವಡೆ, ಉಮಾದೇವಿ ಏಣಗಿಮಠ,ನಿರ್ಮಲಾ ಕುಂದರಗಿ, ವೀಣಾ ದಾಸಮಣಿ,ವೀರಪ್ಪ ಹುಲ್ಲೂರ,ವಿಶ್ವನಾಥ ಆರಿ,ವಸಂತ ಸಣಕಲ್, ಸುವರ್ಣಾ ಚೇತನ, ಶೈಲಾ ಮೇಟಿ, ರಾಜಶ್ರೀ ಜವಳಿ, ರಜನಿ ನಾಯ್ಕ,ಶಿವಾನಂದ ಮುನವಳ್ಳಿ, ವೈ.ಬಿ.ಕಡಕೋಳ,ವೀರಣ್ಣ ಕೊಳಕಿ,ಶಿವಾನಂದ ಸದಾಶಿವನವರ,ಸೋಮು ಗರಗದ,ಸುಜಾತಾ ಹೊನ್ನಳ್ಳಿ,ನಾಗೇಶ ಹೊನ್ನಳ್ಳಿ,ಜೀವನಗೌಡ ಪಾಟೀಲ,ಕವಿತಾ ಹೆಸರೂರ,ಗುರುರಾಜ ಹೊನ್ನಳ್ಳಿ,ಹೇಮಾವತಿ ಹೊನ್ನಳ್ಳಿ,ಮಲ್ಲಿಕಾರ್ಜುನ ಶಿವಪೇಟಿ,ಬಾಳಪ್ಪ ಸಿಂಗಾಡಿ,ಬಾಗ್ಯಶ್ರೀ ಬೆಟಗೇರಿ,ಇಂದ್ರವ್ವ ಕದಂ,ಅನುಪಮಾ ಬಡಿಗೇರ,ಅನಂತ ಅಜವಾನ ಸವಿತಾ ಕೆಂದೂರ,ಜಯಶ್ರೀ ಕುಲಕರ್ಣೀ,ಅನ್ನಪೂರ್ಣ ಲಂಬೂನವರ,ಎಸ್.ವ್ಹಿ.ಚವಡಾಪುರ ಸೇರಿದಂತೆ 50 ಕ್ಕೂ ಹೆಚ್ಚು ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ಸತ್ಸಂಗದ ಮಹತ್ವ ಕುರಿತಂತೆ ಆರುಂಧತಿ ಕುಸುಗಲ್. ಅನುಪಮಾ ಬಡಿಗೇರ.ನಾಗೇಶ ಮಾಸ್ತಮರ್ಡಿ ಯಕ್ಕುಂಡಿ ವಕೀಲರು ಹೊನ್ನುಂಗರ ಕುಟುಂಬದ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಎಲ್.ಎಸ್.ಕಂಕಣವಾಡಿ ದಂಪತಿಗಳು ಸತ್ಸಂಗದ ಹೋಸ್ಟ ಆಗಿ ಕಾರ್ಯ ನಿರ್ವಹಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಗೌರಿ ನಾಗೇಶ ಹೊನ್ನಳ್ಳಿಯಿಂದ ನುಡಿದರೆ ಮುತ್ತಿನ ಹಾರದಂತಿರಬೇಕು ಬಸವಣ್ಣನವರ ವಚನ ಗಾಯನ ಜರುಗಿತು. ಬನಹಟ್ಟಿಯಲ್ಲಿರುವ ಯಶವಂತ ಗೌಡರ ಅವರ ಪುತ್ರಿ ಲತಾ ಹುಡೇದಮನಿ ಇವರಿಂದ ಗುರು ಮಹಿಮಾ ಅಪಾರ ಮಹಿಮಾ ಗುರು ಮಹಿಮಾ ಪ್ರಾರ್ಥನೆ ಜರುಗಿತು.ವೀರಣ್ಣ ಕೊಳಕಿ ಕಾರ್ಯಕ್ರಮ ನಿರ್ವಹಿಸುವ ಜೊತೆಗೆ ಸ್ವಾಗತ ವಂದನಾರ್ಪಣೆಗೈದರು.

ವರದಿ: ವೈ.ಬಿ.ಕಡಕೋಳ

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!