ಭೂಕಂಪನ; ಆತಂಕದಲ್ಲಿ ಸಿಂದಗಿ ಜನರು

Must Read

ಸಿಂದಗಿ: ಸಿಂದಗಿ ತಾಲೂಕಿನಲ್ಲಿ ಭೂಮಿ ಶಬ್ದದಿಂದ ಕಂಪಿಸಿದ ಅನುಭವವಾಗಿದ್ದು, ಆತಂಕಗೊಂಡ ಜನತೆ ಮನೆ ಬಿಟ್ಟು ಹೊರಗಡೆ ಬಂದ ಘಟನೆ ವರದಿಯಾಗಿದೆ.

ನಸುಕಿನಜಾವ ಭೂಮಿ ಕಂಪನದಿಂದ ಜನತೆ ಆತಂಕಗೊಂಡಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.

ನಸುಕಿನಜಾವ 4:30ಕ್ಕೆ 4.55ಕ್ಕೆ, 5.10, 5.15, ಜೋರಾಗಿ ಭೂಮಿ ಕಂಪಿಸಿದ ಅನುಭವ ಆಗಿದ್ದು. ಮತ್ತೆ ನಸುಕಿನ 5:25 ರ ಸಮಯದಲ್ಲಿ ಮನೆಯಲ್ಲಿನ ಪಾತ್ರೆಗಳು ಅಲುಗಾಡಿ ಹಾಗೂ ಭೂಮಿಯಿಂದ ಶಬ್ಧ ಹೊರಹೊಮ್ಮಿದ ಅನುಭವ ಆಗಿದೆ.ಗಾಬರಿಗೊಂಡ ಜನತೆ ಮನೆಯಿಂದ ಹೊರಗೆ ಓಡಿ ಬಂದಿದ್ದು.

ಬಂದಾಳ ರಸ್ತೆ,ಗೋಲಿಬಾರ ಮಡ್ಡಿ, ಜ್ಯೋತಿ ನಗರ, ಶಾಂತವೀರ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕಂಪಿಸಿದ ಅನುಭವ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.ಕಳೆದ ತಿಂಗಳು ಜಿಲ್ಲೆಯ ಹಲವು ಕಡೆಗಳಲ್ಲಿ ಮಧ್ಯರಾತ್ರಿ ಇದೆ ತರಹ ಭೂಮಿ ಕಂಪಿಸಿ ಶಬ್ಧ ಉಂಟಾಗುತ್ತಿರುವುದನ್ನು ಗಮನಿಸಿದರೆ ಕಳೆದ 1992ರಲ್ಲಿ ಮಧ್ಯ ರಾತ್ರಿ ಇಡೀ ಭೂಮಂಡಲವೇ ಅಲುಗಾಡಿದ ಅನುಭವ ಮರುಕಳಿಸಿದಂತಾಗಿದೆ ಎಂದು ಹೇಳಬಹುದಾಗಿದೆ

Latest News

ಮಹಾದೇವಿಯಕ್ಕಗಳ-೧೫ನೇ ಸಮ್ಮೇಳನ

ಕಲಬುರಗಿ- ಕಲಬುರಗಿ ಬಸವ ಸಮಿತಿಯ ಅಕ್ಕನ ಬಳಗವು ಸತತವಾಗಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ `ಮಹಾದೇವಿಯಕ್ಕಗಳ ೧೫ನೇ ಸಮ್ಮೇಳನ' ಇದೇ ತಿಂಗಳ ದಿನಾಂಕ ೧೩ ಮತ್ತು ೧೪...

More Articles Like This

error: Content is protected !!
Join WhatsApp Group