ಕಲ್ಪತರು ನಾಡಿನ ೩೯ನೇ ರಾಜ್ಯ ಸಮ್ಮೇಳನಕ್ಕೆ ಪ್ರಜಾವಾಣಿ ಸಂಪಾದಕರಿಂದ ಶ್ಲಾಘನೆ, ಅಭಿನಂದನೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲೆ ಇವರ ಆತಿಥ್ಯದಲ್ಲಿ ಅದ್ದೂರಿಯಾದ ೩೯ನೇ ರಾಜ್ಯ ಪತ್ರಕರ್ತರ ಸಮ್ಮೇಳನ ವಿಜೃಂಭಣೆಯಿಂದ ಉದ್ಘಾಟನೆಯಾಗಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಎರಡನೇ ದಿನದ ವಿಚಾರಗೋಷ್ಠಿ ಮಾಧ್ಯಮ ಮತ್ತು ಓದುಗರು ನೋಡುಗ ಕೇಳುಗರ ಮನಸೆಳೆಯಿತು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ರವೀಂದ್ರ ಭಟ್ ಐನೈಕ್ಯ ಅವರು ಮಾತನಾಡಿ, ನೋಡುಗರಿಂದ ಓದುಗರಿಂದ ಪತ್ರಿಕೆಗಳು ದೂರದಲ್ಲಿವೆ ರಾಜಕಾರಣಿಗಳು ಸಿನಿಮಾರಂಗದವರನ್ನ ಬಿಟ್ಟು ಪತ್ರಿಕೆಗಳು ಜನಸಾಮಾನ್ಯರ ಬಳಿ ಹೋಗಬೇಕಿದೆ ಆಗ ಓದುಗರ ಸಂಖ್ಯೆ ಹೆಚ್ಚುತದೆ, ಪತ್ರಿಕೆಗಳು ಸಿದ್ದಾಂತ, ನಡವಳಿಕೆಗಳನ್ನು ಬದಲಾಯಿಸದೆ ಹೋದರೆ ಕಷ್ಟ ಸಾಧ್ಯ, ನಾವು ವಿಶ್ವಾಸಾರ್ಹತೆ ಗಳಿಸಬೇಕು ತುಮಕೂರಿನಲ್ಲಿ ನಡೆದ ಸಮ್ಮೇಳನ ಕ್ಕೆ ತುಮಕೂರು ಕಾ.ನಿ.ಪ. ಜಿಲ್ಲಾ ಸಂಘಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಪತ್ರಕರ್ತರ ರಾಜ್ಯ ಸಮ್ಮೇಳನ ರಾಷ್ಟ್ರೀಯ ಸಮ್ಮೇಳನವಾಗಿ ಪರಿವರ್ತನೆಯಾಗಬೇಕು ಸಮ್ಮೇಳನಕ್ಕೆ ಸರ್ವಾಧ್ಯಕ್ಷರೊಬ್ಬರನ್ನು ಸೃಷ್ಟಿ ಮಾಡಬೇಕು ಎಂದು ತಿಳಿಸಿದರು.
ಗೋಷ್ಠಿ ಉದ್ಘಾಟಿಸಿ ಮಾತನಾಡಿದ ವಿಜಯವಾಣಿ ಸಂಪಾದಕ ಕೆ.ಎನ್ ಚೇನ್ನೆಗೌಡ, ಪತ್ರಿಕೋದ್ಯಮದಲ್ಲಿ ಓದುಗರ ಕೊರತೆ ಇದೆ, ಸೋಷಿಯಲ್ ಮೀಡಿಯಾ ಅಬ್ಬರ ಹೆಚ್ಚಿದೆ ಅದರಲ್ಲೂ ಸವಾಲುಗಳನ್ನು ಎದುರಿಸಿ ಪತ್ರಿಕೆಗಳು ನಡೆಯುತ್ತಿವೆ ಓದುಗರನ್ನ ಜಾಗೃತಗೊಳಿಸುವುದು ಸಂಪಾದಕರು ಜವಾಬ್ದಾರಿ ಓದುಗರಲ್ಲಿ ಸುದ್ದಿಯ ಕುತೂಹಲ ಕೆರಳಿಸುವ ಹಂತದಲ್ಲಿ ವಿಫಲರಾಗುತ್ತಿದ್ದೇವೆ ಎನ್ನುವ ಖಿನ್ನತೆ ಕಾಡುತ್ತಿದೆ ಪ್ರಿಂಟ್ ಮೀಡಿಯಾದಲ್ಲಿ ಅಭಿವೃದ್ಧಿ ಸುದ್ದಿ ನೀಡುತ್ತಿಲ್ಲ ಹಾಗಾಗಿ ಇದಕ್ಕೆ ಪರಿಹಾರ ಮತ್ತು ಅನ್ವೇಷಣೆಯಾಗಬೇಕಿದೆ ಎಂದರು.
ಗೋಷ್ಠಿಯಲ್ಲಿ ಮಾದ್ಯಮ ಓದುಗರು ಕೇಳುಗರು ಬಗ್ಗೆ ವಿಷಯ ಮಂಡನೆ ಮಾಡಿ ಮಾತನಾಡಿದ ಹಿರಿಯ ಪತ್ರಕತರು ಹಾಗೂ ಮೈಂಡ್ ಫುಲ್ ಮೀಡಿಯಾ ನಿರ್ದೇಶಕರಾದ ಅನಂತ್ ಚಿನಿವಾರ್, ತುಮಕೂರಿನ ಸಮ್ಮೇಳನ ಆತ್ಮ ವಿಮರ್ಶೆ ಮಾಡಿಕೊಳ್ಳುವ ವಿಚಾರ ಗೋಷ್ಠಿಯಾಗಿದೆ, ಮಾಧ್ಯಮ ಓದುಗರನ್ನು ಕೇಳುಗರನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಅವರ ಪ್ರತಿಕ್ರಿಯೆಯನ್ನು ಪರಿಗಣಿಸಬೇಕು ಅವರ ಪ್ರಶ್ನೆ ಅಹವಾಲು,ಸ್ವೀಕರಿಸಬೇಕು ಪತ್ರಿಕೆ ಓದುಗರನ್ನ ಜಾಣ ಜಾಣೆಯರನ್ನಾಗಿ ಕಾಣಬೇಕು, ನೋಡಗರ ಮನ ತುಂಬುವ ವಿಷಯ ವಸ್ತು ನಮ್ಮದಾಗಬೇಕು ಪತ್ರಿಕೆಗಳಿಗೆ ಕಳಿಸುವ ಓದುಗರ, ಕೇಳುಗರ ಬರಹಗಳನ್ನು, ತಲ್ಲಣಗಳನ್ನ ಪ್ರತಿ ಪತ್ರಿಕೆಗಳನ್ನು ಅಮೂಲಾಗ್ರವಾಗಿ ಓದುವ ವರ್ಗ ಇದ್ದು, ೭೦% ಜನ ಡಿಜಿಟಲ್ ನ್ಯೂಸ್, ನೋಡುವ ಜನರಿದ್ದಾರೆ ಆಡಿಯನ್ಸ್ ಗಳಲ್ಲಿ ಎರಡು ವರ್ಗವಿದೆ ಅವರಿಗೆ ತಕ್ಕಂತೆ ಮಾಧ್ಯಮ ಗಂಭೀರ ಪರಿಗಣಿಸಲಾಗುತ್ತಿಲ್ಲ, ನಮ್ಮಲ್ಲಿ ಪ್ರತಿಸ್ಪಂದನೆ ಇಲ್ಲ, ಪತ್ರಿಕೆಗಳು ಲೀಡ್ ಸ್ಟೋರಿಗಳು ಜಾಗೃತೆ ಮೂಡಿಸುವಂತಾಗಬೇಕು ಡಿಜಿಟಲ್ ಮೀಡಿಯಾದಲ್ಲಿ ಕೆಲ ಜವಾಬ್ದಾರಿಯುತ ಬದಲಾವಣೆ ಕಾಣಬೇಕಿದೆ, ಇವುಗಳಿಗೆ ನಿಯಮ, ಕಟ್ಟುಪಾಡುಗಳು ಬೇಕಿದೆ ಎಂದರು.
ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಎಂ ಎಸ್ ಸ್ವಪ್ನ ಅವರು ಮಾತನಾಡಿ ಅಕಾಡಮಿಕ್ಕಾಗಿ ಪತ್ರಕರ್ತರನ್ನ ತಯಾರು ನಾವುಗಳು ವಿಷಯವಸ್ತು ಅಧ್ಯಯನ ಶೀಲತೆಯನ್ನು ಮನಗಾಣಿಸಿದ್ದೇವೆ, ಇಂಡಿಯನ್ ರಿಡರ್ಸ್ ಶಿಪ್ ಸರ್ವೆಯಲ್ಲಿ ೫೪%ಜನ ನ್ಯೂಸ್ ಪೇಪರ್ ಗಳನ್ಮ ಒದುತಿಲ್ಲ ೧೪% ಜನ ಮಾತ್ರ ಪತ್ರಿಕೆಗಳನ್ನ ಓದುತ್ತಾರೆ ನಾವು ಓದಗರನ್ನ ವಯಸ್ಸಿನ, ಬಾಷೆಯ ವಿಚಾರದ ಮೇಲೆ ಅಳೆಯ ಬೇಕಾಗುತ್ತದೆ, ಪತ್ರಿಕೋದ್ಯಮದಲ್ಲಿ ಅಭಿವೃದ್ಧಿ ವಿಷಯದ ಕೊರತೆ ಇದೆ ತುಂಬಾ ವಿಚಾರ ರಾಜಕೀಯ ವಾಗಿದ್ದು ವೈಭವೀಕರಣ ಹೆಚ್ಚಿದೆ ಪತ್ರಿಕೆಗಳಲ್ಲಿ ಕ್ವಾಲಿಟಿ ಸುದ್ದಿಯ ಕೊರತೆವಿದೆ ಇಂದು ಮಾಧ್ಯಮ ವನ್ನು ಬೆರೆಯ ವರ್ಗ ಅಳುತ್ತಿದೆ ಉದ್ಯಮ ರೀತಿಯಲ್ಲಿ ನಡೆಯುತ್ತಿದೆ ಇದು ಸಂಶೋಧನೆ ಯಿಂದ ಹೊರ ಬಿದಿದೆ ಓದುಗರ, ಕೇಳಗರ ನೋಡಗರ ಅಭಿಪ್ರಾಯಕ್ಕೆ ತಕ್ಕಂತೆ ನಾವು ಸ್ಪಂದನೆ ನೀಡುತ್ತಿಲ್ಲ ಹೀಗಾಗಿ ಭಾಷೆಯ ಕುರಿತಾಗಿ ಸಾಕಷ್ಟು ಸುಧಾರಣೆಯಾಗಬೇಕು ಎಂದು ತಿಳಿಸಿದರು.
ವಿಚಾರ ಗೋಷ್ಠಿಯಲ್ಲಿ ಉಗಮ ಶ್ರೀನಿವಾಸ್ ಮತ್ತು ಕುಚ್ಚಂಗಿ ಪ್ರಸನ್ನ ತುಮಕೂರು ವಿವಿ ಸಿಬಂತಿ ಪದ್ಮನಾಬ್ ಇವರು ಪ್ರತಿಕ್ರಿಯಿಸಿದರು ಮರಿಯಪ್ಪ, ಶಿವನಂದ ತಗಡೂರು, ಚಿ.ನಿ.ಪುರುಷೋತ್ತಮ್, ಟಿ.ಇ.ರಘು ರಾಮ್ ಇದ್ದರು.