spot_img
spot_img

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ ೩.೯ ತೀವ್ರತೆ ದಾಖಲು

Must Read

- Advertisement -

ವಿಜಯಪುರ – ಶನಿವಾರ ತಡರಾತ್ರಿ ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಭೂಮಿ ನಡುಗಿದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ ದಾಖಲಾದ ಲಘು ತೀವ್ರತೆ ಭೂಕಂಪ ಎಂಬುದನ್ನು ಜಿಲ್ಲಾಡಳಿತ ದೃಢೀಕರಿಸಿದೆ.

ಭೂಕಂಪನ ಅಗಿದ್ದು ರಿಕ್ಟರ್ ಮಾಪಕದಲ್ಲಿ ದಾಖಲು ೩.೯ ತೀವ್ರತೆಯ ಭೂಕಂಪನ ದಾಖಲಾಗಿದೆ.ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂದುವಾಗಿತ್ತು. ಕೆ.ಎಸ್.ಎನ್. ಡಿ.ಎಂ.ಸಿ. ಮೂಲಕ ಮಾಹಿತಿ ಸಂಗ್ರಹಿಸಿದೆ ಎಂದು ಜಿಲ್ಲಾಧಿಕಾರಿ ಸುನಿಲಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಬಹುತೇಕ ಎಲ್ಲ ಕಡೆ ಶನಿವಾರ ರಾತ್ರಿ೧೧-೪೭, ೧೧-೪೮ ರ ಮಧ್ಯಾವಧಿಯಲ್ಲಿ ೩೦ ಸೆಕೆಂಡ್ ಅಂತರದಲ್ಲಿ ಎರಡು ಬಾರಿ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿಸಿ ಭೂಕಂಪನದ ಸ್ಪಷ್ಟ ಅನುಭವ ನೀಡಿದೆ.

- Advertisement -

ಭೂಕಂಪನ ಆಗುತ್ತಲೇ ಮನೆಗಳಲ್ಲಿ ಮಲಗಿದ್ದವರನ್ನು ಅಲುಗಾಡಿಸಿ ಎಬ್ಬಿಸಿದ್ದು, ಮನೆಗಳಲ್ಲಿನ ಪಾತ್ರೆ ಸೇರಿದಂತೆ ಹಲವು ವಸ್ತುಗಳು ಮೇಲಿಂದ ಕೆಳಗೆ ಬಿದ್ದಿವೆ. ಕೂಡಲೇ ಜನರು ಮಕ್ಕಳು, ವೃದ್ಧರೊಂದಿಗೆ ಮನೆ ಬಿಟ್ಡು ಹೊರಗೋಡಿ ಬಂದಿದ್ದಾರೆ. ಇದೇವೇಳೆ ಮಳೆ ಸುರಿಯಲು ಆರಂಭಿಸಿದರೂ ಲೆಕ್ಕಿಸದೇ ಜೀವ ಭಯದಲ್ಲು ಹಲವು ಹೊತ್ತು ಬೀದಿಯಲ್ಲೇ ಕಳೆದಿದ್ದಾರೆ.

ವಿಜಯಪುರ ಜಿಲ್ಲೆ ಮಾತ್ರವಲ್ಲದೇ ನೆರೆಯ ಕಲಬುರಗಿ ಜಿಲ್ಲೆಯ ಅಫಜಲಪುರ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮಹಾರಾಷ್ಟ್ರ ರಾಜ್ಯದ ಸೋಲಾಪುರ ಭಾಗದಲ್ಲೂ ಭೂಕಂಪನ ಸಂಭವಿಸಿದ್ದಾಗಿ ವರದಿಯಾಗಿದೆ.

- Advertisement -
- Advertisement -

Latest News

ನಮ್ಮ ಊರ ಜಾತ್ರೆಯೊಂದನ್ನು ನಿಮ್ಮ ಬದುಕಿನ ಯಾತ್ರೆಗೆ ಹೋಲಿಸುತ್ತ….

ಹಾಯ್, ಹಲೋ, ನಮಸ್ಕಾರ...ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ...
- Advertisement -

More Articles Like This

- Advertisement -
close
error: Content is protected !!
Join WhatsApp Group