ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಕಾರ್ಯ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಸವದತ್ತಿ: ತಾಲೂಕಿನ ಎಲ್ಲ ವರ್ಗದ ಪಡಿತರ ಚೀಟಿದಾರರಿಗೆ ಈ ಮೂಲಕ ಪ್ರಚುರಪಡಿಸುವುದೇನೆಂದರೆ, ರಾಜ್ಯ ಸರಕಾರವು ಎಲ್ಲ ವರ್ಗದ ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಕಾರ್ಯದ ಅವಧಿಯನ್ನು ಈ ಕೆಳಗಿನಂತೆ ವಿಸ್ತರಿಸಿರುತ್ತಾರೆ.

ದಿ. 11-09-2021 ರಿಂದ ದಿ. 15-09-2021 ದಿನಗಳಂದು ಪ್ರತಿ ದಿನ ನ್ಯಾಯಬೆಲೆ ಅಂಗಡಿಗಳ ನಿಯಮಿತ ಸಮಯದಲ್ಲಿ ಇ-ಕೆವೈಸಿ ಸಂಗ್ರಹಣೆ ಕಾರ್ಯವನ್ನು ಮುಂದುವರೆಸಲಾಗಿದೆ.

ದಿ:16-09-2021 ರಿಂದ ದಿ:30-09-2021 ದಿನಗಳಂದು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿದಿನ ಮಧ್ಯಾಹ್ನದವರೆಗೆ. 12.00 ಗಂಟೆಯಿಂದ ಸಾಯಂಕಾಲ 04.00 ಗಂಟೆಯವರೆಗೆ ಮಾತ್ರ ಇ-ಕೆವೈಸಿ ಸಂಗ್ರಹಣೆ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ.

- Advertisement -

ಆದ್ದರಿಂದ ಮೇಲಿನ ವೇಳಾಪಟ್ಟಿಯಂತೆ ತಾಲ್ಲೂಕಿನ ಎಲ್ಲಾ ಅಂತ್ಯೋದಯ ಹಾಗೂ ಪಿಹೆಚ್‍ಹೆಚ್ (ಬಿಪಿಎಲ್) ಹಾಗೂ ಎನ್‍ಪಿಹೆಚ್‍ಹೆಚ್ (ಎ.ಪಿ.ಎಲ್.) ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಭೆಟ್ಟಿ ನೀಡಿ, ಒಂದು ಬಾರಿ ಇ.ಕೆವೈಸಿ ನೀಡಲು ಮತ್ತೊಮ್ಮೆ ತಿಳಿಸಲಾಗಿದೆ. ಇದು ಪಡಿತರ ಚೀಟಿಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರು ತಮ್ಮ ನ್ಯಾಯಬೆಲೆ ಅಂಗಡಿಗೆ ಹೋಗಿ ಬೆರಳಚ್ಚು ನೀಡುವ ಪ್ರಕ್ರಿಯೆಯಾಗಿರುತ್ತದೆ. ಇ-ಕೆವೈಸಿ ಸೇವೆಯು ಉಚಿತ ಸೇವೆಯಾಗಿರುತ್ತದೆ. ಇದಕ್ಕಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಸಂಚಾಲಕರಿಗೆ ಯಾವುದೇ ದುಡ್ಡು ನೀಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ನನಗೆ ಅಥವಾ ಆಹಾರ ಶಿರಸ್ತೇದಾರ/ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸಲು ತಿಳಿಯಪಡಿಸಿದೆ.

ತಾಲೂಕಿನಲ್ಲಿ ಪಡಿತರ ಸದಸ್ಯರ ಇ.ಕೆವೈಸಿ. ಕಾರ್ಯದಲ್ಲಿ 85.87 ಶೇಕಡಾ ಪ್ರಗತಿ ಸಾಧಿಸಿದ್ದು ಇರುತ್ತದೆ, ಇನ್ನೂ 14.13 ಶೇಕಡಾ ಪ್ರಗತಿ ಸಾಧಿಸುವುದು ಬಾಕಿ ಇರುತ್ತದೆ.

ಸರಕಾರವು ಇ.ಕೆವೈಸಿ. ನೀಡಲು ಈ ತಿಂಗಳು ಕೊನೆಯ ಅವಕಾಶ ನೀಡಿದ್ದು, ಒಂದು ವೇಳೆ ಈ ಅವಧಿಯಲ್ಲಿ ಇ.ಕೆವೈಸಿ. ನೀಡದಿದ್ದಲ್ಲಿ, ಪಡಿತರ ಚೀಟಿಯಿಂದ ಅಂತಹ ಸದಸ್ಯರುಗಳ ಹೆಸರು ಕಡಿಮೆಯಾಗಿ ಪಡಿತರ ಪದಾರ್ಥ ಬಾರದೆ ಇದ್ದಲ್ಲಿ ನೇರವಾಗಿ ಪಡಿತರ ಚೀಟಿದಾರರೇ ಜವಾಬ್ದಾರರಾಗುತ್ತಾರೆ, ಆದ್ದರಿಂದ ಇ-ಕೆವೈಸಿ ನೀಡಲು ಬಾಕಿ ಇರುವ ಪಡಿತರ ಚೀಟಿದಾರರು ಇದಕ್ಕೆ ಆಸ್ಪದ ನೀಡದೇ, ಇ.ಕೆವೈಸಿ. ನೀಡಲು ಬಾಕಿ ಇರುವ ಎಲ್ಲಾ ಪಡಿತರ ಚೀಟಿದಾರರುಗಳಿಗೆ ಈ ಮೂಲಕ ತಹಶೀಲ್ದಾರರು ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!